ನವದೆಹಲಿ: ದೆಹಲಿಯಲ್ಲಿ ಸುರಿದ ಭಾರೀ ಮಳೆಗೆ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತದ ಬೆನ್ನಲ್ಲೇ ಮತ್ತೊಂದು ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿದಿದೆ. ವಿಮಾನ
ಇದೀಗ ರಾಜ್ ಕೋಟ್ ಏರ್ ಪೋರ್ಟ್ ನ ಮೇಲ್ಛಾವಣಿ ಕೂಡ ಕುಸಿದಿದೆ.
ಭಾರೀ ಮಳೆಗೆ ರಾಜ್ ಕೋಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಿನ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಪ್ರದೇಶದ ಛಾವಣಿ ಶನಿವಾರ ಕುಸಿದಿದೆ. ಘಟನೆಯಲ್ಲಿ ಈವರೆಗೆ ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.
ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ
ನಿನ್ನೆ ದಿನ ದೆಹಲಿ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಟರ್ಮಿನಲ್ 1ರ ಛಾವಣಿಯ ಒಂದು ಭಾಗ ಕುಸಿದಿದ್ದರಿಂದ ಒಬ್ಬರು ಮೃತಪಟ್ಟು, ಎಂಟು ಜನರು ಗಾಯಗೊಂಡಿದ್ದರು. ಇದಾದ ಮಾರನೇ ದಿನವೇ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ನ ರಾಜ್ ಕೋಟ್ ನಲ್ಲಿಯೂ ಇಂತಹುದೇ ಘಟನೆ ನಡೆದಿದೆ.
ಇದನ್ನೂ ನೋಡಿ: ಕಟ್ಟಡ ಕಾರ್ಮಿಕರ ಹಣಕ್ಕೆ ಕನ್ನ?! ಏನಾಗ್ತಿದೆ ಕಲ್ಯಾಣ ಮಂಡಳಿಯಲ್ಲಿ?!!Janashakthi Media