ಅಸ್ಸಾಂ | ರಾಹುಲ್ ಗಾಂಧಿಗೆ ದೇವಸ್ಥಾನ ಪ್ರವೇಶ ನಿರಾಕರಣೆ; ಕಾಂಗ್ರೆಸ್ ಪ್ರತಿಭಟನೆ

ನವದೆಹಲಿ: ಭಾರತ್ ಜೋಡೋ ನ್ಯಾಯ್ ಯಾತ್ರೆಗೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಬೇಕಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪ್ರವೇಶ ನಿರಾಕರಿಸಿದ ಘಟನೆ ಸೋಮವಾರ ಅಸ್ಸಾಂನ ಶ್ರೀ ಶ್ರೀ ಶಂಕರ ದೇವ್ ಸತ್ರ ದೇವಸ್ಥಾನಲ್ಲಿ ನಡೆದಿದೆ. ಬಾಬರಿ ಮಸೀದಿ ಒಡೆದು ನಿರ್ಮಿಸಲಾಗಿರುವ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಮುಗಿದ ನಂತರವೆ ಒಳಗೆ ಪ್ರವೇಶಿಸಬಹುದು ಎಂದು ದೇವಸ್ಥಾನದ ಟ್ರಸ್ಟ್ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅಸ್ಸಾಂನ ಬೋರ್ದುವಾದಲ್ಲಿರುವ ಶ್ರೀ ಶ್ರೀ ಶಂಕರ ದೇವ್ ಸತ್ರ ದೇವಸ್ಥಾನಕ್ಕೆ ದೇವಾಲಯದ ಟ್ರಸ್ಟ್‌ ಪ್ರವೇಶ ನಿರಾಕರಿಸಿದ್ದು, ಮಧ್ಯಾಹ್ನ 3 ಗಂಟೆಯ ನಂತರ ಬರಲು ಹೇಳಿದೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಬಹುಷಃ ಈಗ ದೇವಸ್ಥಾನಕ್ಕೆ ಯಾರು ಭೇಟಿ ನೀಡಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ | ದಲಿತ ಎಂಬ ಕಾರಣಕ್ಕೆ ಹೋಟೆಲ್‌ನಲ್ಲಿ ಊಟ ನಿರಾಕರಣೆ

ದೇಶಸ್ಥಾನದಲ್ಲಿ ಪೂಜೆಗಾಗಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ನ್ಯಾಯ್ ಯಾತ್ರೆಗೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಪ್ರವೇಶ ನಿರಾಕರಿಸಲಾಗಿದ್ದು, ಘಟನೆಯ ವೀಡಿಯೋದಲ್ಲಿ ಅವರು ಭದ್ರತಾ ಅಧಿಕಾರಿಯನ್ನು ಪ್ರಶ್ನಿಸುತ್ತಿರುವುದು ದಾಖಲಾಗಿದೆ. “ಏನು ಸಮಸ್ಯೆ? ನಾನು ಹೋಗಿ ಬ್ಯಾರಿಕೇಡ್‌ಗಳನ್ನು ನೋಡಿ ಬರಲೆ? ನನ್ನನ್ನು ದೇವಸ್ಥಾನದೊಳಗೆ ಬಿಡದಿರಲು ನಾನು ಏನು ತಪ್ಪು ಮಾಡಿದ್ದೇನೆ? ದೇವಸ್ಥಾನಕ್ಕೆ ಭೇಟಿ ಮಾಡಲು ನಮ್ಮನ್ನು ಆಹ್ವಾನಿಸಲಾಯಿತು ಆದರೆ ಈಗ ಅವರು ನಮಗೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ” ಎಂದು ಹೇಳಿದ್ದಾರೆ.

 

ಪಕ್ಷವು ಬಲವಂತವಾಗಿ ಏನನ್ನೂ ಮಾಡಲು ಹೋಗುವುದಿಲ್ಲ ಮತ್ತು ಯಾತ್ರೆಯನ್ನು ಮುಂದುವರಿಸುತ್ತದೆ ಎಂದ ಅವರು, ಯಾರು ದೇವಸ್ಥಾನಕ್ಕೆ ಭೇಟಿ ನೀಡಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಈಗ ನಿರ್ಧರಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. “ಬಹುಶಃ, ಇಂದು, ಈ ದೇಶದಲ್ಲಿ ಒಬ್ಬ ವ್ಯಕ್ತಿ ಮಾತ್ರ ದೇವಸ್ಥಾನಕ್ಕೆ ಹೋಗಬಹುದು” ಎಂದು ಅವರು ಅಯೋಧ್ಯೆ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

ಇದನ್ನೂ ಓದಿ: ಸಾಂವಿಧಾನಿಕ ಜವಾಬ್ದಾರಿಯನ್ನು ಎತ್ತಿಹಿಡಿಯಲು ಆಹ್ವಾನ ನಿರಾಕರಣೆ – ಸಿಎಂ ಪಿಣರಾಯಿ ವಿಜಯನ್ ಪುನರುಚ್ಛಾರ

ಘಟನೆಯನ್ನು ವಿರೋಧಿಸಿ ಮಹಿಳಾ ಕಾಂಗ್ರೆಸ್ ಹೈಬೋರಗಾಂವ್‌ನಲ್ಲಿ ಪ್ರತಿಭಟನೆ ನಡೆಸಿದ್ದು, ರಾಹುಲ್ ಗಾಂಧಿ ಅವರ ಪ್ರತಿಭಟನೆಗೆ ಸಾಥ್ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ನಾವು ಪ್ರಜಾಪ್ರಭುತ್ವ ದೇಶದಲ್ಲಿ ವಾಸಿಸುತ್ತಿದ್ದೇವೆ. ಆದರೆ ಇಲ್ಲಿನ ಸ್ಥಳೀಯ ಸಂಸದ ಗೌರವ್ ಗೊಗೊಯ್ ಅವರನ್ನೂ ನಿಲ್ಲಿಸಲಾಗುತ್ತಿದೆ. ಇದು ಅನ್ಯಾಯ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಜನವರಿ 11 ರಂದು ದೇವಸ್ಥಾನಕ್ಕೆ ಭೇಟಿ ನೀಡಲು ಬಟದ್ರವ ಥಾನ್ ಆಡಳಿತದಿಂದ ಅನುಮತಿ ಪಡೆದಿದ್ದರು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದ 224 ಕ್ಷೇತ್ರಗಳ ಮತದಾರರ ಪಟ್ಟಿ ಪ್ರಕಟ : 5.37 ಕೋಟಿ ಮತದಾರರು

ರಾಮ ಮತ್ತು ಸ್ಥಳೀಯ ದೇವತೆಗಳ ನಡುವಿನ ಸ್ಪರ್ಧೆಯನ್ನು ತಪ್ಪಿಸಲು ದೇವಸ್ಥಾನಕ್ಕೆ ಭೇಟಿ ನೀಡದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಈ ಹಿಂದೆ ರಾಹುಲ್ ಗಾಂಧಿಗೆ ಕೇಳಿದ್ದರು ಎಂದು ವರದಿಯಾಗಿದೆ.

ರಾಹುಲ್ ಗಾಂಧಿಯವರ ನಂಬಿಕೆಗೆ ಅಡ್ಡಿಯಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯೆ ಸುಪ್ರಿಯಾ ಶ್ರೀನಾಟೆ ಅಸ್ಸಾಂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನಾವು ಶಾಂತಿಯುತವಾಗಿ ದೇಗುಲಕ್ಕೆ (ಸಂತ ಶ್ರೀಮಂತ ಶಂಕರದೇವರ ಜನ್ಮಸ್ಥಳ) ಹೋಗಲು ಬಯಸಿದ್ದೇವೆ. ಅವರು ಯಾವಾಗಲೂ ನಮ್ಮ ಮತ್ತು ನಮ್ಮ ದೇವರ ನಡುವೆ ಮಧ್ಯವರ್ತಿಯಾಗಲು ಪ್ರಯತ್ನಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.

ವಿಡಿಯೊ ನೋಡಿ: ಪ್ರಧಾನಿ ಮೋದಿಯವರ ‘ರಾಮಜಪ’ ರಾಜಕಾರಣ ಭಾರತವನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ? Janashakthi Media

Donate Janashakthi Media

Leave a Reply

Your email address will not be published. Required fields are marked *