ವರದಿ: ಜ್ವಾನ್ಸನ್ ಕೊಡಗು
ಮಡಿಕೇರಿ: ಅಧಿಕಾರಿಗಳದ್ದೇ ಆಟ ಮುಂದುವರೆಯುತ್ತಿದ್ದು ಮಡಿಕೇರಿಯ ಸಾಮಾಜಿಕ ಅರಣ್ಯ ವಿಭಾಗದ ಉಪಾರಣ್ಯ ಸಂರಕ್ಷಣಾಧಿಕಾರಿ ಹೆಚ್ ಪೂರ್ಣಿಮಾ ಎಂಬವರಿಗೆ ವಾಸಮಾಡಲು ವಸತಿ ಗೃಹ ನಿರ್ಮಾಣಕ್ಕೆ ಮಡಿಕೇರಿ ಅರಣ್ಯ ಇಲಾಖೆಯಿಂದ ಸೂಚಿಸಲಾಗಿತ್ತು.
ಆದರೆ ಇದ್ಯಾವುದನ್ನು ಲೆಕ್ಕಿಸದೆ 20 ವರ್ಷಗಳಿಂದ ದಟ್ಟವಾಗಿ ಬೆಳೆದ ಪೈನೆಸ್, ನಂದಿ, ಹೆಬ್ಬಲಸು ಮರಗಳನ್ನು ಸಾಮಾಜಿಕ ಅರಣ್ಯ ವಿಭಾಗದ ಉಪವಲಯ ಅಧಿಕಾರಿ ಮಯೂರ್ ಕರ್ವೆಕರ್ ಮರಗಳನ್ನು ಕಡಿಸಿ ತಮಗೆ ಬೇಕಾದ ವಸತಿ ಗ್ರಹ ನಿರ್ಮಾಣ ಮಾಡಲು ಸ್ಥಳವನ್ನು ಸಿದ್ದಪಡಿಸಿ ಕೊಂಡಿರುತ್ತಾರೆ.
ಸ್ಥಳಕ್ಕೆ ದಾಳಿ ಮಾಡಿದ ರಾಷ್ಟ್ರೀಯ ಅಪರಾಧ ಮಾಹಿತಿ ವಿಭಾಗದವರು ಸ್ಥಳದ ಮಾಹಿತಿಗಳನ್ನು ಕಲೆ ಹಾಕಿದಾಗ ಅಕ್ರಮವಾಗಿ ಮರಗಳನ್ನು ಕಡಿಯುತ್ತಿದ್ದವರನ್ನು ವಿಚಾರಿಸಿದಾಗ ಅಲ್ಲೇ ಇದ್ದ ಅಧಿಕಾರಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕಾಡು ಬೆಳೆಸಿ ನಾಡು ಉಳಿಸಿ ಅನ್ನುವವರು ಈ ರೀತಿ ಅದಿಕಾರವನ್ನು ದುರಾಪಯೋಗ ಪಡಿಸಿಕೊಳ್ಳುವುದಲ್ಲದೆ ದರ್ಪ ತೋರಿಸಿ ಕೆಲಸ ಪ್ರಾರಂಬಿಸಿದ್ದಾರೆ, ಅಷ್ಟೇ ಅಲ್ಲದೆ ಅರಣ್ಯ ಇಲಾಖೆಯ ಕೆಲಸ ಕಾರ್ಯಕ್ಕಾಗಿ ಅರ್ಜಿಹಾಕಿದವರ ಅರ್ಜಿಯನ್ನು ತಿರಸ್ಕರಿಸಿದ್ದು, ಸ್ವಂತ ಕೆಲಸಕ್ಕಾಗಿ ಮರಗಳನ್ನು ಮಾರಣ ಹೋಮ ಮಾಡುತ್ತಿದ್ದಾರೆ. ಮೇಲಾಧಿಕಾರಿಗಳು ಸೂಕ್ಷ್ಮವಾಗಿ ಪರಿಗಣಿಸಿ ವಿಚಾರಣೆಗೆ ಒಳಪಡಿಸದಿದ್ದಲ್ಲಿ ಎನ್‌ಸಿಐಬಿ ತಂಡ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಸಾದ್ಯತೆ ಇದೆ ಎಂದು ತಿಳಿಸಲಾಗಿದೆ.