ದೆಹಲಿ| ಇಂದು ತಮ್ಮ ನಿವಾಸವನ್ನು ತೊರೆದ ಅರವಿಂದ ಕೇಜಿವಾಲ್

ನವದೆಹಲಿ: ಇಂದು ದೆಹಲಿಯಲ್ಲಿದ್ದ ತಮ್ಮ ನಿವಾಸವನ್ನು ಮಾಜಿ ಸಿಎಂ ಅರವಿಂದ ಕೇಜಿವಾಲ್ ತೊರೆದಿದ್ದಾರೆ. ಈ ವೇಳೆ ನಿವಾಸದ ಸಿಬಂದಿಗೆ ಧನ್ಯವಾದಗಳನ್ನು ಹೇಳಿದರು. ಕೆಲವರು ಭಾವುಕರಾಗಿ ಕಣ್ಣೀರಿಟ್ಟರು. ಇಂದು

ದೆಹಲಿ 6, ಫ್ಲಾಗ್‌ಸ್ಟಾಫ್‌ ರಸ್ತೆಯಲ್ಲಿರುವ ನಿವಾಸದಿಂದ ತಮ್ಮ ಕುಟುಂಬ ಸದಸ್ಯರೊಂದಿಗೆ ಹೊರಬಂದ ಕೇಜಿವಾಲ್, ಸಾಮಾನ್ಯ ಕೆಲಸಗಾರರೊಬ್ಬರನ್ನು ಅಪ್ಪಿಕೊಂಡು ನಿವಾಸ ತೊರೆದು ಗಮನ ಸೆಳೆದರು. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಕಲುಷಿತ ನೀರು ಕುಡಿದು ಸಾವಿರಾರು ಮಂದಿ ಅಸ್ವಸ್ಥ: ಉಡುಪಿಯಲ್ಲಿ ಘಟನೆ

ಆಮ್ ಆದ್ಮ ಪಕ್ಷದ ರಾಷ್ಟ್ರೀಯ ಸಂಚಾಲಕ ಒಂಬತ್ತು ವರ್ಷಗಳಿಂದ ಇದ್ದ ಮನೆಯನ್ನು ಪತ್ನಿ, ಮಗ, ಮಗಳು ಮತ್ತು ತಂದೆ, ತಾಯಿಯೊಂದಿಗೆ ತೊರೆದು ಎರಡು ಕಾರುಗಳಲ್ಲಿ 5, ಫಿರೋಜ್‌ಶಾ ರಸ್ತೆ ಮಂಡಿ ಹೌಸ್ ಗೆ ಹೊರಟರು. ಮಂಡಿ ಹೌಸ್ ಬಂಗಲೆಯನ್ನು ಪಂಜಾಬ್‌ನ ಎಎಪಿಯ ರಾಜ್ಯಸಭಾ ಸಂಸದ ಅಶೋಕ್ ಮಿತ್ತಲ್ ಗೆ ನೀಡಲಾಗಿತ್ತು.

ಇದಕ್ಕೂ ಮುನ್ನ ಕೇಬ್ರಿವಾಲ್ ಅವರ ಪತ್ನಿ ಸುನೀತಾ ಕೇಜಿವಾಲ್ ಅವರು ಆಸ್ತಿಯ ಕೀಗಳನ್ನು ಸರ್ಕಾರಿ ಅಧಿಕಾರಿಗೆ ಹಸ್ತಾಂತರಿಸಿದರು. 6, ಫ್ಲಾಗ್‌ಸ್ಟಾಫ್ ಬಂಗಲೆಯು ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದೆ. ಕೇಜಿವಾಲ್ ಕುಟುಂಬ ಈ ಮನೆಗೆ ‘ಗೃಹ ಪ್ರವೇಶ ಮಾಡುವ ಮೂಲಕ ಪ್ರವೇಶಿಸಿದ್ದರು.

ಇದನ್ನೂ ನೋಡಿ: ಮುಡಾ ಪ್ರಕರಣ – ಸಿದ್ದರಾಮಯ್ಯ ಪರ ಜೆಡಿಎಸ್‌ ಶಾಸಕ ಭರ್ಜರಿ ಬ್ಯಾಟಿಂಗ್Janashakthi Media

Donate Janashakthi Media

Leave a Reply

Your email address will not be published. Required fields are marked *