Asia Cup 2023: ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ್ ತಂಡಕ್ಕೆ ಭರ್ಜರಿ ಜಯ

ಮುಲ್ತಾನ್‌: 15 ವರ್ಷಗಳ ಬಳಿಕ ತವರಿನಲ್ಲಿ ಏಷ್ಯಾಕಪ್‌ ಪಂದ್ಯವನ್ನಾಡಿದ ಪಾಕಿಸ್ತಾನ, ನೇಪಾಳ ವಿರುದ್ಧ 238 ರನ್‌ ಗೆಲುವು ಸಾಧಿಸುವ ಮೂಲಕ ಈ ಸಲದ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ನಾಯಕ ಬಾಬರ್‌ ಆಜಂ ಹಾಗೂ ಇಫ್ತಿಕಾರ್ ಅಹ್ಮದ್‌ರ ಶತಕ, ಬೌಲರ್‌ಗಳ ಸಂಘಟಿತ ಪ್ರದರ್ಶನ ಪಾಕಿಸ್ತಾನಕ್ಕೆ 2 ಅಂಕ ತಂದುಕೊಟ್ಟಿದೆ.

ನಿರೀಕ್ಷೆಯಂತೆ ಪಂದ್ಯ ಏಕಪಕ್ಷೀಯವಾಗಿ ನಡೆಯಿತು. ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ಆರಂಭಿಕ ಆಘಾತ ಕಂಡರೂ, ಬಾಬರ್‌ ಹಾಗೂ ಇಫ್ತಿಕಾರ್‌ರ 214 ರನ್‌ ಜೊತೆಯಾಟ ತಂಡ 6 ವಿಕೆಟ್‌ಗೆ 342 ರನ್‌ಗಳ ಬೃಹತ್‌ ಮೊತ್ತ ಪೇರಿಸಲು ನೆರವಾಯಿತು.

ನೇಪಾಳದ ಇನ್ನಿಂಗ್ಸ್‌ ಮೊದಲ 2 ಓವರ್‌ಗಳಲ್ಲೇ ಹಳಿ ತಪ್ಪಿತು. ಮೊದಲ ಓವರ್‌ನಲ್ಲೇ ಶಾಹಿನ್‌ ಶಾ ಅಫ್ರಿದಿ 2 ವಿಕೆಟ್‌ ಉರುಳಿಸಿದರೆ, 2ನೇ ಓವರಲ್ಲಿ ನಸೀಂ ಶಾ ಮತ್ತೊಂದು ವಿಕೆಟ್‌ ಕಿತ್ತರು. 14 ರನ್‌ಗೆ ನೇಪಾಳ 3 ವಿಕೆಟ್‌ ಕಳೆದುಕೊಂಡಿತು.

ಆರಿಫ್‌ ಶೇಕ್‌(26) ಹಾಗೂ ಸೋಮ್ಪಾಲ್‌ ಕಮಿ(28) ನಡುವೆ 4ನೇ ವಿಕೆಟ್‌ಗೆ 59 ರನ್‌ ಜೊತೆಯಾಟ ಮೂಡಿಬಂದಿದ್ದು ನೇಪಾಳಕ್ಕೆ ಸಮಾಧಾನ ತಂದಿತು. ಮಧ್ಯ ಓವರ್‌ಗಳಲ್ಲಿ ಹ್ಯಾರಿಸ್‌ ರೌಫ್‌ ಮಾರಕ ದಾಳಿ ನಡೆಸಿದರೆ, ಸ್ಪಿನ್ನರ್‌ ಶದಾಬ್‌ ಖಾನ್‌ 4 ವಿಕೆಟ್‌ ಕಬಳಿಸಿದರು. ನೇಪಾಳ 23.4 ಓವರಲ್ಲಿ 104 ರನ್‌ಗೆ ಆಲೌಟ್‌ ಆಯಿತು.

ಪಂದ್ಯದ ಚಿತ್ರಣ ಬದಲಿಸಿದ ಬಾಬರ್-ಇಫ್ತಿಕರ್: ಪಾಕಿಸ್ತಾನ್ ತಂಡವು ಆರಂಭಿಕ ಆಘಾತಕ್ಕೆ ಒಳಗಾದರೂ ಆ ಬಳಿಕ ಕಣಕ್ಕಿಳಿದ ಬಾಬರ್ ಆಝಂ ಹಾಗೂ ಇಫ್ತಿಕರ್ ಅಹ್ಮದ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಹಮ್ಮದ್ ರಿಝ್ವಾನ್ 44 ರನ್​ಗಳ ಕೊಡುಗೆ ನೀಡಿದರು. ಆದರೆ ಕೇವಲ 4 ರನ್​ಗೆ ವಿಕೆಟ್ ಒಪ್ಪಿಸಿ ಆಘಾ ಸಲ್ಮಾನ್ ನಿರಾಸೆ ಮೂಡಿಸಿದರು.

ಐದನೇ ವಿಕೆಟ್​ಗೆ ಜೊತೆಯಾದ ಬಾಬರ್ ಆಝಂ ಹಾಗೂ ಇಫ್ತಿಕರ್ ಬರೋಬ್ಬರಿ 214 ರನ್​ಗಳ ಜೊತೆಯಾಟವಾಡಿದರು. ಈ ವೇಳೆ ಬಾಬರ್ ಆಝಂ 109 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ 131 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 151 ರನ್​ ಬಾರಿಸಿ ನಿರ್ಗಮಿಸಿದರು.

ಸ್ಕೋರ್‌: 
ಪಾಕಿಸ್ತಾನ 50 ಓವರಲ್ಲಿ 342/6 (ಬಾಬರ್‌ 151, ಇಫ್ತಿಕಾರ್‌ 109*, ಸೋಮ್ಪಾಲ್‌ 2-85)
ನೇಪಾಳ 23.4 ಓವರಲ್ಲಿ 104/10 (ಸೋಮ್ಪಾಲ್‌ 28, ಆರಿಫ್‌ 26, ಶದಾಬ್‌ 4-27, ರೌಫ್‌ 2-16, ಶಾಹೀನ್‌ 2-27)
ಪಂದ್ಯಶ್ರೇಷ್ಠ: ಬಾಬರ್‌ ಆಜಂ

ಲಂಕಾ ಬಾಂಗ್ಲಾ ಪಂದ್ಯ : ಏಷ್ಯಾಕಪ್ ಟೂರ್ನಿಯಲ್ಲಿಂದು ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಬಾಂಗ್ಲಾದೇಶ ತಂಡ ಸೆಣಸುತ್ತಿವೆ. ತವರಿನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಶ್ರೀಲಂಕಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿರುವ ಶ್ರೀಲಂಕ ಏನು ಚಮತ್ಕಾರ್‌ ಮಾಡಬಹುದು ಎಂಬ ಕುತೂಹಲ ಎದುರಾಗಿದೆ.

ಇನ್ನು ಬಾಂಗ್ಲಾದೇಶಕ್ಕೂ ಗಾಯಾಳುಗಳ ಸಮಸ್ಯೆ ಕಾಡುತ್ತಿದ್ದು ಅನುಭವಿ ಬ್ಯಾಟರ್‌ ತಮೀಮ್‌ ಇಕ್ಬಾಲ್‌, ವೇಗಿ ಎಬಾದತ್‌ ಹೊಸೇನ್‌, ವಿಕೆಟ್‌ ಕೀಪರ್‌-ಬ್ಯಾಟರ್‌ ಲಿಟ್ಟನ್‌ ದಾಸ್‌ರ ಸೇವೆ ಲಭ್ಯವಿಲ್ಲ. ಮತ್ತೊಮ್ಮೆ ನಾಯಕತ್ವ ವಹಿಸಿಕೊಂಡಿರುವ ಹಿರಿಯ ಆಲ್ರೌಂಡರ್‌ ಶಕೀಬ್‌ ಅಲ್‌-ಹಸನ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಎದುರು ನೋಡುತ್ತಿದ್ದಾರೆ.

ಉಭಯ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ. ತಂಡಗಳ ಬಲಾಬಲ ಹೀಗೆದ..

ಶ್ರೀಲಂಕಾ:
ಫಥುಮ್ ನಿಸ್ಸಾಂಕ, ದಿಮುತ್ ಕರುಣರತ್ನೆ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರಾ ಸಮರವಿಕ್ರಮ, ಚರಿತ್ ಅಸಲಂಕಾ,ಧನಂಜಯ ಡಿ ಸಿಲ್ವಾ, ದಶುನ್‌ ಶನಕಾ(ನಾಯಕ), ದಶನ್ ಹೇಮಂತ, ಮಹೀಶ್ ತೀಕ್ಷಣ, ಮಥೀಶ್ ಪತಿರಣ,ಕುಶಾನ್‌ ರಜಿತಾ.

ಬಾಂಗ್ಲಾದೇಶ:
ತಂಝೀದ್ ತಮಿಮ್‌, ನಯೀಂ ಶೇಖ್, ನಜ್ಮುಲ್‌ ಹೊಸೈನ್, ತೌಹಿದ್‌ ರಿದೈ, ಶಕೀಬ್ ಅಲ್ ಹಸನ್(ನಾಯಕ), ಮುಷ್ಫಿಕುರ್ ರಹೀಂ(ವಿಕೆಟ್ ಕೀಪರ್), ಮೆಹದಿ ಹೆಸನ್‌, ಟಸ್ಕಿನ್ ಅಹಮ್ಮದ್, ಹಸನ್ ಮೊಹಮೂದ್, ಮುಸ್ತಾಫಿಜುರ್ ರೆಹಮಾನ್/ಶೌರಿಫುಲ್ ಇಸ್ಲಾಂ.

Donate Janashakthi Media

Leave a Reply

Your email address will not be published. Required fields are marked *