ʼಬೊಟ್ಟು ಯಾಕಿಟ್ಟಿಲ್ಲʼ ಎಂದಿದ್ದ ಸಂಸದ ಮುನಿಸ್ವಾಮಿ ವಿರುದ್ಧ ಸಿಡಿದೆದ್ದ ಪ್ರತಿಭಟನಾಕಾರರ ಬಂಧನ

ಕೋಲಾರ: ಮಹಿಳಾ ದಿನಾಚರಣೆಯಂದು  ಕೋಲಾರ ಸಂಸದ ಎಸ್.ಮುನಿಸ್ವಾಮಿ  ಅವರು ಮಹಿಳೆಯೊಬ್ಬರಿಗೆ ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲವೆಂದು ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿದ್ದ ವಿಚಾರಕ್ಕೆ ಸಂಬಂಧಸಿದಂತೆ ಇಂದು ವಿವಿಧ ಸಂಘಟನೆಗಳ ಮಹಿಳೆಯರು ಪ್ರತಿಭಟನೆ ನಡೆಸಿ ಆಕ್ರೋಶವನ್ನು ಹೊರಹಾಕಿದ್ದಾರೆ.

ನಗರದ ಹೊಸ ಬಸ್ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್‌ ‌ನಲ್ಲಿ ರಸ್ತೆ ತಡೆ ನಡೆಸಿದ ಸುಮಾರು 50 ರಿಂದ 60 ಜನ ಪ್ರತಿಭಟನಾಕಾರರು ಸಂಸದರ ವಿರುದ್ಧ ಧಿಕ್ಕಾರ ಹಾಕಿ, ಘೋಷಣೆ ಕೂಗಿದರು. ತಕ್ಷಣವೇ ಕೋಲಾರ ನಗರ‌ ಪೊಲೀಸರು 25 ರಿಂದ 30ಕ್ಕೂ ಹೆಚ್ಚು ಮಹಿಳೆಯರನ್ನು ವಶಕ್ಕೆ ಪಡೆದು ವ್ಯಾನ್‌ನಲ್ಲಿ ಕರೆದೊಯ್ದರು.

ಜನಶಕ್ತಿ ಮೀಡಿಯಾದೊಂದಿಗೆ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾರವರು, ಸಂಸದ ಮುನಿಸ್ವಾಮಿ ರವರು ಮಹಿಳೆಯ ಬಗ್ಗೆ ಈ ರೀತಿ ಮಾತನಾಡಿರುವುದು ಸರಿಯಲ್ಲ, ಹೆಣ್ಣು ಮಕ್ಕಳು ಹಣೆಗೆ ಬೊಟ್ಟು ಹಾಕಿಕೊಂಡಿರಿ, ಮನೆಯಲ್ಲಿಯೇ ಇರಿ ಎಂಬಿತ್ಯಾದಿ ಮಾತುಗಳು ಇಂತಹ ಮುಂದುವರಿದ ಕಾಲದಲ್ಲಿಯೂ ಮಹಿಳೆಯ ಹಕ್ಕಗಳನ್ನು ಕಸಿಯುತ್ತಿವೆ ಸಂಸದ ಮುನಿಸ್ವಾಮಿ ಅವರ ಈ ನಡೆ ಆರ್‌ಎಸ್‌ಎಸ್‌ ನ ಅಜೇಂಡವಾಗಿದೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ ಸಂಸದ ಮುನಿಸ್ವಾಮಿ ಬೇಜವಬ್ದಾರಿ ಹೇಳಿಕೆಗೆ ಎಸ್.ಎಫ್.ಐ ಆಕ್ರೋಶ

ಪ್ರತಿಭಟನೆಯಲ್ಲಿ ರೈತ ಸಂಘದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ  ಎ.ನಳಿನಿಗೌಡ, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ರತ್ಮಮ್ಮ, ಮಹಿಳಾ ಸಂಘದ ಶಾಂತಮ್ಮ  ಸೇರಿದಂತೆ ವಿವಿಧ ಸಂಘಟನೆಗಳ‌ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *