ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಈ ಬಾರಿ 2022-23ನೇ ಸಾಲಿನ ಬಜೆಟ್‌ನಲ್ಲಿ ಅಂಗನವಾಡಿ, ಬಿಸಿಯೂಟ, ಅತಿಥಿ ಉಪನ್ಯಾಸಕರ ಗೌರವ ಧನವನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ.
ಅಂಗನವಾಡಿ ಕಾರ್ಯಕರ್ತರಿಗೆ ಗೌರವ ಧನ ಹೆಚ್ಚಳ
ಅಂಗನವಾಡಿ ಕಾರ್ಯಕರ್ತರಿಗೂ ಗೌರವ ಧನ ಹೆಚ್ಚಳಕ್ಕೆ ಸ್ಕೀಮ್ ರೂಪಿಸಲಾಗಿದ್ದು, ಸೇವಾನುಭವ ಆಧಾರದಲ್ಲಿ ಸಾವಿರದಿಂದ 1500 ರೂಪಾಯಿಗಳ ಹೆಚ್ಚಳ ಮಾಡಲಾಗಿದೆ.
- 20 ವರ್ಷಕ್ಕಿಂದ ಹೆಚ್ಚು ಸೇವೆ ಸಲ್ಲಿಸಿದರೆ 1500 ರೂ
- 10-20 ವರ್ಷ ಸೇವೆ ಸಲ್ಲಿಸಿದ್ದರೆ 1250 ರೂ
- 10 ಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ್ದರೆ 1000 ರೂಪಾಯಿ ಹೆಚ್ಚಳ.
ಬಿಸಿಯೂಟ ಕಾರ್ಯಕರ್ತರಿಗೆ 1000 ರೂ ಹೆಚ್ಚಳ
ಆಶಾ ಕಾರ್ಯಕರ್ತೆಯರು ಸೇರಿ ಹಲವರ ಗೌರವ ಧನ ಹೆಚ್ಚಳ ಮಾಡಿ ಘೋಷಿಸಿದ್ದಾರೆ. ಆಶಾ ಕಾರ್ಯಕರ್ತರು, ಗ್ರಾಮ ಸಹಾಯಕರಿಗೆ 1000 ರೂಗಳು, ಬಿಸಿಯೂಟ ತಯಾರಿಕರಿಗೂ ತಲಾ 1000 ಗೌರವ ಧನ ಹೆಚ್ಚಳ ಮಾಡಲಾಗಿದೆ.
ಅತಿಥಿ ಉಪನ್ಯಾಸಕರಿಗೆ ಗೌರವ ಧನ ಹೆಚ್ಚಳ
2022–23ನೇ ಸಾಲಿನಲ್ಲಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಸೇರಿದಂತೆ 7 ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಯನ್ನು ಘೋಷಣೆ ಮಾಡಲಾಗಿದೆ. ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿವರ್ಹಿಸುತ್ತಿರುವ ಅತಿಥಿ ಉಪನ್ಯಾಸಕರ ಬೋಧನಾ ಅವಧಿಯನ್ನು ಹೆಚ್ಚಿಸಿ ಮಾಸಿಕ ಗೌರವಧನವನ್ನು ₹11,000 ದಿಂದ 32,000ಕ್ಕೆ ಹೆಚ್ಚಿಸಲಾಗಿದೆ.
ಬೆಳಕು ಕಾರ್ಯಕ್ರಮ
ಬೆಳಕು ಕಾರ್ಯಕ್ರಮದಡಿ 98 ಸಾವಿರ ಮನೆಗೆ ವಿದ್ಯುತ್, ವಿದ್ಯುತ್ ಸರಬರಾಜು ನಿಗಮಗಳ ಪುನರ್ ರಚನೆ, ಆಸ್ತಿ ಹಣ ಗಳಿಕೆ, ಆರ್ಥಿಕ ಸ್ವಾವಲಂಬನೆ ಹಾಗೂ ಸಂಪನ್ಮೂಲ ಕ್ರೋಡೀಕರಣಕ್ಕೆ ತಜ್ಞರ ಸಮಿತಿ ರಜನೆ, ನಿರಂತರವಾಗಿ ವುದ್ಯುತ್ ಸರಬರಾಜಿಗೆ ಉಪಕೇಂದ್ರ, ಕೆಪಿಟಿಸಿಎಲ್ ವತಿಯಿಂದ 64 ಹೊಸ ಉಪಕೇಂದ್ರ, 10 ಸಾವಿರ ಸೌರಶಕ್ತಿ ನೀರಾವರಿ ಪಂಪ್‌ಸೆಟ್ ಹಾಗೂ 227 ಕೋಟಿ ರೂಪಾಯಿ ವೆಚ್ಚದಲ್ಲಿ ಸೌರಶಕ್ತಿ ಪಂಪ್‌ಸೆಟ್ ನೀಡಲಾಗುವುದು ಎಂದು ಘೋಷಣೆ
ಅನುದಾನ ಹಂಚಿಕೆಯ ಸಂಕ್ಷಿಪ್ತ ವಿವರಗಳು ಹೀಗಿವೆ;
- ಪೌರಕಾರ್ಮಿಕರಿಗೆ 2 ಸಾವಿರ ರೂ. ಮಾಸಿಕ ಸಂಕಷ್ಟ ಭತ್ಯೆ
- ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ ₹1,600 ಕೋಟಿ
- ಮಳೆಗಾಲದಲ್ಲಿ ಹಾನಿಯಾದ ರಸ್ತೆ ಅಭಿವೃದ್ಧಿಗೆ ₹300 ಕೋಟಿ
- ಅಮೃತ್ ಗ್ರಾಮ ಪಂಚಾಯಿತಿ ಯೋಜನೆಗೆ ₹188 ಕೋಟಿ
- 750 ಗ್ರಾ.ಪಂ.ಗಳಿಗೆ ತಲಾ 25 ಲಕ್ಷ ರೂಪಾಯಿ
- ಪ್ರಸಕ್ತ ವರ್ಷದಲ್ಲಿ ರಾಜ್ಯದ 1000 ಕೆರೆಗಳ ಅಭಿವೃದ್ಧಿ, ತಲಾ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ,
- ಬೀದರ್‌ನಲ್ಲಿ 90 ಕೋಟಿ ವೆಚ್ಚದಲ್ಲಿ ಸಿಐಪಿಇಟಿ ಕೇಂದ್ರ ಸ್ಥಾಪನೆ, ಪೆಟ್ರೋ ಕೆಮಿಕಲ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ ಮತ್ತು ಸೆಂಟರ್ ಇನ್ಸ್‌ಟಿಟ್ಯೂಟ್ ಆಫ್ ಪೆಟ್ರೋ ಕೆಮಿಕಲ್ಸ್ ಸ್ಥಾಪನೆ
- ಬಂದರು ಅಭಿವೃದ್ಧಿ, ಕಡಲು ವ್ಯಾಪಾರಕ್ಕೆ ₹1,880 ಕೋಟಿ ಮೀಸಲು
- 250 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರು ನಿರ್ಮಾಣ
- ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಬಂದರು ನಿರ್ಮಾಣ
- 350 ಕೋಟಿ ವೆಚ್ಚದಲ್ಲಿ ಮಂಗಳೂರು ಬಂದರು ವಿಸ್ತರಣೆ
- ಕಾರವಾರದಲ್ಲಿ ಜಲಸಾರಿಗೆ, ಮೀನುಗಾರಿಕಾ ಸಂಸ್ಥೆ ಸ್ಥಾಪನೆ, ತದಡಿ-ಅಘನಾಶಿನಿ ಮಧ್ಯೆ ದೋಣಿ ಮಾರ್ಗ ನಿರ್ಮಾಣ
ಹಸಿರು ಬೆಂಗಳೂರು
- ಎನ್‌ಜಿಇಎಫ್‌ನ 105 ಎಕರೆ ಪ್ರದೇಶಲ್ಲಿ ಸಿಂಗಾಪುರ್ ಮಾದರಿಯಲ್ಲಿ ಗ್ರೀನ್ ಎಕ್ಸ್‌ಪೋ ನಿರ್ಮಾಣ.
- ಯಲಹಂಕ ಬಳಿಯ ಜಾರಕಬಂಡೆ ಕಾವಲ್‌ನಲ್ಲಿ 350 ಎಕರೆ ವಿಸ್ತೀರ್ಣದ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ
- ಕೆಐಎಡಿಬಿ-ಕೆಎಸ್‌ಎಸ್‌ಐಡಿಸಿ ಸಂಸ್ಥೆಗಳ ಹೊಸ ಕೈಗಾರಿಕಾ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಆದ್ಯತೆ
- ಪಡಿತರದಲ್ಲಿ ಐದು ಕೆ.ಜಿ. ಅಕ್ಕಿಯ ಜೊತೆಗೆ ಹೆಚ್ಚುವರಿ 1 ಕೆ.ಜಿ. ರಾಗಿ ಅಥವಾ ಜೋಳ ವಿತರಣೆ, 434 ಕೋಟಿ ಫಲಾನುಭವಿಗಳಿಗೆ ಅನುಕೂಲ: 1,400 ಕೋಟಿ ರೂ. ಹೆಚ್ಚುವರಿ ವೆಚ್ಚ.
- ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗೆ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿರುವ ಹಾಗೂ ಲಿಂಗತ್ವ ಮಾಸಾಶನ ಮೊತ್ತ 600/- ರೂ.ಗಳಿಂದ 800/-ರೂ.ಗಳಿಗೆ ಹೆಚ್ಚಳ, 1.32 ಲಕ್ಷ ಫಲಾನುಭವಿಗಳಿಗೆ ಅನುಕೂಲ.
- ದಾಳಿಯ ಸಂತ್ರಸ್ತ ಮಹಿಳೆಯ ಮಾಸಾಶನ ಮೊತ್ತ 10,000 ರೂ. ಗಳಿಗೆ ಹೆಚ್ಚಳ.
- 50 ವರ್ಷ ಮೇಲ್ಪಟ್ಟ ಸಂಕಷ್ಟದಲ್ಲಿ ಇರುವ ಕುಸ್ತಿ ಪಟುಗಳ ಮಾಸಾಸನ ಮೊತ್ತ 1000 ರೂ ಹೆಚ್ಚಳ
- ರಾಜ್ಯದಲ್ಲಿ 3 ಲಕ್ಷ ಹೆಣ್ಣುಮಕ್ಕಳಿಗೆ ಸ್ವಯಂ ರಕ್ಷಣೆ ತರಬೇತಿ ನೀಡಲು ಕ್ರಮ
ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ
- ಕೊಪ್ಪಳದ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ₹ 100 ಕೊಟಿ ಅನುದಾನ
- ಹಂಪಿ–ಬಾದಾಮಿ–ಐಹೊಳೆ–ಪಟ್ಟದಕಲ್ಲು–ವಿಜಯಪುರ ಪ್ರವಾಸಿ ವೃತ್ತ ಹಾಗೂ ಮೈಸೂರು–ಶ್ರೀರಂಗಪಟ್ಟಣ–ಹಾಸನ–ಬೇಲೂರು–ಹಳೇಬೀಡು ಪ್ರವಾಸಿ ವೃತ್ತ ಅಭಿವೃದ್ಧಿಗೆ ಕ್ರಮ
- ಬೇಲೂರು, ಹಳೇಬೀಡು, ಸೋಮನಾಥಪುರ ಸೇರಿದಂತೆ ಹೊಯ್ಸಳರ ಸ್ಮಾರಕಗಳನ್ನು ಪ್ರಸಕ್ತ ಸಾಲಿನಲ್ಲಿ ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಕ್ರಮ
- ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸಿಆರ್‌ಜೆಡ್ ಮಾನದಂಡಗಳನ್ನು ಸಡಿಲಿಸುವಂತೆ ಕೇಂದ್ರದ ಅನುಮೋದನೆ ಪಡೆಯಲು ಕ್ರಮ
- ತಬಡಿ ಬಂದರಿನಲ್ಲಿ ಪರಿಸರ–ಪ್ರವಾಸೋದ್ಯಮ ಕೇಂದ್ರ ಅಭಿವೃದ್ಧಿ
- ಪಾರಂಪರಿಕ ತಾಣಗಳಾದ ಬೀದರ್ ಹಾಗೂ ಕಲಬುರಗಿ ಕೋಟೆಗಳ ಪುನರುಜ್ಜೀವನಕ್ಕೆ ಕ್ರಮ
- ಸ್ಮಾರಕಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ನೆರವಾಗುವಂತಹ ‘Adopt a Monument’ ಯೋಜನೆ ಜಾರಿ
ಶ್ರೀಶೈಲದಲ್ಲಿ ₹85 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ, ಮೊದಲ ಹಂತದಲ್ಲಿ 45 ಕೋಟಿ ರೂಪಾಯಿ, ಕಾಶಿಯಾತ್ರೆ ಕೈಗೊಳ್ಳುವವರಿಗೆ ₹5 ಸಾವಿರ ಸಹಾಯಧನ ಸುಮಾರು 30 ಸಾವಿರ ಯಾತ್ರಾರ್ಥಿಗಳಿಗೆ ಸಹಾಯಧನ, ಧರ್ಮಸ್ಥಳ, ಕುಕ್ಕೆ, ಕೊಲ್ಲೂರು, ತಿರುಪತಿ, ಮಂತ್ರಾಲಯ, ಮೇಲ್ಮರವತ್ತೂರುಗೆ ಪ್ಯಾಕೇಜ್ ಟ್ರಿಪ್ ಸೇವೆ ಆರಂಭ
ಬಂದರು ಅಭಿವೃದ್ಧಿ
- ಕೇಂದ್ರದ ಸಾಗರ ಮಾಲಾ ಯೋಜನೆಯಡಿ 1,880 ಕೋಟಿ ರೂ. ಅಂದಾಜು ವೆಚ್ಚದ 24 ಯೋಜನೆ ಅನುಷ್ಠಾನ;
- 250 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರು ನಿರ್ಮಾಣ
- ಕಾರವಾರ ಬಂದರಿನ ವಿಸ್ತರಣೆ; ಬೈಂದೂರು ಮತ್ತು ಮಲ್ಲೆಗಳಲ್ಲಿ ವಿವಿಧೋದ್ದೇಶ ಬಂದರು ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ತಯಾರಿ.
- ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಪ್ರಧಾನಮಂತ್ರಿ ಮತ್ಸಸಂಪದ ಯೋಜನೆಯಡಿ 250 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರು ನಿರ್ಮಾಣ.
- 350 ಕೋಟಿ ರೂ. ವೆಚ್ಚದಲ್ಲಿ ಹಳೆ ಮಂಗಳೂರು ಬಂದರಿನಲ್ಲಿ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಕ್ಕೆ ಮೀಸಲಾದ ಜೆಟ್ಟಿ ಮತ್ತು ಇತರ ಸಂಬಂಧಿತ ಮೂಲಸೌಕರ್ಯ ಸೌಲಭ್ಯ ಸ್ಥಾಪನೆ.
- ಉತ್ತರ ಕನ್ನಡ ಜಿಲ್ಲೆಯ ಕೇಣಿ-ಬೆಳಕೇರಿಯಲ್ಲಿ ಗ್ರೀನ್‌ಫೀಲ್ಡ್ ಬಂದರು ಅಭಿವೃದ್ಧಿ.
- ಕಾರವಾರದಲ್ಲಿ ಜಲಸಾರಿಗೆ, ಮೀನುಗಾರಿಕಾ ಸಂಸ್ಥೆ ಸ್ಥಾಪನೆ, ತದಡಿ-ಅಘನಾಶಿನಿ ಮಧ್ಯೆ ದೋಣಿ ಮಾರ್ಗ ನಿರ್ಮಾಣ
ನವಕರ್ನಾಟಕ ನಿರ್ಮಾಣ
ನವಕರ್ನಾಟಕ ನಿರ್ಮಾಣಕ್ಕಾಗಿ ಪ್ರತಿ ವಿಭಾಗದಲ್ಲಿ ತಲಾ ಒಂದು ಯೋಜನಾಬದ್ಧ ಪರಿಸರಸ್ನೇಹಿ ನವನಗರ ಅಭಿವೃದ್ಧಿ.
ರಾಜ್ಯದಲ್ಲಿ ದೊಡ್ಡ ಗಾತ್ರದ ಹೂಡಿಕೆ ಪ್ರದೇಶಗಳು ಮತ್ತು ಕೈಗಾರಿಕಾ ವಸಾಹತುಗಳ ಸ್ಥಾಪನೆ, ಕಾರ್ಯಾಚರಣೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ ರಚನೆ.
ತುಮಕೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ವಿಶೇಷ ಹೂಡಿಕೆ ಪ್ರದೇಶ ಅಧಿಸೂಚನೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸಮುದಾಯಗಳ ನಿಗಮಗಳಡಿ 400 ಕೋಟಿ ರೂ. ಅಭಿವೃದ್ಧಿ ಯೋಜನೆ.
ದೇವರಾಜ ಅರಸು ಅಭಿವೃದ್ಧಿ ನಿಗಮದಡಿ ಬರುವ ಇತರ ಹಿಂದುಳಿದ ಸಮುದಾಯಗಳಿಗೆ 400 ಕೋಟಿ ರೂ. ಯೋಜನೆ
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ತಲಾ 100 ಕೋಟಿ ರೂ. ಯೋಜನೆ.
ಮರಾಠಾ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳಿಗೆ 50 ಕೋಟಿ
ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 50ಕೋಟಿ
ಜೈನ್, ಸಿಖ್, ಬೌದ್ಧ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 50ಕೋಟಿ
ಜೋಗ ಜಲಪಾತ 116 ಕೋಟಿ ವೆಚ್ಚದಲ್ಲಿ ರೋಪ್ ವೇ ಅಭಿವೃದ್ಧಿ
ಮೈಸೂರು ಚಾಮುಂಡಿ ಬೆಟ್ಟ , ಮುಳ್ಳಯ್ಯನ ಗಿರಿ ದತ್ತಪೀಠದಲ್ಲಿ ಪರ್ವತ ಮಾಲಾ ಯೋಜನೆ ಯಡಿ ರೋಪ್ ವೇ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ
ರಸ್ತೆ ಮತ್ತು ರೈಲು ಮಾರ್ಗ ಅಭಿವೃದ್ಧಿ
- ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-4ರ ಘಟ್ಟ-2 ರಡಿ ಒಟ್ಟು 2,275 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 3,500 ಕೋಟಿ
- ಜೀವಿತಾವಧಿ ಮೀರಿದ 1,008 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳ ಮರುಡಾಂಬರೀಕರಣಕ್ಕೆ 440 ಕೋಟಿ ರೂ. ಅನುದಾನ.
- 640 ಕೋಟಿ ಅಂದಾಜು ವೆಚ್ಚದ 55 ಕಿ.ಮೀ. ಉದ್ದದ ಗದಗ ಯಲವಿಗಿ ನೂತನ ರೈಲು ಮಾರ್ಗ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ
- 927 ಕೋಟಿ ರೂ. ವೆಚ್ಚದ ಧಾರವಾಡ-ಕಿತ್ತೂರು-ಬೆಳಗಾವಿ ನೂತನ ರೈಲು ಮಾರ್ಗ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಕ್ರಮ.
- ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ಕೇಂದ್ರದೊಂದಿಗೆ ಸಹಯೋಗ
- ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿರುವ ನದಿಗಳ ಹೂಳೆತ್ತುವಿಕೆ ಮತ್ತು ಹೊಸ ಕೆರೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಭಾಗಿತ್ವದಲ್ಲಿ ಹೊಸ ಯೋಜನೆ.
ವಿಮಾನ ನಿಲ್ದಾಣ
- 186 ಕೋಟಿ ರೂ. ವೆಚ್ಚದಲ್ಲಿ ರಾಯಚೂರಿನಲ್ಲಿ ಗ್ರೀನ್-ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ.
- ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕಾರ್ಯಸಾಧ್ಯತಾ ವರದಿ ತಯಾರಿ. ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ.
- 30 ಕೋಟಿ ವೆಚ್ಚದಲ್ಲಿ ಹೆಲಿಪೋರ್ಟ್‌ಗಳ ಅಭಿವೃದ್ಧಿ
ಕಟ್ಟಡ ಕಾರ್ಮಿಕರಿಗೆ 2100 ಕೋಟಿ ಮೀಸಲು
- ಕಟ್ಟಡ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್ ಆರಂಭ
- ಕಟ್ಟಡ ಕಾರ್ಮಿಕರಿಗಾಗಿ ರಿಯಾಯಿತಿ ಬಸ್ ಪಾಸ್ ಯೋಜನೆ
- ಹುಬ್ಬಳ್ಳಿ ಮತ್ತು ದಾವಣಗೆರೆ ಇಎಸ್‌ಐ ಆಸ್ಪತ್ರೆಗಳ ಬೆಡ್ 100ಕ್ಕೆ ಹೆಚ್ಚಳ
- ಯೆಲ್ಲೊ ಬೋರ್ಡ್ ಡ್ರೈವರ್ ಮಕ್ಕಳಿಗಾಗಿ ವಿದ್ಯಾನಿಧಿ ಸ್ಕೀಮ್
- ಡ್ರೈವರ್ಸ್ ಮಕ್ಕಳ ಆರೋಗ್ಯ ಸೌಲಭ್ಯಕ್ಕೂ ವಿಶೇಷ ಯೋಜನೆ
ಪೊಲೀಸ್ ಗೃಹ ಯೋಜನೆ
- ಪೊಲೀಸ್ ಗೃಹ ಯೋಜನೆಗೆ 250 ಕೋಟಿ ರೂಪಾಯಿ ಅನುದಾನ ಘೋಷಣೆ
- 2ನೇ ಹಂತದಲ್ಲಿ 250 ಕೋಟಿ ರೂಪಾಯಿ ಮಿಸಲಿಡಲಾಗಿದ್ದು, ಮೊಬಿಲಿಟಿ ಯೋಜನೆಗೆ 50 ಕೋಟಿ ರೂ. ಅನುದಾನ
- ರಾಜ್ಯದಲ್ಲಿ ನೂತನ ಕೆಎಸ್‌ಆರ್‌ಪಿ ಮಹಿಳಾ ಕಂಪನಿ ಆರಂಭಿಸಲು ಯೋಜನೆ
- ಅಗ್ನಿಶಾಮಕ ಸಿಬ್ಬಂದಿ ವಿಮೆ ಮೊತ್ತ ಹೆಚ್ಚಳ ಮಾಡಲಾಗಿದ್ದು, 1 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗೆ ಏರಿಕೆ
- ದಾವಣಗೆರೆಯಲ್ಲಿ ಎಸ್‌ಡಿಆರ್‌ಎಫ್ ಆರಂಭ
- ಕಾರಾಗೃಹದಲ್ಲಿ ಅತ್ಯಾಧುನಿಕ ಉಪಕರಣ ಅಳವಡಿಕೆ – ಕಾರಾಗೃಹಗಳಲ್ಲಿ ಮೊಬೈಲ್ ಜಾಮರ್ ಅಳವಡಿಕೆ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೂತನ ಕಾರಾಗೃಹ ಕಟ್ಟಡಕ್ಕೆ ಅನುಮತಿ