ಏ.15ರ ಒಳಗೆ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಸಬೇಕು: ಸಹಕಾರಿ ಇಲಾಖೆ ಆದೇಶ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆದಿಲ್ಲ. ಕೊರೊನಾ ಸಾಂಕ್ರಾಮಿಕತೆಯಿಂದಾಗಿ ಚುನಾವಣೆಯನ್ನು ಮುಂದೂಡುತ್ತಲೇ ಬರಲಾಗಿತ್ತು ಎಂಬ ಆರೋಪಗಳು ಕೇಳಿ ಬರುತ್ತಿದ್ದವು.

ಪ್ರಮುಖವಾಗಿ ಈಗೀನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಮೇಲೆ ಗಂಭೀರ ಆರೋಪಗಳು ಇವೆ. ಹಾಗಾಗಿ ಹಲವು ಬಾರಿ ಸಹಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳಿಗೆ ನಿರ್ಮಾಪಕರು ಪತ್ರ ಬರೆದಿದ್ದಾರೆ.

ಪದೇಪದೇ ನಿರ್ಮಾಪಕರು ಜಿಲ್ಲಾ ನೋಂದಣಾಧಿಕಾರಿಗಳಿಗೆ ಪತ್ರ ಬರೆದಾಗ, ಆಡಳಿತಾಧಿಕಾರಿ ನೇಮಿಸಬೇಕಾಗುತ್ತದೆ ಎಂದು ಈ ಹಿಂದೆ ಸಹಕಾರಿ ಇಲಾಖೆಯು ವಾಣಿಜ್ಯ ಮಂಡಳಿಗೆ ಪತ್ರ ಬರೆದಿತ್ತು.

ಇದೀಗ ಮೇ-2022ರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಸುವುದಾಗಿ ತಿಳಿಸಿತ್ತು. ಇದಕ್ಕೂ ತಡೆಕೋರೆ ವಾಣಿಜ್ಯ ಮಂಡಳಿಯ 50ಕ್ಕೂ ಹೆಚ್ಚು ಸದಸ್ಯರು ಮತ್ತೆ ಸಹಕಾರಿ ಇಲಾಖೆಗೆ ಪತ್ರ ಬರೆದಿದ್ದಾರೆ. ಈಗಿರುವ ಮತದಾರರ ಪಟ್ಟಿಯನ್ನೇ ಇಟ್ಟುಕೊಂಡು ಚುನಾವಣೆ ನಡೆಸಬೇಕೆಂದು ಮನವಿ ಮಾಡಿದ್ದಾರೆ. ಹಾಗಾಗಿ ಮತ್ತೆ ವಾಣಿಜ್ಯ ಮಂಡಳಿಗೆ ಇಲಾಖೆ ಪತ್ರ ಬರೆದಿದೆ.

ಮೇ 2022ಕ್ಕೂ ಮುನ್ನ ಚುನಾವಣೆ ನಡೆಸಬೇಕೆಂದು ತಾಕೀತು ಮಾಡಿದೆ.  ಏಪ್ರಿಲ್ 15ರ ಒಳಗೆ ಚುನಾವಣೆ ನಡೆಸಲೇಬೇಕೆಂದು ಸಹಕಾರ ಇಲಾಖೆಯು ಸುತ್ತೋಲೆ ಕಳುಹಿಸಿದೆ. ತಪ್ಪಿದ್ದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸೂಚನೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *