ಅಂಗನವಾಡಿ ಮಕ್ಕಳಿಗಾಗಿ ಹೋರಾಟ : ಗೌರಮ್ಮನ ಬಾವಿಯಲ್ಲಿ ನೀರು ಬಂತು!

ಶಿರಸಿ: ಉತ್ತರ ಕನ್ನಡಜಿಲ್ಲೆಯ ಶಿರಸಿ  ತಾಲೂಕಿನ ಗಣೇಶನಗರದಲ್ಲಿ ಅಂಗನವಾಡಿ  ಮಕ್ಕಳಿಗಾಗಿ ತೋಡಿದ 45 ಅಡಿ ಆಳದ ಬಾವಿಯಲ್ಲಿ ನೀರು ಉಕ್ಕಿದ್ದು, ಇದನ್ನು ಕಂಡ ಗೌರಿ ನಾಯ್ಕ್ ಭಾವುಕರಾಗಿದ್ದಾರೆ. ಅಂಗನವಾಡಿ

ಸಾಕಷ್ಟು ಹಗ್ಗ ಜಗ್ಗಾಟದ ನಂತರ, ಭಗೀರಥನಂತೆ ಏಕಾಂಗಿಯಾಗಿ ಬಾವಿ ತೋಡಿ ಗೌರಿ ನಾಯ್ಕ್ ಕೊನೆಗೂ ನೀರು ತರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರದಲ್ಲಿ ಬೇಸಿಗೆ ಬಂತೆಂದರೇ ನೀರಿನ ಕೊರತೆಯಿಂದ ಜನರು ಪರದಾಡುತ್ತಾರೆ. ಇನ್ನು ಬೇಸಿಗೆ ಕಾಲದಲ್ಲಿ ಗ್ರಾಮ ಪಂಚಾಯಿತಿ ವಾರದಲ್ಲಿ ಎರಡು ದಿನ ನೀರು ಬಿಡುತ್ತದೆ. ಆದರೆ ಈ ನೀರು ಕುಡಿಯಲು ಸಹ ಸಾಲುವುದಿಲ್ಲ. ಅಲ್ಲದೆ ಈ ನೀರು ಶುದ್ಧವಾಗಿರುವುದಿಲ್ಲ ಎಂಬ ಆರೋಪವೂ ಇದೆ. ಮತ್ತು ಗಣೇಶನಗರದಲ್ಲಿ ಅಂಗನವಾಡಿಯೊಂದು ಇದ್ದು, ಮಕ್ಕಳಿಗೆ ಕುಡಿಯಲು ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಇದನ್ನು ಮನಗಂಡ ಗೌರಿ ನಾಯ್ಕ್​ ಅವರು ಅಂಗನವಾಡಿ ಆವರಣದಲ್ಲಿ ಏಕಾಂಗಿಯಾಗಿ ಬಾವಿ ತೋಡಲು ಪ್ರಾರಂಭಿಸಿದ್ದರು.  

ಜನವರಿ 30 ರಿಂದ ಗೌರಿನಾಯ್ಕ ಅವರು ಅಂಗನವಾಡಿಯ ಆವರಣದಲ್ಲಿ ಯಾರ ಸಹಾಯವನ್ನೂ ಪಡೆಯದೇ ಬಾವಿ ತೋಡಲು ಆರಂಭಿಸಿದ್ದರು. ಇವರು ಏಕಾಂಗಿಯಾಗಿ 30 ಅಡಿ ಬಾವಿ ತೋಡಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಮಕ್ಕಳಿಗೆ ಕುಡಿಯುವ ನೀರು ಪೂರೈಸುವಲ್ಲಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ಸರ್ಕಾರಕ್ಕೆ ಛೀಮಾರಿ ಹಾಕಿದ್ದರು.

ಇದನ್ನೂ ಓದಿಹಿರಿಯ ನಿರ್ದೇಶಕ ಎಂ.ಎಸ್ ಸತ್ಯು ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ

ಈ ವಿಚಾರ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿರಸಿ ವಿಭಾಗದ ಸಿಡಿಪಿಓ ವೀಣಾ ಶಿರ್ಸಿಕರ್ ಅವರು ಭದ್ರತೆ ಕಾರಣ ನೀಡಿ ಬಾವಿ ಮುಚ್ಚುವಂತೆ ಫೆ.12 ರಂದು ನೋಟಿಸ್​ ನೀಡಿದ್ದರು. ಸರ್ಕಾರದ ನೋಟಿಸ್​ಗೆ ಬಗ್ಗದ ಗೌರಿ ಅವರು ಬಾವಿ ತೋಡುವುದನ್ನು ಮುಂದುವರೆಸಿದ್ದರು. ಆದರೆ ಫೆ.19 ರಂದು ಅಧಿಕಾರಿಗಳು ಸ್ಥಳಕ್ಕೆ ಬಂದು ಹಲಗೆಯಿಂದ ಬಾವಿ ಮುಚ್ಚಿದ್ದರು.ಇದನ್ನು ವಿರೋಧಿಸಿ ಗೌರಿ ನಾಯ್ಕ ಹಾಗೂ ಅವರು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಫೆ.21 ರಂದು ಶಿರಸಿ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇದ್ಯಾವುದಕ್ಕೂ ಜಗ್ಗದ ಗೌರಿ ನಾಯ್ಕ್‌ ಬಾವಿ ತೋಡುವ ಕೆಲಸದಲ್ಲಿ ನಿರತರಾಗಿ ಅಂತಿಮವಾಗಿ ನೀರು ಬರುವಂತೆ ಮಾಡುವ ಮೂಲಕ ಮಕ್ಕಳ ಧಾಹ ತಣಿಸಿದ್ದಾರೆ. ಗೌರಿಯವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ವಿಡಿಯೋ ನೋಡಿಧರೆ ಬಗೆದು ನೀರಿನ ದಾಹ ತೀರಿಸುವ ಗೌರಿ Janashakthi Media

 

 

Donate Janashakthi Media

Leave a Reply

Your email address will not be published. Required fields are marked *