ಬೆಂಗಳೂರು : ವಿಧಾನ ಪರಿಷತ್ ನಲ್ಲಿ ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಸರ್ಕಾರ ದುಂದು ವೆಚ್ಚ ಮಾಡುತ್ತಿದೆ. ಈ ಕಾರ್ಯಕ್ರಮದ ಆಯೋಜನೆ ಮಾಡಲು ಹೊರಗುತ್ತಿಗೆ ನೀಡುವುದರಿಂದ ಸುಖಾಸುಮ್ಮನೆ ಹೆಚ್ಚು ವೆಚ್ಚವಾಗ್ತಿದೆ. ಇಂತಹ ಅದ್ದೂರಿ ಕಾರ್ಯಕ್ರಮ ಗಳಿಗೆ ಬಾಲಿವುಡ್ ಕಲಾವಿದರನ್ನು ಕರೆಸಿ ಅವರಿಗೆ ಕೊಟ್ಯಂತರ ಸಂಭಾವನೆ ನೀಡಲಾಗ್ತಿದೆ. ಈ ರೀತಿ ಕಲಾವಿದರಿಗೆ ಕೋಟಿ ಗಟ್ಟಲೆ ನೀಡುವ ಅವಶ್ಯಕತೆ ಏನಿದೆ. ಇದರ ಬದಲಾಗಿ ವಿಧಾನಸೌಧದ ಬ್ವಾಂಕೆಟ್ ಹಾಲಿನಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜನೆ ಮಾಡಿ ಎಂದು ಪರಿಷತ್ ನಲ್ಲಿ ಮೋಹನ್ ಕುಮಾರ್ ಕೊಂಡಜ್ಜಿ ಪ್ರಶ್ನೆ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸರ್ಕಾರದ ಪರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಜಗದೀಶ್ ಶೆಟ್ಟರ್ ಕೆಲವೊಂದು ಕಾರ್ಯಕ್ರಮಗಳನ್ನು ಗುಣಮಟ್ಟಕ್ಕೆ ತಕ್ಕಂತೆ ಮಾಡಬೇಕಾಗುತ್ತದೆ. ಉದಾಹರಣೆಗೆ ಏರ್ ಶೋ ಗಳಂತಹ ಕಾರ್ಯಕ್ರಮಗಳಿಗೆ ವೆಚ್ಚದ ನೆಪ ಹೇಳಲು ಆಗುವುದಿಲ್ಲ. ಆದರೂ ಸದಸ್ಯರು ಎತ್ತಿರುವ ಈ ಪ್ರಶ್ನೆಯ ಬಗ್ಗೆ ಸರ್ಕಾರ ಪರಿಶೀಲಿಸುತ್ತದೆ ಎಂದು ಶೆಟ್ಟರ್ ಉತ್ತರಿಸಿದರು .