ದಲಿತ ಮಹಿಳೆಯರು – ಯುವಕನ ಮೇಲೆ ಜಾತಿ ದೌರ್ಜನ್ಯ ಎಸಗಿರುವವರನ್ನು ಬಂಧಿಸಿ: ಡಿಎಚ್ಎಸ್

ನೊಂದ ದಲಿತರಿಗೆ ರಕ್ಷಣೆ ನೀಡಿ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ಮನವಿ
ಹಾಸನ: ತಾಲ್ಲೂಕು, ಕಟ್ಟಾಯ ಹೋಬಳಿಯ ಚನ್ನಂಗಿಹಳ್ಳಿ ಗ್ರಾಮದ ಕಮಲಮ್ಮ ಮತ್ತು ಆಕೆಯ ತಂಗಿ ರಾಜಮ್ಮ ಎಂಬ ದಲಿತ ಮಹಿಳೆಯರ ಮೇಲೆ ಅಣ್ಣೇಗೌಡ (ಕರಿಯಣ್ಣ) ಮತ್ತು ಆತನ ಮಗ ಹರೀಶ್ ಎಂಬುವವವರು ವ್ಯಕ್ಯ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ‌. ತಾಯಿ ಮತ್ತು ಚಿಕ್ಕಮ್ಮನ ಮೇಲೆ ಹಲ್ಲೆ ನಡೆಸುತ್ತಿದ್ದನ್ನು ಬಿಡಿಸಲು ಹೋದ ಕಿರಣ್ ಕುಮಾರ್ ಎಂಬ ದಲಿತ ಯುವಕನ ಮೇಲೂ ಹಲ್ಲೆ ನಡೆಸಿ ಜಾತಿ ದೌರ್ಜನ್ಯ ನಡೆಸಲಾಗಿದೆ ಎಂದು ಡಿಎಚ್ಎಸ್ ಜಿಲ್ಲಾ ಸಂಚಾಲಕ ಪೃಥ್ವಿ ಎಂ.ಜಿ. ಆರೋಪಿಸಿದ್ದಾರೆ.

ಕಮಲಮ್ಮ ಎಂಬ ದಲಿತ ಮಹಿಳೆ ಅದೇ ಗ್ರಾಮದ ನಂಜೇಗೌಡರ ಜಮೀನನ್ನು ವಾರಕ್ಕೆ ಪಡೆದಿದ್ದು, ದಿನಾಂಕ 22- 07- 2025 ರ ಸಂಜೆ 4.30 ಗಂಟೆಗೆ ಸಮಯದಲ್ಲಿ ದನ ಮೇಯಿಸಿಕೊಂಡು ಬರಲು ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ಆ ಜಮೀನಿನಲ್ಲಿ ಸೌದೆ ಹಾಕಿದ್ದ ಅಣ್ಣೇಗೌಡ(ಕರಿಯಣ್ಣ) ಎಂಬುವ ವ್ಯಕ್ತಿಯನ್ನು ಸೌದೆಯನ್ನು ಎತ್ತಿಕೊಳ್ಳಿ ಎಂದು‌ ಕೇಳಿದಕ್ಕೆ ಅಣ್ಣೇಗೌಡನು ಕಮಲಮ್ಮನನ್ನು ಹೊಡೆದು ಲೈಂಗಿಕ ದೌರ್ಜನ್ಯ ನಡೆಸಲು ಎಳೆದಾಡಿದ್ದು, ಅದನ್ನ ತಡೆಯಲು ಮುಂದಾಗಿದ್ದಕ್ಕೆ ಮನ ಬಂದಂತೆ ದೊಡ್ಡೆಯಿಂದ ಹಲ್ಲೆ ನಡೆಸಿದ್ದಾನೆ ಎಂದರು.

ಇದನ್ನೂ ಓದಿ: ‘ಕೆಂಪು ವಂದನೆ ಸಂಗಾತಿ’ ಭಾವೋದ್ವೇಕದ ಘೋಷಣೆಯೊಂದಿಗೆ ವಿ.ಎಸ್. ಅವರಿಗೆ ಅಂತಿಮ ವಿದಾಯ

ಹಲ್ಲೆ ಮಾಡಿದದ್ದನ್ನು ತಿಳಿದು ಕಮಲಮ್ಮನ ತಂಗಿ ರಾಜಮ್ಮ ಅಣ್ಣೇಗೌಡನ ಮನೆ ಬಳಿ ಹೋಗಿ ಪ್ರಶ್ನಿಸಿದ್ದಕ್ಕೆ ಕೀಳು ಜಾತಿಯವಳು ನನ್ನ ಮನೆಯ ಹತ್ತಿರ ಬಂದಿದ್ದೀಯ ಎಂದು ಅಣ್ಣೇಗೌಡನು ರಾಜಮ್ಮನ ಪಕಾಳಕ್ಕೆ ಬಲವಾಗಿ ಹೊಡೆದು ದೊಣ್ಣೆಯಿಂದ ಹಲ್ಲೆನಡೆಸಿದ್ದಾನೆ. ಅಣ್ಣೇಗೌಡರ ಮಗ ಹರೀಶ ಎಂಬುವವನೂ ಜೊತೆಗೆ ಸೇರಿಕೊಂಡು ಹೊಡೆದಿದ್ದಾನೆ ಎಂದು ಹೇಳಿದರು.

ಚಿಕ್ಕಮ್ಮನನ್ನು ಹೊಡೆಯುತ್ತಿದ್ದುನ್ನು ಕಂಡು ಜಗಳ ಬಿಡಿಸಲು ಹೋದ ಕಮಲಮ್ಮನ ಮಗನಾದ ಕಿರಣ್ ಕುಮಾರ್ ಎಂಬ ಯುವಕನ ಮೇಲೆಯೂ ಎರಗಿ ಹೊಡೆದಿದ್ದಾರೆ. ನಂತರ ಅಣ್ಣೇಗೌಡನಿಂದ ಹಲ್ಲೆಗೊಳಗಾಗಿ ನಿತ್ರಾಣಗೊಂಡಿದ್ದ ಕಮಲಮ್ಮನನ್ನುಅದೇ ದಿನ ಸಂಜೆ 7 ಗಂಟೆ ಸುಮಾರಿಗೆ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಆಸ್ಪತ್ರೆಯಲ್ಲಿ MLC ಮಾಡಲಾಗಿದೆ ಎಂದು ಹೇಳಿದರು.

ಮರುದಿನ ಕಮಲಮ್ಮನ ತಂಗಿ ರಾಜಮ್ಮ ಹಲ್ಲೆನಡೆಸಿರುವ ಬಗ್ಗೆ ಗೊರೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಗುರುವಾರ 24-07-2025 ಸಂಜೆ ಅಣ್ಣೇಗೌಡ(ಕರಿಯಣ್ಣ) ಮತ್ತು ಹರೀಶ್ ಎಂಬುವವರ ಮೇಲೆ ಎಫ್ಐಆರ್ ದಾಖಲಾಗಿದೆ.

ದಲಿತ ಮಹಿಳೆಯರು ಮತ್ತು ಯುವಕನ ಮೇಲಿನ ಈ ಅಮಾನವೀಯ ಜಾತಿ ದೌರ್ಜನ್ಯ ಮತ್ತು ಹಲ್ಲೆಯನ್ನು ದಲಿತ ಹಕ್ಕುಗಳ ಸಮಿತಿ- ಕರ್ನಾಟಕ (ಡಿಎಚ್ಎಸ್) ಹಾಸನ ತೀವ್ರವಾಗಿ ಖಂಡಿಸುತ್ತದೆ ಎಂದರು.

ತಪ್ಪಿತಸ್ಥ ಅಣ್ಣೇಗೌಡ (ಕರಿಯಣ್ಣ) ಹಾಗು ಹರೀಶ್ ಎಂಬುವವರನ್ನು ಕೂಡಲೆ ಪೊಲೀಸರು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತದೆ. ನೊಂದ ದಲಿತ ಮಹಿಳೆಯರು, ಯುವಕ ಮತ್ತು ಕುಟುಂಬಕ್ಕೆ ರಕ್ಷಣೆ ಹಾಗು ಪರಿಹಾರ ನೀಡಬೇಕೆಂದು DHS ಹಾಸನ‌ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.

ಹಾಸನದಲ್ಲಿ ದಿನೇ ದಿನೇ ದಲಿತರ ಮೇಲೆ ಈ ರೀತಿಯ ಜಾತಿ ದೌರ್ಜನ್ಯ, ಹಲ್ಲೆಗಳು ಹೆಚ್ಚುತ್ತಿರುವುದನ್ನು ತಡೆಗಟ್ಟಲು ಕಠಿಣ ಕ್ರಮ ವಹಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ನೋಡಿ: ಮೋಸ ಮಾಡಿದ ಸರ್ಕಾರ | ಆಗಸ್ಟ್ 5ರಿಂದ ಸಾರಿಗೆ ನೌಕರರ ಮುಷ್ಕರ Janashakthi Media

Donate Janashakthi Media

Leave a Reply

Your email address will not be published. Required fields are marked *