- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಎನ್‌ಸಿಟಿ ದೆಹಲಿ (ತಿದ್ದುಪಡಿ) ಮಸೂದೆಗೆ ಒಪ್ಪಿಗೆ
- ಬಿಜೆಪಿಯಿಂದ ಪ್ರಜಾಪ್ರಭುತ್ವ ಮತ್ತು ಒಕ್ಕೂಟದ ಮೇಲಿನ ದಾಳಿಯಾಗಿದೆ: ಅರವಿಂದ ಕೇಜ್ರಿವಾಲ್
- ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರಕಾರ ಕುರಿತು ಸುಪ್ರೀಂ ಕೋರ್ಟ್ ನ ಜುಲೈ 2018 ರ ತೀರ್ಪು
ನವದೆಹಲಿ: ಕೇಂದ್ರ ಸರಕಾರ ಹೊರಡಿಸಿರುವ ಹೊಸ ಮಸೂದೆಯು ದೆಹಲಿಯ ಎನ್‌ಸಿಟಿಯಲ್ಲಿ ‘ಸರ್ಕಾರ’ ಎಂದರೆ ‘ಲೆಫ್ಟಿನೆಂಟ್ ಗವರ್ನರ್’ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅಧಿಕಾರವನ್ನು ಹೆಚ್ಚಿಸುತ್ತದೆ ಎಂದು ಮಸೂದೆ ಹೇಳುತ್ತದೆ. ಪಾರ್ಲಿಮೆಂಟ್ ಸಂಸತ್ತಿನ ಸದನಗಳು ಕಳೆದ ವಾರ ಮಸೂದೆಯನ್ನು ಅಂಗೀಕರಿಸಿದ್ದವು. ಇದನ್ನು ಮಾರ್ಚ್ 22 ರಂದು ಲೋಕಸಭೆಯಲ್ಲಿ ಮತ್ತು ಮಾರ್ಚ್ 24 ರಂದು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ.
ಇದನ್ನು ಓದಿ : ರಾಷ್ಟ್ರ ರಾಜಧಾನಿ ವಲಯ ದೆಹಲಿ ತಿದ್ದುಪಡಿ ಮಸೂದೆಗೆ(ಎನ್‌ಸಿಟಿ)’ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ
ಭಾನುವಾರ (ಮಾರ್ಚ್ 28, 2021) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರೀಯ ರಾಜಧಾನಿ ದೆಹಲಿ (ತಿದ್ದುಪಡಿ) ಮಸೂದೆ 2021 ಕ್ಕೆ ಒಪ್ಪಿಗೆ ನೀಡಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ಅರವಿಂದ ಕೇಜ್ರಿವಾಲ್ ಅವರು ʻʻದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಮಸೂದೆಗೆ ವಿರುದ್ಧವಾಗಿದೆ ಮತ್ತು ಇದು ಭಾರತೀಯ ಜನತಾ ಪಕ್ಷವು ಪ್ರಜಾಪ್ರಭುತ್ವ ಮತ್ತು ಒಕ್ಕೂಟದ ಮೇಲಿನ ಆಕ್ರಮಣ ಎಂದು ಕರೆದಿದೆ.
ದೆಹಲಿ ಮುಖ್ಯಮಂತ್ರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (ಮಸೂದೆಯನ್ನು ವಿರೋಧಿಸಿದವರು) ರವರ ಟ್ವೀಟ್ ಗೆ ಉತ್ತರಿಸುವಾಗ, “ಪ್ರಜಾಪ್ರಭುತ್ವ ಮತ್ತು ಫೆಡರಲಿಸಂ ವಿರುದ್ಧ ಬಿಜೆಪಿ ನಡೆಸಿದ ದಾಳಿಯಾಗಿದೆ. ದೆಹಲಿ ಜನರನ್ನು ಬೆಂಬಲಿಸಿದ್ದಕ್ಕಾಗಿ ಪಿಣರಾಯಿ ವಿಜಯನ್ ಜಿ ಅವರಿಗೆ ಧನ್ಯವಾದಗಳು” ಎಂದು ಹೇಳಿದರು.
Thank you @vijayanpinarayi ji for supporting the people of Delhi against BJP's assault on democracy and federalism. https://t.co/BFgARJyo0o
— Arvind Kejriwal (@ArvindKejriwal) March 28, 2021
ಇದನ್ನು ಓದಿ : ʼʼಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೆ” ಟ್ರೋಲ್ ಆದ ಮೋದಿ ಹೇಳಿಕೆ
ದೆಹಲಿ (ಮತ್ತು) ಮಸೂದೆ ನಮ್ಮ ಪ್ರಭುತ್ವದ ತತ್ವಗಳು ಮತ್ತು ರಾಜ್ಯಗಳ ಹಕ್ಕುಗಳಿಗೆ ಧಕ್ಕೆ ತರುತ್ತದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ರಾಜ್ಯ ಸರ್ಕಾರಗಳ ಸಾಂವಿಧಾನಿಕ ಅಧಿಕಾರವನ್ನು ನಿರ್ಬಂಧಿಸುವುದು ಮತ್ತು ಸುಪ್ರೀಂಕೋರ್ಟ್ ತೀರ್ಪುಗಳ ಉಲ್ಲಂಘನೆಯನ್ನು ವಿರೋಧಿಸಬೇಕು ಎಂಬುದು ಬಿಜೆಪಿ ವಸಾಹತುಶಾಹಿಗಳ ಮನಸ್ಥಿತಿಯಾಗಿದೆ.
ಇನ್ನೊಂದೆಡೆ, ಮಸೂದೆ ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರದ ಅಧಿಕಾರಗಳ ಮಹತ್ವಾಕಾಂಕ್ಷೆಯ ಸುಪ್ರೀಂ ಕೋರ್ಟ್ ನ ಜುಲೈ 2018 ರ ತೀರ್ಪಿನ ಅಂಶಗಳು ಹೀಗಿವೆ.
ಇದನ್ನು ಓದಿ : ಕೇರಳ: ಸತತ ಎರಡನೇ ಬಾರಿ ಅಧಿಕಾರಕ್ಕೆ ಪಿಣರಾಯಿ ನೇತೃತ್ವದ ಎಡರಂಗ ಸರಕಾರ
ದೆಹಲಿ ಸರ್ಕಾರದ ಪ್ರತಿಯೊಂದು ನಿರ್ಧಾರಕ್ಕೂ ಲೆಫ್ಟಿನೆಂಟ್ ಗವರ್ನರ್ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಮತ್ತು ಅವರು ಸಚಿವರ ಪರಿಷತ್ತಿನ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು ಎಂದು ಜುಲೈ 2018 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು ಎಂಬ ಅಂಶವನ್ನು ಅರವಿಂದ ಕೇಜ್ರಿವಾಲ್ ಉಲ್ಲೇಖಿಸಿದ್ದಾರೆ.