ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿ ಒಬ್ಬರನ್ನು ಅಪಹರಿಸಿ ನಾಲ್ವರು ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಮಾಲೀಕ ಸತೀಶ್, ರಮಣ, ಸಲ್ಮಾನ್, ರವಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸತೀಶ್ ರೆಡ್ಡಿ ಯೋಗ ಶಿಕ್ಷಕಿಯ ಬಳಿ ಯೋಗ ಕಲಿಯುವುದಕ್ಕೆ ಹೋಗುತ್ತಿದ್ದ. ನಂತರ ಶಿಕ್ಷಕಿಗೆ ಗನ್ ತರಬೇತಿಯ ಆಸೆ ತೋರಿಸಿ ಅಪಹರಿಸಿದ್ದರು.ಅರೆಬೆತ್ತಲೆ
ಬೆಂಗಳೂರಿನ ಕೆ.ಆರ್.ಪುರಂ ನಿವಾಸಿಯಾದ ಶಿಕ್ಷಕಿಯನ್ನು ಅ.23 ರಂದು ಆರೋಪಿಗಳ ಗ್ಯಾಂಗ್ ಅಪಹರಿಸಿತ್ತು. ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಧನಮಿಟ್ಟೇನ ಹಳ್ಳಿ ಬಳಿ ಜೀವಂತವಾಗಿ ಹೂತು ಹಾಕಲಾಗಿತ್ತು. ಸತ್ತಂತೆ ನಟಿಸಿದ್ದ ಶಿಕ್ಷಕಿ ಬಳಿಕ ಸ್ಥಳೀಯರಿಂದ ಬಟ್ಟೆ ಪಡೆದು ದಿಬೂರಹಳ್ಳಿ ಠಾಣೆಗೆ ಆಗಮಿಸಿದ್ದಾರ. ಕೊಲೆಗೆ ಯತ್ನ, ಅಪಹರಣ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ದೂರು ನೀಡಿದ್ದಾರೆ. ಮಹಿಳೆ ದೂರು ಆಧರಿಸಿ ಆರೋಪಿಗಳ ಪತ್ತೆಗೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸ್ ಬಳಿಕ ವಿಶೇಷ ತನಿಖಾ ತಂಡ ರಚಿಸಿ ಸದ್ಯ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ‘ಟೆಲಿಮನಸ್’ ಆಯಪ್ ಬಿಡುಗಡೆ ಮಾಡಲಿರುವ ರಾಜ್ಯ ಸರ್ಕಾರ
ಘಟನೆಯ ಹಿನ್ನೆಲೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಎಲೆಯೂರು ಗ್ರಾಮದ ನಿವಾಸಿ ವಿಶ್ವನಾಥ ಬಿನ್ ಅಂಜಿನಪ್ಪ ಅವರ ಪತ್ನಿ ಅರ್ಚನಾ. 11 ವರ್ಷಗಳ ಸಂಸಾರ ನಡೆಸಿದ ಬಳಿಕ ಎರಡು ವರ್ಷ ಹಿಂದ ಮನಸ್ತಾಪವಾಗಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಇಬ್ಬರು ಮಕ್ಕಳಿದ್ದಾರೆ. ಯೋಗ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. 2021 ರಲ್ಲಿ ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಕೆಲಸ ಮಾಡುತ್ತಿದ್ದ ಪತಿ ವಿಶ್ವನಾಥಗೆ ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ಅಪಘಾತವಾದಾಗ ಆತನ ಸ್ನೇಹಿತ ಸಂತೋಷ್ ಕುಮಾರ್ ಎಂಬಾತ ಪರಿಚಯವಾಗಿತ್ತು. ಆತ ಅರ್ಚನಾ ಜೊತೆ ಸಲುಗೆಯಿಂದ ಇದ್ದ. ಇದನ್ನು ಗಮನಿಸಿದ್ದ ಸಂತೋಷ್ ಕುಮಾರ್ ಪತ್ನಿ ಬಿಂದು ಅಸಮಾಧಾನಗೊಂಡಿದ್ದಳು. ಅರ್ಚನಾ ಯೋಗ ಕ್ಲಾಸ್‌ಗೆ ಹೋಗುತ್ತಿದ್ದ ಆಂಧ್ರದ ಮಡಕಶಿರ ಮೂಲದ ಸತೀಶ್ ರೆಡ್ಡಿ ಅವರನ್ನು ಸಂಪರ್ಕಿಸಿದ ಬಿಂದು, ಸುಪಾರಿ ಕೊಲೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.
ಬಿಂದುಶ್ರೀ ಅವರಿಂದ ಕಂತೆ ಕಂತೆ ಹಣ ಪಡೆದ ಸತೀಶ್, ಅರ್ಚನಾ ಕೊಲೆಗೆ ಖತರ್ನಾಕ್ ಪ್ಲಾನ್ ಮಾಡಿಕೊಂಡಿದ್ದ. ಮೊದ್ಲು ಅರ್ಚನಾಳ ಯೋಗ ಕ್ಲಾಸ್ ಸೇರಿ ಪರಿಚಯ ಮಾಡ್ಕೊಳ್ತಾನೆ. ಆನಂತರ ಗನ್ ಶೂಟಿಂಗ್ ತರಬೇತಿಗೆ ಹೋಗೋಣ ಬಾ ಅಂತ ಕರೆದುಕೊಂಡು ಹೋಗಿ ಇದೇ ಕಾರಲ್ಲಿ ಅರ್ಚನಾಳನ್ನ ಕರೆದೊಯ್ದಿರ್ತಾನೆ. ಅರ್ಚನಾ ಕಾರು ಹತ್ತಿದಂತೆ ಆಕೆಯ ತಲೆಗೆ ಗನ್ ಇಟ್ಟು ಕಿಡ್ನಾಪ್ ಮಾಡ್ತಾನೆ.
ಈ ವೇಳೆ ಸತೀಶ್‌ಗೆ ರಮಣ, ನಾಗೇಂದ್ರ, ರವಿಚಂದ್ರ ಎನ್ನುವವರು ಕೂಡ ಸಾಥ್ ಕೊಟ್ಟಿದ್ದಾರೆ. ಕಾರು ಮೂವ್ ಆಗ್ತಿದ್ದಂತೆ ಕಿರಾತಕರು ಅರ್ಚನಾ ಜೊತೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಮುಂದಾಗ್ತಾರೆ. ಆಗ ಅರ್ಚನಾ ವಿರೋಧ ಮಾಡ್ತಿದ್ದಂತೆ ಹಲ್ಲೆಗೈದು ಚಿಕ್ಕಬಳ್ಳಾಪುರದ ದಿಬ್ಬೂರಹಳ್ಳಿ ಬಳಿ ಕರೆದೊಯ್ದು ಹಿಗ್ಗಾಮುಗ್ಗಾ ಥಳಿಸ್ತಾರೆ. ಬಳಿಕ ಸತೀಶ್ ಚಾರ್ಚರ್ ವೈರ್‌ನಿಂದ ಕುತ್ತಿಗೆಗೆ ಹಾಕಿ ಎಳೆದಿದ್ದು, ಅರ್ಚನಾ ಪ್ರಜ್ಞೆ ತಪ್ಪಿರ್ತಾಳೆ. ಸತ್ತೇ ಹೋದ್ಲು ಅಂದ್ಕೊಂಡ ಗ್ಯಾಂಗ್, ಆಕೆಯನ್ನ ಅರೆಬೆತ್ತಲೆಗೊಳಿಸಿ ಜೀವಂತವಾಗಿ ಹೂತು ಹಾಕಿ ಎಸ್ಕೇಪ್ ಆಗಿದ್ದರು ಎಂದು ಪೊಲೀಸರು ತಿಳಿಸದ್ದಾರೆ.
ಬಂಧಿತ ಆರೋಪಿಗಳ ಪೈಕಿ ಸಂತೋಷ್ ಕುಮಾರ್ ಪತ್ನಿ ಬಿಂದು (38), ಬೆಂಗಳೂರಿನ ಕೊತ್ತನೂರು ದಿನ್ನೆಯಲ್ಲಿ ವಾಸ ಇರುವ ಆಂಧ್ರ ಪ್ರದೇಶದ ಸತೀಶ್ ಕುಮಾರ್ ಕೋಂ ಸತೀಶ್ ರೆಡ್ಡಿ, ಬೆಂಗಳೂರಿನ ಆಗ್ರಹಾರದಲ್ಲಿರುವ ರಮಣ ಅಲಿಯಾಸ್ ಮಿಸಾಲ ರಮಣ ಬಿನ್ ವೆಂಕಟರಾಮಡು (34), ಬೆಂಗಳೂರಿನ ಸರ್ಜಾಪುರದಲ್ಲಿರುವ ಆಂಧ್ರ ಮೂಲದ ನಾಗೇಂದ್ರರೆಡ್ಡಿ ಬಿನ್ ಕಿನಿಮಿರೆಡ್ಡಿ ಬಿನ್ ಶಿವಾರೆಡ್ಡಿ, ರಾಯಚೂರು ಜಿಲ್ಲೆಯ ಸಿಂಧನೂರಿನ ಉಮಾಲೂಟಿ ಗ್ರಾಮದ ರವಿಚಂದ್ರ ಬಿನ್ ಹನುಮಂತಪ್ಪ (27) ಹಾಗೂ ಅಪ್ರಾಪ್ತ ಬಾಲಕ ಸೇರಿ ಒಟ್ಟು 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ನೋಡಿ: ಸಿದ್ದರಾಮಯ್ಯ ಸರ್ಕಾರ ವಕ್ಫ್ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲು ಸೋತಿದ್ದು ಹೇಗೆ? Janashakthi Media