ನಿಮ್ಮ ಮೊಬೈಲ್‌ಗೂ ಬಂತೆ ಅಲರ್ಟ್‌ ಮೆಸೇಜ್| ಕಾರಣ ಏನಿರಬಹುದು!?

ಬೆಂಗಳೂರು: ಭಾರತದಾದ್ಯಂತ ಅನೇಕ ಮೊಬೈಲ್ ಬಳಕೆದಾರರ ಮೊಬೈಲ್ ಗಳಿಗೆ ಭಾರತ ಸರ್ಕಾರ ತುರ್ತು ಧ್ವನಿಯೊಂದಿಗೆ ಸಂದೇಶವೊಂದನ್ನು ಕಳುಹಿಸಿದೆ. ಈ ಸಂದೇಶದ ಏನು ಎನ್ನುವುದು ತಿಳಿಯದೇ ಸಾರ್ವಜನಿಕರು ಕ್ಷಣ ಕಾಲ ದಂಗಾದ ಘಟನೆ ಕೂಡ ನಡೆಯಿತು. ನಿಮ್ಮ 

ಕಾರಣ ಏನಿರಬಹುದು!? ಎಂದು ಮಾಹಿತಿ ಹುಡುಕುತ್ತಾ ಹೋದಂತೆ ಈ ಕೆಳಗಿರುವ ಮಾಹಿತಿ ಲಭ್ಯವಾಗಿದೆ ಯಾರು ಕೂಡ ಗಾಬರಿಯಾಗುವ ಅವಶ್ಯಕತೆ ಇಲ್ಲ. ಯಾರು ಕೂಡ ಗಾಬರಿಯಾಗಬೇಡಿ.

ಇದನ್ನೂ ಓದಿ:ಹಿಮಾಚಲ ಪ್ರದೇಶದಲ್ಲಿ ಭೀಕರ ಮಳೆ:ಕೆಲವುಕಡೆ ಭೂಕುಸಿತ ರಾಷ್ಟ್ರೀಯ ಹೆದ್ದಾರಿ ಬಂದ್‌

ಈ ಸಂದೇಶ ಬರುವುದಕ್ಕೂ ಮೊದಲು ಹಲವರ ಮೊಬೈಲ್ ಗಳಿಗೆ ಈ ರೀತಿಯ ಸಂದೇಶವನ್ನ ಕಳುಹಿಸುವುದಾಗಿ ಮೊದಲೇ ಮೆಸೇಜ್ ಗಳನ್ನು ಕಳುಹಿಸಲಾಗಿತ್ತು. ಅದರಲ್ಲಿ “ ಪ್ರಮುಖ ಸೂಚನೆ”: ತುರ್ತು ಪರಿಸ್ಥಿತಿಯ ಕುರಿತು ನಿಮ್ಮ ಮೊಬೈಲ್ ನಲ್ಲಿ ಪರೀಕ್ಷಾ ಸಂದೇಶವನ್ನು ನೀವು ಸ್ವೀಕರಿಸಬಹುದು. ದಯವಿಟ್ಟು ಗಾಬರಿಯಾಗಬೇಡಿ, ಈ ಸಂದೇಶವು ನಿಜವಾದ ತುರ್ತುಪರಿಸ್ಥಿತಿಯನ್ನ ಸೂಚಿಸುವುದಿಲ್ಲ. ಈ ಸಂದೇಶವನ್ನು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ಯೋಜಿತ ಪ್ರಯೋಗ ಪ್ರಕ್ರಿಯೆಯಾಗಿ ಕಳುಹಿಸಲಾಗಿದೆ. ಎಂದು ತಿಳಿಸಲಾಗಿತ್ತು.

ಆ ಬಳಿಕ ಬಂದ ಸಂದೇಶದಲ್ಲಿ ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನ ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್—ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದು ಸಾರ್ವಜನಿಕರ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಲಾಗಿದೆ. ಜೊತೆಗೆ ಸಮಯ ದಿನಾಂಕವನ್ನೂ ನಮೂದಿಸಲಾಗಿದೆ.

ಇದನ್ನೂ ಓದಿ:Bengaluru Rain| ಸಂಜೆಯಾಗುತ್ತಲೇ ಬೆಂಗಳೂರಿನಲ್ಲಿ ಮಳೆ ಆರಂಭ, ರಸ್ತೆಗಳು ಜಲಾವೃತ

ವಿಭಿನ್ನ ಧ್ವನಿ ಮತ್ತು ಕಂಪನದೊಂದಿಗೆ ತುರ್ತು ಪರಿಸ್ಥಿತಿ ಕುರಿತು ಸಂದೇಶ:

ವಿಭಿನ್ನ ಧ್ವನಿ ಮತ್ತು ಕಂಪನದೊಂದಿಗೆ ತುರ್ತು ಪರಿಸ್ಥಿತಿ ಕುರಿತು ನಿಮ್ಮ ಮೊಬೈಲ್ ನಲ್ಲಿ ಪರೀಕ್ಷಾ ಸಂದೇಶವನ್ನು ನೀವು  ಸ್ವೀಕರಿಸಬಹುದು. ದಯವಿಟ್ಟು ಗಾಬರಿಯಾಗಬೇಡಿ. ಈ ಸಂದೇಶ ನಿಜವಾದ ತುರ್ತು ಪರಿಸ್ಥಿತಿ ಸೂಚಿಸುವುದಿಲ್ಲ. ಪ್ರಾಕೃತಿಕ ವಿಪತ್ತುಗಳ ಸಮಯದಲ್ಲಿ ತುರ್ತು ಸಂವಹನವನ್ನು ಹೆಚ್ಚಿಸಲು ಮತ್ತು ನಮ್ಮ ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ದೂರಸಂಪರ್ಕ ಇಲಾಖೆಯು ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ತಿಳಿದಿದೆ.

ಏನಿದು ಸೆಲ್ ಬ್ರಾಡ್​ಕ್ಯಾಸ್ಟ್ ಅಲರ್ಟ್ ಸಿಸ್ಟಂ?

ಭೂಕಂಪ, ಭೂಕುಸಿತ, ಪ್ರವಾಹ, ಸುನಾಮಿ, ಚಂಡಮಾರುತ ಇತ್ಯಾದಿ ವಿಪತ್ತುಗಳು ಎದುರಾದಾಗ ಅಥವಾ ಎದುರಾಗುವ ಸಂಭವನೀಯತೆ ಇದ್ದಾಗ ನಿರ್ದಿಷ್ಟ ಪ್ರದೇಶಗಳಲ್ಲಿರುವ ಎಲ್ಲಾ ಜನರ ಮೊಬೈಲ್​ಗಳಿಗೆ ಅಲರ್ಟ್ ಮೆಸೇಜ್​ಗಳನ್ನು ಕಳುಹಿಸುವುದು ಈ ಅತ್ಯಾಧುನಿಕ ಸಿಸ್ಟಂನ ಉದ್ದೇಶ. ವಿಪತ್ತು ಬಂದಿರುವ ಪ್ರದೇಶಕ್ಕೆ ಪ್ರವಾಸಿಗರು ಹೋಗಿದ್ದರೆ ಅವರ ಮೊಬೈಲ್​ಗೂ ಅಲರ್ಟ್ ಮೆಸೇಜ್ ಬರುತ್ತದೆ.

ಹೀಗಾಗಿ, ಒಂದೊಂದು ಪ್ರದೇಶಕ್ಕೆ ಸೀಮಿತವಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಪರೀಕ್ಷಾರ್ಥವಾಗಿ ಅಲರ್ಟ್ ಮೆಸೇಜ್​​ಗಳು ಬರಬಹುದು. ಅಧಿಕೃತವಾಗಿ ಈ ಸಿಸ್ಟಂ ಜಾರಿಗೆ ಬರುವವರೆಗೂ ಜನರು ಈ ಮೆಸೇಜ್​ಗಳನ್ನು ನಿರ್ಲಕ್ಷಿಸಬಹುದು.

ಸಂದೇಶ ಹೀಗಿರುತ್ತದೆ:

ಪ್ರಮುಖ ಸಲಹೆ: ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (DOT) ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ಸೆಲ್ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ಗಾಗಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುತ್ತಿದೆ. ಧ್ವನಿ ಮತ್ತು ಕಂಪನಗಳೊಂದಿಗೆ ನಿಮ್ಮ ಮೊಬೈಲ್ ಸಾಧನದಲ್ಲಿ ನೀವು ಪರೀಕ್ಷಾ ಅಲರ್ಟ್ ಗಳನ್ನು ಸ್ವೀಕರಿಸಬಹುದು. ಈ ಅಲರ್ಟ್ ಗಳು ಯೋಜಿತ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದೆ, ನಿಜವಾದ ತುರ್ತುಸ್ಥಿತಿಯನ್ನು ಸೂಚಿಸುವುದಿಲ್ಲ ಮತ್ತು ದಯವಿಟ್ಟು ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. 

Donate Janashakthi Media

Leave a Reply

Your email address will not be published. Required fields are marked *