ಕುಡಿಯುವ ನೀರು, ಕಸ ವಿಲೇವಾರಿ ಸಹಿತ ಹಲವು ಸಮಸ್ಯೆಗಳ ಬಗೆಹರಿಸಿಕೊಡಲು ಒತ್ತಾಯಿಸಿ ಮನವಿ

ಮಂಗಳೂರು: ಬಜಾಲ್ ವಾರ್ಡಿನ ಕಟ್ಟಪುನಿ ಪ್ರದೇಶದಲ್ಲಿ ಕುಡಿಯುವ ನೀರು ಸಹಿತ ತ್ಯಾಜ್ಯ ವಿಲೇವಾರಿ, ಅಂಗನವಾಡಿ ರಸ್ತೆ ಅವ್ಯವಸ್ಥೆಗಳ ಸರಿಪಡಿಸಲು ಒತ್ತಾಯಿಸಿ 53ನೇ ಬಜಾಲ್ ವಾರ್ಡ್ ಅಭಿವೃದ್ಧಿ ಸಮಿತಿಯಿಂದ (20-3-2025) ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.

ನಿಯೋಗದಲ್ಲಿ 53ನೇ ಬಜಾಲ್ ವಾರ್ಡ್ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ, ಡಿವೈಎಫ್ಐ ಮುಖಂಡ ಸಂತೋಷ್ ಬಜಾಲ್ ಕಟ್ಟಪುನಿ ಪ್ರದೇಶದ ನಿವಾಸಿಗಳಾದ ಪ್ರಮೀಳಾ ಡಿಸೋಜ, ಸತೀಶ್ ಕಟ್ಟಪುನಿ, ಪುರಂದರ, ನವೀನ್ ಕಾನೆಕರಿಯ, ಪ್ರಮೀಳಾ, ಜಯಪ್ರಕಾಶ್ ಜಲ್ಲಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.

ಇದನ್ನು ಓದಿ :-ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ – ಬಿಜೆಪಿ ಯುವ ಮುಖಂಡನ ಬಂಧನ

ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್ ವಾರ್ಡಿನ ಬಜಾಲ್ ತೋಟ, ಕಟ್ಟಪುಣಿ ಎಂಬ ಪ್ರದೇಶದಲ್ಲಿ ಕಳೆದ ಹಲವು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಭಾಗದಲ್ಲಿರುವ ಸುಮಾರು 10 ಮನೆಗಳಿಗೆ ಕುಡಿಯುವ ನೀರಿನಿಂದ ಹಿಡಿದು ದಿನನಿತ್ಯದ ಗೃಹ ಬಳಕೆಗೆ ಉಪಯೋಗಿಸಲು ಸರಿಯಾದ ನೀರು ಸರಬರಾಜು ಆಗದಿರುವುದರಿಂದ ಕಳೆದ ಹಲವು ತಿಂಗಳುಗಳಿಂದ ಕುಡಿಯಲು ನೀರಲಿಲ್ಲದೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆಗೆ ಬಜಾಲ್ ವಾರ್ಡ್ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ‌ಸಂತೋಷ್ ಬಜಾಲ್ ಮನವಿ ಮಾಡಿಕೊಂಡಿದ್ದಾರೆ.

ಬಜಾಲ್ ವಾರ್ಡಿನ ಕಟ್ಟಪುನಿ ಪ್ರದೇಶದಲ್ಲಿ ಕುಡಿಯುವ ನೀರು ಸಹಿತ ತ್ಯಾಜ್ಯ ವಿಲೇವಾರಿ, ಅಂಗನವಾಡಿ ರಸ್ತೆ ಅವ್ಯವಸ್ಥೆಗಳ ಸರಿಪಡಿಸಲು ಒತ್ತಾಯಿಸಿ 53ನೇ ಬಜಾಲ್ ವಾರ್ಡ್ ಅಭಿವೃದ್ಧಿ ಸಮಿತಿಯಿಂದ (20-3-2025) ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.

ಇದನ್ನು ಓದಿ :-ಮಂಗಳೂರು| ಪಿಜಿಗೆ ಹೆಚ್ಚಿನ ಗೂಗಲ್ ರೇಟಿಂಗ್ ನೀಡುವಂತೆ ವಿದ್ಯಾರ್ಥಿಯ ಮೇಲೆ ಹಲ್ಲೆ

ಅಲ್ಲದೆ ಇಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಕಟ್ಟಪುನಿ ಅಂಗನವಾಡಿ ಕೇಂದ್ರ ಕೂಡಾ ಕಾರ್ಯಾಚರಿಸುತ್ತಿದ್ದು ಈ ಕೇಂದ್ರದಲ್ಲಿರುವ ಮಕ್ಕಳಿಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಅಂಗನವಾಡಿ ಸಹಾಯಕಿಯರು ದೂರದ ಬಾವಿ ನೀರನ್ನು ಆಶ್ರಯಿಸುವಂತಾಗಿದೆ. ಈ ಬೇಸಿಗೆಯಲ್ಲಿ ಬಾವಿ ನೀರು ಕೂಡ ಬಹಳ ಆಳಕ್ಕೆ ಇಳಿದಿದ್ದು ಒಂದು ಕೊಡ ನೀರು ಸಂಗ್ರಹಿಸಲು ಕೂಡಾ ಬಹಳಷ್ಟು ಕಷ್ಟ ಪಡುವ ಪರಿಸ್ಥಿತಿ ಎದುರಾಗಿದೆ. ಮತ್ತು ಅಂಗನವಾಡಿ ಎತ್ತರದ ಗುಡ್ಡ ಪ್ರದೇಶದಲ್ಲಿ ಇರೋದರಿಂದ ಕೇಂದ್ರಕ್ಕೆ ಸಾಗುವ ಕಾಲು ದಾರಿ ಸಂಪೂರ್ಣ ಹದಗೆಟ್ಟಿದ್ದು ಸರಿಯಾಗಿ ನಡೆದಾಡಲೂ ಆಗದಷ್ಟು ಕೆಟ್ಟದಾಗಿದಾಗಿತ್ತದೆ. ಅಲ್ಲದೆ ಈ ಕೇಂದ್ರಕ್ಕೆ ಕುಡಿಯುವ ನೀರಿನಿಂದ ಹಿಡಿದು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳಿಂದ ವಂಚನೆಗೊಳಗಾಗಿದೆ.

ಮಾತ್ರವಲ್ಲದೇ ಕಳೆದ ಹಲವು ತಿಂಗಳುಗಳಿಂದ ಕಸ ವಿಲೇವಾರಿಯಲ್ಲೂ ತ್ಯಾಜ್ಯ ಸಂಗ್ರಹಣಾ ವಾಹನಗಳು ಕಟ್ಟಪುನಿಯ ಪಶ್ಚಿಮ ಭಾಗದ ಬಜಾಲ್ ತೋಟ, ಬಜಾಲ್ ಕಾನೆಕರಿಯ, ಬಜಾಲ್ ಕೊಪ್ಪಳ ಪ್ರದೇಶದಲ್ಲಿರುವ 25 ಮನೆಗಳ ತ್ಯಾಜ್ಯಗಳನ್ನು ಸಂಗ್ರಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ತ್ಯಾಜ್ಯ ವಿಲೇವಾರಿ ಸಿಬ್ಬಂದಿಗಳ ಜೊತೆ ವಿನಂತಿಸಿದರೂ ನಾವು ಆ ಕಡೆ ತ್ಯಾಜ್ಯ ವಿಲೇವಾರಿ ಮಾಡುವುದಿಲ್ಲ ನೀವು ಯಾರಲ್ಲಿ ಬೇಕಾದರೂ ದೂರು ಕೊಡಿ ಎಂದು ಉಡಾಫೆಯಿಂದ ವರ್ತಿಸುತ್ತಾರೆ.

ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆಗಳು ಈವರೆಗೂ ಸಿಕ್ಕಿಲ್ಲ. ಆದ್ದರಿಂದ ತಾವುಗಳು ಬಜಾಲ್ ವಾರ್ಡಿನ ಬಜಾಲ್ ತೋಟ ಪ್ರದೇಶದಲ್ಲಿ ಕುಡಿಯುವ ನೀರಿಲ್ಲದೆ ಅಂಗನವಾಡಿ ಸಹಿತ ಹಲವು ಮನೆಗಳ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಲು ಕ್ರಮಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *