ಅರಸೀಕೆರೆ ನಗರಸಭೆಯಲ್ಲಿ ಆಪರೇಷನ್ ಕಮಲ : ಜೆಡಿಎಸ್ ಗಂಭೀರ ಆರೋಪ

ಹಾಸನ: ರಾಜ್ಯದಲ್ಲಿ ಮತ್ತೆ ಆಪರೇಷನ್​ ಕಮಲ ಸದ್ದು ಮಾಡಿದ್ದು, ಅರಸೀಕೆರೆ ನಗರಸಭೆಯ ಕಾರ್ಪೊರೇಟರ್​​ಗೆ ಬಿಜೆಪಿ ₹  10 ಲಕ್ಷ ನೀಡಿದ ಆರೋಪ ಕೇಳಿ ಬಂದಿದೆ.

₹10 ಲಕ್ಷ ಹಣದ ಸಮೇತ ಜೆಡಿಎಸ್ ಮುಖಂಡ ಹೆಚ್​. ಡಿ. ರೇವಣ್ಣ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ರಾಜ್ಯ ಬಿಜೆಪಿ ನಾಯಕರ ವಿರುದ್ಧ ರೇವಣ್ಣ ಕೆಂಡಾಮಂಡಲರಾಗಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಎನ್‌.ಆರ್‌.ಸಂತೋಷ್ ವಿರುದ್ಧ ರೇವಣ್ಣ ನೇರ ಆರೋಪ ಮಾಡಿದ್ದಾರೆ. ಜೆಡಿಎಸ್ ಭದ್ರಕೋಟೆ ಛಿದ್ರಗೊಳಿಸಲು ಬಿಜೆಪಿ ನಾಯಕರು ಈ ರೀತಿ ಮಾಡಿದ್ದಾರೆ ಎಂದು ರೇವಣ್ಣ ಆರೋಪಿಸಿದ್ದಾರೆ.

ಜೆಡಿಎಸ್ ಸದಸ್ಯರಿಗೆ ಹಣದ ಆಮಿಷಹೊಡ್ಡಿ ಮುಂಗಡವಾಗಿ 10 ಲಕ್ಷ ರೂಗಳನ್ನು ನೀಡಿರುವ ಬಗ್ಗೆ ಕೂಡಲೇ ಸಮಗ್ರ ಸಿಬಿಐ ತನಿಖೆ ಮಾಡಬೇಕು. ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದ ಅಡ್ವೋಕೆಟ್ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಅರಸೀಕೆರೆ ಮತ್ತು ಹಾಸನ ನಗರಸಭೆ ಎಸ್.ಟಿ. ಮಿಸಲಾತಿ ಬರಲು ಕಾರಣರಾದರು. ಎನ್.ಆರ್ ಸಂತೋಷ್ ಮಾತ್ರೆ ನುಂಗಿದ ಮೇಲೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾನೆ. ಸಿಕಂದರ್ ಮತ್ತು ಹರ್ಷವರ್ಧನ್ ಮೂಲಕ ಎಲ್ಲಾ ನಗರಸಭೆ ಸದಸ್ಯರಿಗೆ 10 ಲಕ್ಷ ಮುಂಗಡ ಹಣ ಕೊಟ್ಟು ಉಳಿದ 15 ಲಕ್ಷ ಹಣ ನಂತರ ಕೊಡುವುದಾಗಿ ಆಮಿಷ ಒಡ್ಡುವ ಮೂಲಕ ರಾಜಿನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಇದನ್ನು ವಿರೋಧಿಸಿದ ಒಬ್ಬ ಸದಸ್ಯನ ಮನೆ ಬಳಿ ಬಿಜೆಪಿ ಪಕ್ಷದ ಬೆಂಬಲಿಗರು ರಾತ್ರಿ ಗಲಾಟೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ಈ ಹಣ ಎಲ್ಲಿಂದ ಬಂತು. ಇದರ ಬಗ್ಗೆ ಸಿಬಿಐ ತನಿಖೆ ಆಗಬೇಕು. ಈ ಬಗ್ಗೆ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತೆವೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳೆ ನೆರ ಹೊಣೆ ಅವರು ರಾಜೀನಾಮೆ ನೀಡಬೇಕು ಮತ್ತು ಸಂತೋಷ ಮೊಬೈಲ್ ಫೋನ್ ವಶಪಡಿಸಿಕೊಂಡು ತನಿಖೆ ಮಾಡಬೇಕು ಎಂದು ರೇವಣ್ಣ ಆಗ್ರಹಿಸಿದ್ದಾರೆ.

ಆಮಿಷಕ್ಕೆ ಒಳಗಾದ ನಗರಸಭೆ ಸದಸ್ಯರು ಮಾತನಾಡಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಬೆಂಬಲಿಗನಾದ ಸಿಕಂದರ್ ಎಂಬುವನು ಸರ್ಕಾರ ನಮ್ಮ ಕೈಯಲ್ಲಿದೆ, ನಾವು ಎನು ಬೇಕಾದರೂ ಮಾಡಬಲ್ಲವು ಎಂದು ಬೆದರಿಕೆ ಹಾಕಿದ್ದಾನೆ. ನಗರಸಭೆ ಆಯುಕ್ತರು ಬಿಜೆಪಿ ಪಕ್ಷದ ಎಜೆಂಟ್ ಅವರೆ ನಗರಸಭೆ ಸದಸ್ಯರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ದೂರಿದರು.

Donate Janashakthi Media

Leave a Reply

Your email address will not be published. Required fields are marked *