- ಮೂರು ದಿನಗಳ ಅಂಗನವಾಡಿ ಅಧಿಕಾರ ಮಹಾಪಡಾವ್ ಕರೆ
- ಜನವರಿ 2023 ರಲ್ಲಿ ಸ್ಕೀಮ್ ನೌಕರರ ಒಂದು ದಿನದ ಮುಷ್ಕರ
ನವದೆಹಲಿ : ಮಳೆ ಮತ್ತು ಪ್ರತಿಕೂಲ ಹವಾಮಾನವನ್ನು ಎದುರಿಸಿ, ಜುಲೈ 26,2022 ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರಾರಂಭವಾದ ‘ಅಂಗನವಾಡಿ ಅಧಿಕಾರ ಮಹಾಪಡಾವ್’ ಜುಲೈ 28ರಂದು ಸಮಾಪನ ಗೊಂಡಿತು. ಎಲ್ಲಾ ರಾಜ್ಯಗಳ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸತತ ಮೂರು ದಿನಗಳ ಕಾಲ ಧರಣಿ ಕುಳಿತರು.
ಜುಲೈ 26 ರಿಂದ 29 ರವರೆಗೆ ನಾಲ್ಕು ದಿನಗಳ ಕಾಲ ಮಹಾಪಡಾವ್ ನಡೆಸಲು ಅಖಿಲ ಭಾರತ ಅಂಗನವಾಡಿ ನೌಕರರು ಮತ್ತು ಸಹಾಯಕಿಯರ ಒಕ್ಕೂಟ (ಎಐಎಫ್‍ಎಡಬ್ಲ್ಯುಹೆಚ್) ನಿರ್ಧರಿಸಿತ್ತು. ಆದರೆ ದಿಲ್ಲಿಯಲ್ಲಿ ಪೊಲೀಸರು 3 ನೇ ಮತ್ತು 4 ನೇ ದಿನದ ಧರಣಿಗೆ ಅನುಮತಿ ನಿರಾಕರಿಸಿದರು. ಎಐಎಫ್‍ಎಡಬ್ಲ್ಯುಹೆಚ್ ಆದೇಶವನ್ನು ಧಿಕ್ಕರಿಸಿ ಮೂರನೇ ದಿನ ‘ಸಂಸದ್ ಚಲೋ’ ಮತ್ತು ‘ಜೈಲ್ ಭರೋ’ ನಡೆಸಲು ನಿರ್ಧರಿಸಿತು. ನಾಲ್ಕನೇ ದಿನ ಭಾಗವಹಿಸಲಿದ್ದವರನ್ನು ಮೂರನೇ ದಿನವೇ ಕರೆಯಲಾಯಿತು. ಆಗ ದೆಹಲಿ ಪೋಲೀಸರು ಸಂಸತ್ ಚಲೋ ಅನ್ನು ಮುಂದುವರೆಸದಂತೆ ಮತ್ತು ಪಡಾವ್ ಅನ್ನು ಮುಂದುವರಿಸಲು ವಿನಂತಿಸಿದರು. ಆಡಳಿತಾತ್ಮಕ ನಿರ್ಬಂಧದ ಮೇಲಿನ ಈ ವಿಜಯದೊಂದಿಗೆ, ಪಂಜಾಬ್, ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಾವಿರಾರು ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಬೃಹತ್ ಭಾಗವಹಿಸುವಿಕೆಯೊಂದಿಗೆ ಪಡಾವ್ಅನ್ನು ಮೂರನೇ ದಿನದ ಮುಕ್ತಾಯಗೊಳಿಸಲಾಯಿತು.
ಮಹಾಪಡಾವ್ ಅನ್ನು ಮುಕ್ತಾಯಗೊಳಿಸಿದ ಎಐಎಫ್‌ಎಡಬ್ಲ್ಯುಎಚ್ ಪ್ರಧಾನ ಕಾರ್ಯದರ್ಶಿ ಎ ಆರ್ ಸಿಂಧು ಮಾತನಾಡಿ, ಪ್ರಧಾನಿಯವರು ಯಾವುದೇ ಜನಪ್ರತಿನಿಧಿಗಳನ್ನು ಭೇಟಿಯಾಗುವುದಿಲ್ಲ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ತಮ್ಮ “ಬೇಟಿ ಬಚಾವೋ” ನಲ್ಲಿ ನಿರತರಾಗಿದ್ದಾರೆ ಎನ್ನುತ್ತ ಹೋರಾಟವನ್ನು ತೀವ್ರಗೊಳಿಸುವಂತೆ ಅಂಗನವಾಡಿ ನೌಕರರಿಗೆ ಕರೆ ನೀಡಿದರು. AIFAWH ತನ್ನ ಭವಿಷ್ಯದ ಕಾರ್ಯಾಚರಣೆಗಳನ್ನು ಘೋಷಿಸಿದೆ. ಅವು ಈ ರೀತಿ ಇವೆ:
- 75 ವರ್ಷಗಳ ಸ್ವಾತಂತ್ರ್ಯದ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಮಾರಾಟ ಮಾಡುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ನೀಡಿರುವ ನಿರ್ದೇಶನವನ್ನು AIFAWH ಬಹಿಷ್ಕರಿಸಲಿದೆ.
- ಬಡತನ, ಹಸಿವು, ಅನಕ್ಷರತೆ ಮತ್ತು ಅನಾರೋಗ್ಯದಿಂದ ನಿಜವಾದ ಸ್ವಾತಂತ್ರ್ಯಕ್ಕಾಗಿ 14 ಆಗಸ್ಟ್ 2022 ರಂದು CITU, AIKS ಮತ್ತು AIAWU ನಿಂದ ಸಾಮೂಹಿಕ ಜಾಗರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು
- AIFAWH ಪ್ರತಿ ಸಂಸದೀಯ ಕ್ಷೇತ್ರದಲ್ಲಿ ಬೃಹತ್ ‘ಜವಾಬ್ ಮಾಂಗೋ ಅಭಿಯಾನ’ (ಜವಾಬು ಕೇಳಿ ಅಭಿಯಾನ) ಮತ್ತು ಆಳುವ ಪಕ್ಷದ ಸಂಸದರಿಗೆ ಘೇರಾವ್.
- ಜನವರಿ 2023 ರಲ್ಲಿ ಇತರ ಸ್ಕೀಮ್ ನೌಕರರೊಂದಿಗೆ ಒಂದು ದಿನದ ರಾಷ್ಟ್ರೀಯ ಮುಷ್ಕರ
- ಸಂಸತ್ತಿನಲ್ಲಿ ಮುಂದಿನ ಬಜೆಟ್ ಅಧಿವೇಶನದಲ್ಲಿ ರೈತರು, ಕೃಷಿ ಕಾರ್ಮಿಕರು ಮತ್ತು ಕಾರ್ಮಿಕರ ಜಂಟಿ ‘ಸಂಸದ್ ಚಲೋ’ದಲ್ಲಿ ಪೂರ್ಣವಾಗಿ ಭಾಗವಹಿಸುವುದು.