ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ನೀಡಿರುವ ನೋಟಿಸ್ ಬಗ್ಗೆ ಸಿಡಿಮಿಡಿಗೊಂಡಿರುವ ಪ್ರಿಯಾಂಕ್ ಖರ್ಗೆ ಸಿಐಡಿ ಪೊಲೀಸರು ನೋಟಿಸ್ ನೀಡಿ ಇಂದು(ಏಪ್ರಿಲ್ 25) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಈ ನೋಟಿಸ್ ಹಿನ್ನೆಲೆಯಲ್ಲಿ ಗೃಹ ಸಚಿವರ ವಿರುದ್ಧ ಹಾಗೂ ಸಿಐಡಿ ವಿರುದ್ಧ ಕಿಡಿಕಾರಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದಿವ್ಯಾ ಹಾಗರಗಿ ಎಲ್ಲಿ ಎಂಬುದು ಇನ್ನೂ ಪತ್ತೆಯಿಲ್ಲ. ಇಲ್ಲಿಯವರೆಗೆ ಅವರನ್ನು ರಕ್ಷಣೆ ಮಾಡ್ತಿರೋದು ಯಾಕೆ ? ಪ್ರಮುಖ ಆರೋಪಿ ಎಲ್ಲಿದ್ದಾರೆ ಎಂಬುದನ್ನು ಮೊದಲು ಪತ್ತೆ ಮಾಡಿ. ಅವರನ್ನು ರಕ್ಷಣೆ ಮಾಡೋ ಕೆಲಸ ಮಾಡಬೇಡಿ. ಪ್ರಕರಣದ ತನಿಖೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.
ಇದನ್ನು ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಆಡಿಯೊ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ
ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಅರೋಪಿ ದಿವ್ಯಾ ಹಾಗರಗಿ ಮನೆಗೆ ಹೋದ ಗೃಹ ಸಚಿವರು ಸನ್ಮಾನ ಮಾಡಿಸಿಕೊಂಡು, ಬಾದಾಮಿ ಗೋಡಂಬಿ ತಿಂದು ಬಂದಿದ್ದಾರೆ. ಅವರೇ ಪೊಲೀಸ್ ನೇಮಕಾತಿಯ ಮುಖ್ಯಸ್ಥರು. ಹಾಗಿದ್ದ ಮೇಲೆ ಅವರ ಮೇಲೆ ಯಾಕೆ ಎಫ್ಐಆರ್ ಮಾಡಿಲ್ಲ. ನೀವೇನು ಕತ್ತೆ ಕಾಯ್ದಿದ್ದೀರಾ ? ಕಳ್ಳೆಪುರಿ ತಿಂತಿದ್ದೀರಾ? ಗೃಹ ಸಚಿವರನ್ನು ಇನ್ನೂ ಯಾಕೆ ಈವೆರೆಗೂ ವಿಚಾರಣೆಗೆ ನಡೆಸಿಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ಇಡೀ ಇಲಾಖೆ ಶಾಮೀಲಾಗಿದೆ ಎಂದು ತಿಳಿಯಬಹುದಾ? ಈ ಪ್ರಕರಣದಲ್ಲಿ ಶಾಮೀಲಾಗಿರುವರು ಯಾರು? ಯಾಕೆ ಇನ್ನೂ ಪ್ರಮುಖರಿಗೆ ನೋಟೀಸ್ ನೀಡಲಿಲ್ಲ ಎಂದ ಪ್ರಿಯಾಂಕ್ ಖರ್ಗೆ, ನನ್ನ ಬಳಿ ಇರೋ ಸಾಕ್ಷಿ ಮತ್ತು ದಾಖಲೆ ನೀಡುವಂತೆ ಸೂಚಿಸಿದ್ದಾರೆ. ನಾನು ಎರಡು ಮೂರು ವಾರದಿಂದ ಪ್ರಸ್ತಾಪ ಮಾಡಿದ್ದೆ. ಸಿಐಡಿ ಪೊಲೀಸರು ನೋಟಿಸ್ ನೀಡಿದ್ದಾರೆ. ಇದರಿಂದಲೇ ಸರ್ಕಾರದ ಕಾರ್ಯ ವೈಖರಿ ಅರ್ಥವಾಗುತ್ತದೆ. ಇದೊಂದು ಅಸಮರ್ಥ ಸರ್ಕಾರ. ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಸಿಐಡಿ ಪೊಲೀಸರ ಬಳಿ ಮಾಹಿತಿ ಇಲ್ಲವೇ ಎಂದು ಪ್ರಶ್ನೆ ಮಾಡಿದರು.
ಇದನ್ನು ಓದಿ: ಪಿಎಸ್‌ಐ ಅಕ್ರಮ ನೇಮಕಾತಿ : ಕೋವಿಡ್‌ನಿಂದ ಮೃತಪಟ್ಟಿ ವ್ಯಕ್ತಿಯ ಮೊಬೈಲ್ ಬಳಕೆ
‘ನಾನು ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದೇನೆ. ನನಗಿಂತೂ ಮೊದಲೇ ಗೃಹ ಸಚಿವರು ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ಬಗ್ಗೆ ಸಿಐಡಿ ಪೊಲೀಸರಿಗೆ ಗೊತ್ತಿಲ್ಲವೇ? ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಸಚಿವ ಪ್ರಭು ಚವ್ಹಾಣ್ ಪತ್ರ ಬರೆಯುತ್ತಾರೆ. ಇದಾದ ಕೂಡಲೇ ನೇಮಕಾತಿ ಆದೇಶ ತಡೆ ಹಿಡಿಯುತ್ತಾರೆ. ಸದನದಲ್ಲಿ ಕೂಡ ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಪ್ರಸ್ತಾಪವಾಗಿದ್ದು, ಗೃಹ ಸಚಿವರು ಉತ್ತರಿಸುತ್ತಾರೆ. ಇಷ್ಟೆಲ್ಲಾ ಸಾಕ್ಷಿಗಳಿರುವ ಗೃಹ ಸಚಿವರನ್ನು ಯಾಕೆ ಸಿಐಡಿ ಪೊಲೀಸರು ವಿಚಾರಣೆ ನಡೆಸಿಲ್ಲ,’ ಎಂದು ಕಿಡಿ ಕಾರಿದ್ದಾರೆ.
ಇಂಟಲಿಜೆನ್ಸ್ ಅವರ ಕೆಲಸವೇನೂ?
ಅರುಣ್ ಎಂಬಾತ ಎಬಿವಿಪಿ ಕಾರ್ಯಕರ್ತ. ಅವನು ಹೇಗೆ ಆಯ್ಕೆ ಮೊದಲೇ ಸಮವಸ್ತ್ರ ಧರಿಸಿ ಓಡಾಡ್ತಾನೆ. ಅವನು ಹೇಗೆ ಆಯ್ಕೆಯಾದ? ಇದರ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ಅಡಿಯೋದಲ್ಲಿ ಹಣದ ಬಗ್ಗೆ ಮಾತಾಡ್ತಾರೆ. ಇದೆಲ್ಲವೂ ನಾನು ಸೃಷ್ಟಿ ಮಾಡಿರೋದಾ? ಈ ಇಂದೆ ಇಂಟಲ್ ಜೆನ್ಸಿ ಅಂತ ಇತ್ತು, ಬಹಳ ಮಾಹಿತಿ ಕಲೆ ಹಾಕುತ್ತಿತ್ತು. ಈಗ ಪೇಪರ್ ನೋಡಿ ಮಾಹಿತಿ ಕಲೆ ಹಾಕುತ್ತಾರೆ ಎಂದು ಹೇಳಿದರು.