ಉಚಿತ ಆರೋಗ್ಯ ಮತ್ತು ಉನ್ನತ ಶಿಕ್ಷಣ ಸೇರಿದಂತೆ ದೇಶದ ಕಷ್ಟಪಟ್ಟು ಗೆದ್ದ ಅನೇಕ ವಿಜಯಗಳು ಮಿಲಿ ಸರ್ಕಾರದಿಂದ ಆಕ್ರಮಣಕ್ಕೆ ಒಳಗಾಗುತ್ತವೆ ಎಂಬ ಭಯದಲ್ಲಿರುವ ಅರ್ಜೆಂಟೀನಾದ ಪ್ರಗತಿಪರ ಮತ್ತು ಎಡ ಚಳುವಳಿಗಳಲ್ಲಿ ಮಿಲಿಯ ಗೆಲುವು ಆಘಾತವನ್ನುಂಟು ಮಾಡಿದೆ.
ಟ್ರಂಪ್ ಅರ್ಜೆಂಟಿನಾದ ಅಧ್ಯಕ್ಷರಾಗುವುದು ಹೇಗೆ ಸಾಧ್ಯ ಎಂದಿರಾ?! ಅರ್ಜೆಂಟಿನಾದ ‘ಟ್ರಂಪ್’ ಅಧ‍್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನವೆಂಬರ್ 19 ರಂದು ಅರ್ಜೆಂಟೀನಾದಲ್ಲಿ ನಡೆದ ಎರಡನೇ ಸುತ್ತಿನ ಅಧ್ಯಕ್ಷೀಯ ಚುನಾವಣೆಯಲ್ಲಿ “ಲಿಬರ್ಟಿ ಅಡ್ವಾನ್ಸಸ್” ಕಡು ಬಲಪಂಥೀಯ ಪಕ್ಷದ ಅಭ್ಯರ್ಥಿ ಜೇವಿಯರ್ ಮಿಲೀ ಜಯ ಗಳಿಸಿದ್ದಾರೆ. ಮಿಲೀ ತಮ್ಮ ಜನಮರುಳು ಘೋಷಣೆಗಳು, ಕಡು ಬಲಪಂಥೀಯ ಪ್ರತಿಗಾಮಿ ಸಾಮಾಜಿಕ-ಆರ್ಥಿಕ ಧೋರಣೆಗಳು, ತಿಕ್ಕಲು ವರ್ತನೆಗಳಿಂದಾಗಿ ಅರ್ಜೆಂಟಿನಾದ ‘ಟ್ರಂಪ್’ ಎಂಬ ಅಡ್ಡಹೆಸರು ಗಳಿಸಿದ್ದಾರೆ.
ಮಿಲೀ 55.7% ಮತಗಳನ್ನು ಗಳಿಸಿದ್ದರೆ, ಅವರ ಎದುರಾಳಿ “ಹೋಮ್ ಲ್ಯಾಂಡ್ ಒಕ್ಕೂಟ” ದ ಎಡ- ನಡುಪಂಥೀಯ ಸೆರ್ಗಿಯೋ ಮಾಸಾ 44.3% ಮತ ಪಡೆದು ಶೇ.11 ರಷ್ಟು ಮತಪ್ರಮಾಣದಷ್ಟು ಹಿಂದುಳಿದಿದ್ದಾರೆ. ಮಿಲೀ ಡಿಸೆಂಬರ್ 10 ರಂದು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎರಡನೆಯ ಅತಿ ದೊಡ್ಡ ಆರ್ಥಿಕವಾದ ಅರ್ಜೆಂಟಿನಾ ಕಡು ಬಲಪಂಥದತ್ತ ಹೊರಳಿದ್ದು, ಎಡಪಂಥದತ್ತ ದಕ್ಷಿಣ ಅಮೆರಿಕಾದ ಚಲನೆಗೆ ದೊಡ್ಡ ಏಟು ಕೊಟ್ಟಂತಾಗಿದೆ. ಮೊದಲ ಸುತ್ತಿನಲ್ಲಿ ಎಡ-ನಡುಪಂಥೀಯ ಸೆರ್ಗಿಯೋ ಮಾಸಾ 36% ಮತ ಪಡೆದು ಮೊದಲ ಸ್ಥಾನದಲ್ಲಿದ್ದರು. ಮಿಲೀ 30% ಮತ ಪಡೆದು ಎರಡನೆಯ ಸ್ತಾನದಲ್ಲಿದ್ದರು. ಟ್ರಂಪ್
ತಮ್ಮ ವಿಜಯೋತ್ಸವದ ಭಾಷಣದಲ್ಲಿ ಮಿಲೀ ಅವರು “ಅರ್ಜೆಂಟಿನಾದ ಪರಿಸ್ಥಿತಿ ಗಂಭೀರವಾಗಿದ್ದು ಆತಂಕಕಾರಿಯಾಗಿದೆ. ನಿಧಾನದ ಬದಲಾವಣೆಗೆ ಅವಕಾಶವಿಲ್ಲ.. ..ನಾವು ವೇಗವಾಗಿ ಸಂರಚನೆಯಲ್ಲಿ ಮೂಲಭೂತ ಬದಲಾವಣೆ ಮಾಡದಿದ್ದರೆ, ನಾವು ಚರಿತ್ರೆಯಲ್ಲೇ ಅತ್ಯಂತ ಕೆಟ್ಟ ಬಿಕ್ಕಟ್ಟು ಎದುರಿಸಲಿದ್ದೇವೆ ಎಂದರು.”
ಮಿಲೀ ಅವರ ವಿಜಯವನ್ನು ಅಭಿನಂದಿಸಿದ ನಂತರ ಮಾಸಾ “ಯೂನಿಯನ್ ಫಾರ್ ದಿ ಹೋಮ್ಲ್ಯಾಂಡ್” ಕಚೇರಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ಹೀಗೆ ಹೇಳಿದರು, “ ಎರಡು ಮಾರ್ಗಗಳಿವೆ: ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯ, ಭದ್ರತೆ ಮತ್ತು ಪ್ರಭುತ್ವ, ರಾಷ್ಟ್ರೀಯ ಉದ್ಯಮ, ಉದ್ಯೋಗ, ಸಣ್ಣ– ಮಧ್ಯಮ ಕೈಗಾರಿಕೆಗಳು, ತಮ್ಮ ಹಕ್ಕುಗಳನ್ನು ಹೊಂದಿರುವ ಕಾರ್ಮಿಕರು ಮತ್ತು ರಾಷ್ಟ್ರೀಯ ಏಕತೆ.- ಇವುಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಮಾರ್ಗವನ್ನು ನಾವು ಆರಿಸಿದ್ದೇವೆ, ಅರ್ಜೆಂಟೀನಾ ಎಲ್ಲರೂ ಒಪ್ಪುವ ರಾಷ್ಟ್ರೀಯ ನೀತಿಗಳನ್ನು ಅಂಗೀಕರಿಸಬೇಕು ಎಂದು ನಾನು ನಂಬಿದ್ದೇನೆ. ”
ಉಚಿತ ಆರೋಗ್ಯ ಮತ್ತು ಉನ್ನತ ಶಿಕ್ಷಣ ಸೇರಿದಂತೆ ದೇಶದ ಕಷ್ಟಪಟ್ಟು ಗೆದ್ದ ಅನೇಕ ವಿಜಯಗಳು ಮಿಲಿ ಸರ್ಕಾರದಿಂದ ಆಕ್ರಮಣಕ್ಕೆ ಒಳಗಾಗುತ್ತವೆ ಎಂಬ ಭಯದಲ್ಲಿರುವ ಅರ್ಜೆಂಟೀನಾದ ಪ್ರಗತಿಪರ ಮತ್ತು ಎಡ ಚಳುವಳಿಗಳಲ್ಲಿ ಮಿಲಿಯ ಗೆಲುವು ಆಘಾತವನ್ನುಂಟು ಮಾಡಿದೆ. ಇದಲ್ಲದೆ, ಆರ್ಥಿಕತೆಯನ್ನು ಡಾಲರೈಸ್ ಮಾಡುವ, ಕೇಂದ್ರೀಯ ಬ್ಯಾಂಕ್ ಅನ್ನು ವಿಸರ್ಜಿಸುವ ಜೊತೆಗೆ ಸಾರ್ವಜನಿಕ ಖರ್ಚನ್ನು ಕಡಿತಗೊಳಿಸುವ ಮಿಲಿಯ ದೃಢ ನಿಶ್ಚಯವು ಅರ್ಜೆಂಟೀನಾದ ಈಗಾಗಲೇ ಹೆಣಗಾಡುತ್ತಿರುವ ಆರ್ಥಿಕತೆಯನ್ನು ಪ್ರಪಾತಕ್ಕೆ ತಳ್ಳಲಿದೆ. 2022 ರಲ್ಲಿ, ಅರ್ಜೆಂಟೀನಾ 100% ಕ್ಕಿಂತ ಹೆಚ್ಚು ಹಣದುಬ್ಬರವನ್ನು ದಾಖಲಿಸಿದೆ ಮತ್ತು ಬಡತನದ ಪ್ರಮಾಣವು ಪ್ರಸ್ತುತ 40% ರಷ್ಟಿದೆ%.
ಇದನ್ನೂ ಓದಿ: ರಾಷ್ಟ್ರೀಯ ಲಾಂಛನ ಬದಲಿಸಿ ಹಿಂದೂ ದೇವತೆ ಚಿತ್ರ ಹಾಕಿದ ವೈದ್ಯಕೀಯ ಆಯೋಗ!
ಚುನಾವಣೆಗೆ ಮುಂಚಿತವಾಗಿ ಮಿಲಿಯ ಪ್ರಸ್ತಾವಿತ ಆರ್ಥಿಕ ಸುಧಾರಣೆಗಳ ಪರಿಣಾಮಗಳ ಬಗ್ಗೆ “ಸಂಕ್ಷಿಪ್ತವಾಗಿ, ಜೇವಿಯರ್ ಮಿಲಿಯ ಡಾಲರೀಕರಣ ಮತ್ತು ಹಣಕಾಸಿನ ಕಠಿಣ ಪ್ರಸ್ತಾಪಗಳು ಆಧುನಿಕ ಆರ್ಥಿಕತೆಗಳ ಸಂಕೀರ್ಣತೆಗಳನ್ನು ಕಡೆಗಣಿಸುತ್ತವೆ, ಐತಿಹಾಸಿಕ ಬಿಕ್ಕಟ್ಟುಗಳಿಂದ ಪಾಠಗಳನ್ನು ನಿರ್ಲಕ್ಷಿಸುತ್ತವೆ ಮತ್ತು ಈಗಾಗಲೇ ತೀವ್ರವಾದ ಅಸಮಾನತೆಗಳನ್ನು ಎತ್ತಿ ಹಿಡಿಯಲು ಬಾಗಿಲು ತೆರೆಯುತ್ತವೆ. ಅರ್ಜೆಂಟೀನಾ ತನ್ನ ಸಂಕೀರ್ಣ ಆರ್ಥಿಕತೆಯನ್ನು ಮುಂದೊಯ್ಯಲು, ಅಲ್ಪಾವಧಿಯಲ್ಲಿ ಆಕರ್ಷಕವಾಗಿ ಮಾತ್ರವಲ್ಲದೆ ಸುಸ್ಥಿರ, ನ್ಯಾಯಸಮ್ಮತವಾದ ಸಮತೋಲಿತ, ಪ್ರಾಯೋಗಿಕ ಆಧಾರಗಳಿರುವ ಮತ್ತು ದೀರ್ಘಾವಧಿಯಲ್ಲಿ ಸಬಲೀಕರಿಸುವ ಕಾರ್ಯತಂತ್ರಗಳೊಂದಿಗೆ ನೀತಿ ನಿರೂಪಣೆಯನ್ನು ಮಾಡುವುದು ಬಹಳ ಮುಖ್ಯ,” ಎಂದು ಎಚ್ಚರಿಕೆ ನೀಡುವ ಪತ್ರವನ್ನು.ವಿಶ್ವದ 100 ಕ್ಕೂ ಹೆಚ್ಚು ಅರ್ಥಶಾಸ್ತ್ರಜ್ಞರು ಬಿಡುಗಡೆ ಮಾಡಿದ್ದರು.
ಮಾನವ ಹಕ್ಕುಗಳ ರಕ್ಷಕರು ಮತ್ತು ದೇಶದ ಹಿಂದಿನ ನಾಗರಿಕ-ಮಿಲಿಟರಿ ಸರ್ವಾಧಿಕಾಕ್ಕೆ ಬಲಿಯಾದವರು ಮತ್ತು ಅದರಿಂದ ಬದುಕುಳಿದವರು ‘ಕ್ರೂರ ಸರ್ವಾಧಿಕಾರ ಇರಲೇ ಇಲ್ಲ’ ಮತ್ತು ಅದನ್ನು ಸಮರ್ಥಿಸುವ ಮಿಲೀ ಅವರ ಮನೋಭಾವದ ಬಗ್ಗೆ ಎಚ್ಚರಿಕೆ ನೀಡಿದ್ದರು. ಮೊದಲ ಸುತ್ತಿನ ಮುನ್ನ ನಡೆದ ಅಧ್ಯಕ್ಷೀಯ ಚರ್ಚೆಯಲ್ಲಿ, ಹಿಂದಿನ ನಾಗರಿಕ-ಮಿಲಿಟರಿ ಸರ್ವಾಧಿಕಾರದಲ್ಲ ಸಾರ್ವತ್ರಿಕವಾಗಿ ಒಪ್ಪಿತವಾದ “ಬಂಧನಕ್ಕೊಳಗಾದ ಮತ್ತು ಕಣ್ಮರೆಯಾದ 30,000 ಜನರ ಸಂಖ್ಯೆ” ತಪ್ಪಾಗಿದೆ ಮತ್ತು ಅದು ನಿಜವಾಗಿ 8,753 ಎಂದು ಅವರು ಹೇಳಿದ್ದಾರೆ. “ಇತಿಹಾಸದ ತಿರುಚಿದ ನೋಟ” ಇದೆ ಮತ್ತು ಜನರು ಮಾನವ ಹಕ್ಕುಗಳ “ಸಿದ್ಧಾಂತ” ವನ್ನು “ಹಣ ಸಂಪಾದಿಸಲು ಮತ್ತು ಮೋಸದ ವ್ಯವಹಾರಗಳನ್ನು ನಡೆಸಲು” ದುರ್ಬಳಕೆ ಮಾಡಿದ್ದಾರೆಂದು ಆರೋಪಿಸಿದರು. ಅವರ ಉಪಾಧ್ಯಕ್ಷ ಅಭ್ಯರ್ಥಿ ಹಾಗೂ ಸಹಚರ ವಿಕ್ಟೋರಿಯಾ ವಿಲ್ಲಾರ್ರುಯೆಲ್, ಎಡಪಂಥೀಯ ಗೆರಿಲ್ಲಾ ಗುಂಪುಗಳ “ಸಂತ್ರಸ್ತರ ಗೌರವಾರ್ಥವಾಗಿ” ಮತ್ತು 30,000 ಜನ ಬಂಧನಕ್ಕೊಳಗಾದ ಮತ್ತು ಕಣ್ಮರೆಯಾದ “ಮಾನವ ಹಕ್ಕುಗಳ ಸಂಘಟನೆಗಳ ಸುಳ್ಳು ಬಯಲು ಮಾಡಲು” ಸೆಪ್ಟೆಂಬರ್ ನಲ್ಲಿ ಒಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾಲದ ವ್ಯಂಗ್ಯವೆಂದರೆ ಈ ವರ್ಷ ಹಿಂದಿನ ಸರ್ವಾಧಿಕಾರ ಕುಸಿದು ಪ್ರಜಾಪ್ರಭುತ್ವದ ಮರಳುವಿಕೆಯ 40 ನೇ ವಾರ್ಷಿಕೋತ್ಸವ.
ಆದರೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಮಿಲೀ ಅವರಿಗೆ ಮನಬಂದಂತೆ ಭಾರೀ ನೀತಿ ಬದಲಾವಣೆ ಮಾಡಲು ಬೇಕಾದ ಪಾರ್ಲಿಮೆಂಟರಿ ಬಹುಮತವಿಲ್ಲ. ಪಾರ್ಲಿಮೆಂಟಿನ ಕೆಳಸದನದಲ್ಲಿ ಅವರ ರಂಗಕ್ಕೆ 130 ಸೀಟುಗಳಲ್ಲಿ ಕೇವಲ 35 ಸೀಟುಗಳು ಸಿಕ್ಕಿವೆ. ಎಡ–ನಡುಪಂಥೀಯ “ಹೋಮ್ ಲ್ಯಾಂಡ್ ಒಕ್ಕೂಟ” 58 ಸ್ಥಾನ ಗಳಿಸಿ ಅತ್ಯಂತ ದೊಡ್ಡ ಕೂಟವಾಗಿದೆ. ಆದರೂ ಮಿಲೀ ದೇಶದ ಆರ್ಥಿಕ–ಸಾಮಾಜಿಕ ಕ್ಷೇತ್ರಕ್ಕೆ ಸಾಕಷ್ಟು ಹಾನಿಯುಂಟು ಮಾಡುವಷ್ಟು ಅಧಿಕಾರ ಹೊಂದಿದ್ದಾರೆ.
ಫಲಿತಾಂಶಗಳು ಬಿಡುಗಡೆಯಾದ ನಂತರ, ಸಾಮಾಜಿಕ ನಾಯಕ ಮತ್ತು ಹಿಂದಿನ ಅಧ್ಯಕ್ಷೀಯ ಅಭ್ಯರ್ಥಿ ಜುವಾನ್ ಗ್ರಾಬೊಯಿಸ್ ಹೀಗೆ ಬರೆದಿದ್ದಾರೆ, “ಧೈರ್ಯದೊಂದಿಗೆ ಪ್ರತಿಕೂಲತೆಯನ್ನು ಎದುರಿಸಿ, ನಮ್ಮ ಸಂಘಟನೆಯನ್ನು ಬುದ್ಧಿವಂತಿಕೆಯಿಂದ ಉಳಿಸಿಕೊಳ್ಳಿ ಮತ್ತು ನಮ್ಮ ನಂಬಿಕೆಗಳನ್ನು ದೃಢವಾಗಿ ಕಾಪಾಡಿಕೊಳ್ಳಿ. ಏಕೆಂದರೆ, ನಮ್ಮ ಕೈಯಲ್ಲಿರುವ ಸಂವಿಧಾನ ಮತ್ತು ನಮ್ಮ ಹೃದಯದಲ್ಲಿರುವ ಜನರೊಂದಿಗೆ, ಎಂದಿಗಿಂತಲೂ ಬಲಶಾಲಿಯಾಗಿ ಹೆಚ್ಚು, ಹೆಚ್ಚು ಉತ್ತಮವಾಗಿ ನಾವು ಹಿಂತಿರುಗಲಿದ್ದೇವೆ. ಯಾರೂ ಇಲ್ಲಿ ಬಿಟ್ಟುಕೊಡುವುದಿಲ್ಲ, ಕಿರುಕುಳವು ನಮ್ಮನ್ನು ಮುಟ್ಟಿದರೆ ಅದು ಭವಿಷ್ಯದ ಮುನ್ನುಗ್ಗುವಿಕೆಯಾಗಿರುತ್ತದೆ. ಮತ್ತು ಭೂಮಿ, ಆಶ್ರಯ ಮತ್ತು ಉದ್ಯೋಗಳನ್ನು ಎಲ್ಲರೂ ಶಾಶ್ವತವಾಗಿ ಹೊಂದಿರುವ ನ್ಯಾಯಯುತ, ಮುಕ್ತ ಮತ್ತು ಸಾರ್ವಭೌಮ ದೇಶದ ಕನಸು ಯಾವತ್ತೂ ಜೀವಂತವಾಗಿರಲಿ”.
ಇದನ್ನೂ ಓದಿ: ನೊಂದವರೆಂಬ ಮುಸುಕು ಹೊದ್ದಿರುವ ಇಸ್ರೇಲಿನ ನೆಲೆಸಿಗ ವಸಾಹತುಶಾಹಿ
ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ, ಮಿಲಿಯ ಅವರನ್ನು ಅಭಿನಂದಿಸಿದರು. ಆದರೆ ಹೀಗೂ ಹೇಳಿದರು “ ಅರ್ಜೆಂಟೀನಾದಲ್ಲಿ ಕಡು ಬಲಪಂಥ ಗೆದ್ದಿದೆ; ಇದು ನಿಮ್ಮ ಸಮಾಜದ ನಿರ್ಧಾರ. ಲ್ಯಾಟಿನ್ ಅಮೆರಿಕಕ್ಕೆ ದುಃಖವಾಗಿದೆ ಮತ್ತು ನಾವು ನೋಡುತ್ತೇವೆ… ಸಮಾಜಕ್ಕಾಗಿ ಮತ್ತು ಮನುಕುಲದ ಪ್ರಸ್ತುತ ಸಮಸ್ಯೆಗಳಿಗೆ ಸ್ಪಂದಿಸಲು ನವ ಉದಾರೀಕರಣವು ಈಗ ಯಾವುದೇ ಪ್ರಸ್ತಾಪವನ್ನು ಹೊಂದಿಲ್ಲ, ಚೀನಾ, ಬ್ರೆಜಿಲ್, ಕ್ಯೂಬಾ, ವೆನೇಜುವೇಲಾ ದಂತಹ ಕಮ್ಯುನಿಸ್ಟ್ ದೇಶಗಳೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸುವುದಾಗಿ ಮತ್ತು ‘ಮೆರ್ಕೊಸೂರ್” (ಲ್ಯಾಟಿನ್ ಅಮೆರಿಕದ ಎಡಪಂಥೀಯ ದೇಶಗಳು ಕೂಟ)ನಿಂದ ಹೊರಹೋಗುವುದಾಗಿ ಮಿಲೀ ಪ್ರತಿಜ್ಞೆ ಮಾಡಿದ್ದಾರೆ. “ನಾನು ಕಮ್ಯುನಿಸ್ಟರೊಂದಿಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ. ”ಏತನ್ಮಧ್ಯೆ, ಇತ್ತೀಚಿನ ಪ್ರಚಾರ ರ್ಯಾಲಿಯಲ್ಲಿ ಮಿಲೀ ಇಸ್ರೇಲಿ ಧ್ವಜವನ್ನು ಬೀಸಿದರು ಮತ್ತು ತಿಂಗಳುಗಳ ಹಿಂದೆ “ನಾನು ಅಧ್ಯಕ್ಷನಾದರೆ ಯು.ಎಸ್ ಮತ್ತು ಇಸ್ರೇಲ್ ಜೊತೆ ಪ್ರಮುಖ ಮಿತ್ರರಾಷ್ಟ್ರಗಳಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ. ಇಸ್ರೇಲ್‌ನೊಂದಿಗಿನ ಮೈತ್ರಿಯ ಮಟ್ಟವು ಎಷ್ಟು ಆಳವಾಗಿದೆ ಎಂದರೆ ಅರ್ಜೆಂಟೀನಾದ ರಾಯಭಾರ ಕಚೇರಿಯನ್ನು ಟೆಲ್ ಅವೀವ್ ನಿಂದ ಜೆರುಸಲೆಮ್ ಗೆ ಸ್ಥಳಾಂತರಿಸಲು ನಾನು ಉದ್ದೇಶಿಸಿದ್ದೇನೆ.” ಎಂದೂ ಅವರು ಹೇಳಿದ್ದಾರೆ.
ಎನ್ರಿಕ್ ಸ್ಯಾಂಟಿಯಾಗೊ ಹೀಗೆ ಹೇಳಿದ್ದಾರೆ, “ಬಲಪಂಥೀಯರ ಅಸ್ಥಿರಗೊಳಿಸುವ ಪ್ರಯತ್ನಗಳು ವಿಫಲವಾಗಿವೆ, ನಾವು ಕನಿಷ್ಟ ವೇತನವನ್ನು ಹೆಚ್ಚಿಸುವ ಮೂಲಕ ಪ್ರಾರಂಭಿಸಿ ಸಾಮಾಜಿಕ ಕಾರ್ಯ ಬಹುಮತಕ್ಕಾಗಿ ಹೆಚ್ಚಿನ ಹಕ್ಕುಗಳು ಮತ್ತು ಹೆಚ್ಚಿನ ಸ್ವಾತಂತ್ರ್ಯಗಳಿಗಾಗಿ ಹೋರಾಡುತ್ತಿದ್ದೇವೆ.. ಸುಮಾರ್‌ನಲ್ಲಿ ಭಾಗಿಯಾಗಿರುವ ಹೆಚ್ಚಿನವರು ಮುಂದಿನ ಮಂತ್ರಿ ಮಂಡಳಿಯಲ್ಲಿರುವುದು ಒಳ್ಳೆಯದು. ಎಲ್ಲ ಎಡಪಂಥೀಯರು ಐಕ್ಯತೆಯಿಂದ ಒಟ್ಟಾಗಿ ಕೆಲಸ ಮಾಡುವುದು ಕಾರ್ಮಿಕ ವರ್ಗದ ಜೀವನವನ್ನು ಸುಧಾರಿಸುವ ರೂಪಾಂತರಗಳನ್ನು ಮುಂದುವರೆಸುವ ಖಾತರಿಯಾಗಿದೆ ” ಎಂದು ಅವರು ಹೇಳಿದ್ದಾರೆ.
ವಿಡಿಯೋ ನೋಡಿ: ದುಡಿವ ಜನರ ಮಹಾಧರಣಿ ಹೇಗಿತ್ತು? ಮೂರು ದಿನಗಳ ಕಾಲ ಅಲ್ಲಿ ಏನು ನಡೆಯಿತು. ವಿಶೇಷ ಸುದ್ದಿ Janashakthi Media