ಕೇಪ್ ವರ್ಡೆ ನಮ್ಮನ್ನು ತೀವ್ರವಾಗಿ ಪರೀಕ್ಷಿಸಿತು: ಅರ್ಜೆಂಟೀನಾ ಗೆಲುವಿನ ಬಳಿಕ ಮೆಸ್ಸಿ ಪ್ರತಿಕ್ರಿಯೆ

2026ರ ಫಿಫಾ ವಿಶ್ವಕಪ್‌ನ ರೌಂಡ್ ಆಫ್ 32 ಪಂದ್ಯದಲ್ಲಿ ಕೇಪ್ ವರ್ಡೆ ವಿರುದ್ಧ ಹೆಚ್ಚುವರಿ ವೇಳೆಯಲ್ಲಿ 3-2 ಗೋಲುಗಳ ರೋಚಕ ಗೆಲುವು ಸಾಧಿಸಿದ ಬಳಿಕ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ, ಎದುರಾಳಿ ತಂಡದ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೇಪ್ ವರ್ಡೆ ಬಲಿಷ್ಠ ಸವಾಲು ಒಡ್ಡಲಿದೆ ಎಂಬ ನಿರೀಕ್ಷೆ ಮೊದಲೇ ಇತ್ತು ಎಂದು ಅವರು ಹೇಳಿದ್ದಾರೆ. ಕೇಪ್ ವರ್ಡೆ

ಪಂದ್ಯದ ಬಳಿಕ ಮಾತನಾಡಿದ ಮೆಸ್ಸಿ, “ಇದು ತುಂಬಾ ಕಠಿಣ ಪಂದ್ಯವಾಗಲಿದೆ ಎಂಬುದು ನಮಗೆ ಮೊದಲೇ ಗೊತ್ತಿತ್ತು. ಕೇಪ್ ವರ್ಡೆ ಅತ್ಯುತ್ತಮವಾಗಿ ಆಡಿತು ಮತ್ತು ನಮ್ಮನ್ನು ಕೊನೆಯ ಕ್ಷಣದವರೆಗೂ ಒತ್ತಡಕ್ಕೆ ಸಿಲುಕಿಸಿತು. ಆದರೆ ಪ್ರಮುಖ ಕ್ಷಣಗಳಲ್ಲಿ ನಾವು ತಾಳ್ಮೆ ಕಾಪಾಡಿಕೊಂಡು ಗೆಲುವು ಸಾಧಿಸಿದ್ದೇವೆ,” ಎಂದು ಹೇಳಿದರು.

ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ವಿಶ್ವಕಪ್‌ಗೆ ಮೊದಲ ಬಾರಿಗೆ ಅರ್ಹತೆ ಪಡೆದಿದ್ದ ಕೇಪ್ ವರ್ಡೆ ನಿರ್ಭೀತಿಯ ಆಟವಾಡಿತು. ಮೆಸ್ಸಿ ಮೊದಲ ಗೋಲು ದಾಖಲಿಸಿದರೂ, ಕೇಪ್ ವರ್ಡೆ ಎರಡು ಬಾರಿ ಸಮಬಲ ಸಾಧಿಸಿ ಪಂದ್ಯವನ್ನು ಹೆಚ್ಚುವರಿ ವೇಳೆಗೆ ಕೊಂಡೊಯ್ದಿತು. ಅಂತಿಮವಾಗಿ 111ನೇ ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ ಅವರ ನಿರ್ಣಾಯಕ ಗೋಲಿನಿಂದ ಅರ್ಜೆಂಟೀನಾ ಗೆಲುವು ಸಾಧಿಸಿ ರೌಂಡ್ ಆಫ್ 16ಕ್ಕೆ ಪ್ರವೇಶಿಸಿತು.

ಇದನ್ನೂ ಓದಿ : ರಾಮ ಮಂದಿರ ದೇಣಿಗೆ ದುರ್ಬಳಕೆ ತನಿಖೆ ತೀವ್ರ: ಟ್ರಸ್ಟ್ ಪ್ರಮುಖರ ವಿಚಾರಣೆ ನಡೆಸಿದ ಎಸ್‌ಐಟಿ

ಈ ಪಂದ್ಯದ ಮೂಲಕ ಮೆಸ್ಸಿ ಮತ್ತೊಂದು ವಿಶ್ವಕಪ್ ದಾಖಲೆ ನಿರ್ಮಿಸಿದರು. ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರ ಎಂಬ ದಾಖಲೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಸತತ ಎಂಟು ವಿಶ್ವಕಪ್ ಪಂದ್ಯಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಗೆಲುವಿನೊಂದಿಗೆ ಅರ್ಜೆಂಟೀನಾ ರೌಂಡ್ ಆಫ್ 16ಕ್ಕೆ ಲಗ್ಗೆ ಇಟ್ಟಿದ್ದು, ಮುಂದಿನ ಪಂದ್ಯದಲ್ಲಿ ಈಜಿಪ್ಟ್ ತಂಡವನ್ನು ಎದುರಿಸಲಿದೆ. ಕೇಪ್ ವರ್ಡೆ

ಇದನ್ನೂ ನೋಡಿ : ಆರ್‌ಎಸ್‌ಎಸ್‌ ನೋಂದಣಿ ಸುತ್ತಮುತ್ತ: ಎದ್ದಿರುವ ಪ್ರಶ್ನೆಗಳೇನು?

Donate Janashakthi Media

Leave a Reply

Your email address will not be published. Required fields are marked *