ಸಂಡೂರು: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ) ಸಂಡೂರು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಸಿಐಟಿಯು, ಸಿಡಬ್ಲ್ಯೂಎಫ್‌ಐ ಸಂಘಟನೆ ಮುಖಂಡರುಗಳು ಒಳಗೊಂಡಂತೆ ತೋರಣ ಗಳಲ್ಲಿ ಗ್ರಾಮ ಸಮುದಾಯ ಆರೋಗ್ಯ ಕೇಂದ್ರ ಮುಂದಗಡೆ ಇಂದು(ಆಗಸ್ಟ್ 03) ಪ್ರತಿಭಟನೆ ಮಾಡಿದರು.
ಪ್ರತಿಭಟನೆ ಉದ್ದೇಶಿಸಿ ಡಿವೈಎಫ್‌ಐ ತಾಲ್ಲೂಕು ಅಧ್ಯಕ್ಷ ಶಿವು ಮಾತನಾಡಿ, ಸಂಘಟನೆ ಹೋರಾಟದ ಪ್ರತಿಫಲವಾಗಿ ಗ್ರಾಮಕ್ಕೆ ಆರೋಗ್ಯ ಕೇಂದ್ರದಿಂದ ಸಮುದಾಯ ಆರೋಗ್ಯ ಕೇಂದ್ರದವರಗೆ ಮಂಜೂರುಯಾಗಿ, ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೂ ಸಹ ಇನ್ನೂ ಅನೇಕ ಸಮಸ್ಯೆಗಳಿವೆ. ಈ ಹಿಂದಿನ ಹೋರಾಟದ ಪ್ರತಿಫಲವಾಗಿ ಸ್ತ್ರೀ ರೋಗ ಮತ್ತು ಮಕ್ಕಳ ತಜ್ಞರು ನೇಮಕ ಹಾಗೂ ಕೆಲವು ಬೇಡಿಕೆಗಳಾದ ಔಷಧಿಗಳು, ರಕ್ತ ಪರೀಕ್ಷೆ , ಶಸ್ತ್ರಚಿಕಿತ್ಸೆ, ಮೂಲ ಸೌಕರ್ಯಗಳು ಈಡೇರಿವೆ. ಅದೇ ರೀತಿ ಇಎನ್‌ಟಿ, ನೇತ್ರಾ, ಚರ್ಮ ತಜ್ಞರ ನೇಮಕ ಮತ್ತು ಗುತ್ತಿಗೆ ತಜ್ಞರು , ಸಿಬ್ಬಂದಿ ನೌಕರರನ್ನು ಖಾಯಂಗೊಳಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ, 24 ಗಂಟೆಗಳ ಕಾಲ ವೈದ್ಯರ ಲಭ್ಯತೆಗೆ ಜೊತೆಗೆ ವಸತಿ ವ್ಯವಸ್ಥೆ ಮಾಡಬೇಕು , ರೋಗಿ ಮತ್ತು ಸಹಾಯಕರಿಗೆ ಊಟದ ವ್ಯವಸ್ಥೆ ಉಳಿದಂತೆ ನಮ್ಮ ಹೋರಾಟದ ಮನವಿಯಾಗಿವೆ ಎಂದು ಹೇಳಿದರು.
ಅದೇ ರೀತಿ ಇನ್ನಿತರ ಅನೇಕ ವಿಷಯಗಳ ಕುರಿತು ಎ.ಸ್ವಾಮಿ ದೇವದಾಸಿ ಮಹಿಳಾ ವಿಮೋಚನಾ ಸಂಘ , ಚನ್ನಬಸಯ್ಯ ಸಿಐಟಿಯು ಸಂಚಾಲಕರು, ದೇವಣ್ಣ ಸಿಡಬ್ಲ್ಯೂಎಫ್‌ಐ ತಾಲ್ಲೂಕು ಅಧ್ಯಕ್ಷ ಇವರುಗಳು ಮಾತನಾಡಿದರು.
ಡಿವೈಎಫ್‌ಐ ಜಿಲ್ಲಾ ಮುಖಂಡ ಸ್ವಾಮಿ.ಹೆಚ್, ಕಾಲೂಬ ಮುಖಂಡರುಗಳಾದ ಕೆ.ದೆವಣ್ಣ, ಸಿದ್ದಪ್ಪ, ಪಾಂಡು, ದೇವೇಂದ್ರ ಆಚಾರ್ಯ, ಅಂಗನವಾಡಿ ಕಾರ್ಯಕರ್ತರಾದ ಶಂಕ್ರಮ್ಮ, ಜಯಪ್ರದಾ, ಮಲ್ಲಮ್ಮ, ಪ್ರತಿಬಾ, ತಿಮ್ಮಕ್ಕ, ಡಿವೈಎಫ್‌ಐ ಮುಖಂಡರಾದ ಅಮರ್, ಹುಲಿ, ಲೋಕೇಶ್, ಇತರರು ಭಾಗವಹಿಸಿದ್ದರು.
ಬೇಡಿಕೆಗಳ ಮನವಿ ಪತ್ರವನ್ನು ಆಡಳಿತ ಅಧಿಕಾರಿಗಳ ಮೂಲಕ ಜಿಲ್ಲಾ ಆರೋಗ್ಯ ವೈದಾಧಿಕಾರಿಗಳಿಗೆ ನೀಡಲು ಮನವಿ ಮಾಡಿಕೊಂಡರು.