ಆಂಧ್ರ ವಿಧಾನಸಭೆ ಚುನಾವಣೆ | 118 ಅಭ್ಯರ್ಥಿಗಳ ಮೊದಲ ಜಂಟಿ ಪಟ್ಟಿ ಪ್ರಕಟಿಸಿದ ಟಿಡಿಪಿ & ಜನಸೇನಾ

ವಿಜಯವಾಡ: ಟಿಡಿಪಿ ವರಿಷ್ಠ ಎನ್ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ 118 ಅಭ್ಯರ್ಥಿಗಳ ಮೊದಲ ಜಂಟಿ ಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದಾರೆ. ಆದರೆ, ಜನಸೇನಾ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ನಿರಾಸೆ ಮೂಡಿಸಿರುವ ಪಕ್ಷದ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್ ಅವರು ತಮ್ಮ ಪಕ್ಷವು ಕೇವಲ 24 ವಿಧಾನಸಭಾ ಸ್ಥಾನಗಳು ಮತ್ತು ಮೂರು ಲೋಕಸಭಾ ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಲಿದೆ ಎಂದು ಶನಿವಾರ ಘೋಷಿಸಿದ್ದಾರೆ.

ಉಂಡವಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟಿಡಿಪಿ ಮುಖ್ಯಸ್ಥ ಚಂದ್ರಬಾನು ನಾಯ್ಡು 94 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದರೆ, ಜನಸೇನೆ 5 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಅದಾಗ್ಯೂ, ಪವನ್ ಕಲ್ಯಾಣ್ ಅವರು ತಾನು ಎಲ್ಲಿಂದ ಸ್ಪರ್ಧಿಸುತ್ತೇನೆ ಎಂಬುದನ್ನು ಪ್ರಕಟಿಸಿಲ್ಲ.

ಇದನ್ನೂ ಓದಿ: ಚಲೋ ದೆಹಲಿ | ರೈತ ಮುಖಂಡರ ಮೇಲೆ ಎನ್‌ಎಸ್‌ಎ ಜಾರಿ ಮಾಡಲ್ಲ ಎಂದ ಹರಿಯಾಣ ಸರ್ಕಾರ

ವರದಿಗಳಗ ಪ್ರಕಾರ, JSP ನಾಯಕ ಪವನ್ ಕಲ್ಯಾಣ್ ಅವರು ತಮ್ಮ ಪಕ್ಷವು 24 ವಿಧಾನಸಭಾ ಸ್ಥಾನಗಳು ಮತ್ತು ಮೂರು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧರಿಸಿದ್ದಾರೆ. ಪ್ರಸ್ತುತ ಸರ್ಕಾರದ ವಿರುದ್ಧದ ಮತ ವಿಭಜನೆ ತಡೆಯುವುದು ಪ್ರಾಥಮಿಕ ಗುರಿಯಾಗಿದ್ದು, ಎರಡನೆಯದಾಗಿ, ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಸಾಧಿಸುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉಭಯ ಪಕ್ಷಗಳ ಮೊದಲ ಪಟ್ಟಿಯಲ್ಲಿ ಘೋಷಿಸಲಾದ 99 ಅಭ್ಯರ್ಥಿಗಳ ಪೈಕಿ ಚಂದ್ರಬಾಬು ನಾಯ್ಡು ಕುಪ್ಪಂ, ಅವರ ಪುತ್ರ ನಾರಾ ಲೋಕೇಶ್ ಮಂಗಳಗಿರಿ, ಕೆ ಅಚ್ಚನಾಯ್ಡು ತೆಕ್ಕಲಿ, ಎನ್ ಬಾಲಕೃಷ್ಣ ಹಿಂದೂಪುರ ಮತ್ತು ಜೆಎಸ್‌ಪಿ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೆಂದ್ಲ ಮನೋಹರ್ ತೆನಾಲಿಯಿಂದ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ವಿರುದ್ಧದ ಮಾನನಷ್ಟ ಪ್ರಕರಣ | ರಾಹುಲ್ ಗಾಂಧಿ ಅರ್ಜಿ ತಿರಸ್ಕರಿಸಿದ ಜಾರ್ಖಂಡ್ ಹೈಕೋರ್ಟ್

ವಿಶೇಷವಾಗಿ ಟಿಡಿಪಿಯ ಪ್ರಕಟಿಸಿರುವ 94 ಹೆಸರಿನಲ್ಲಿ 23 ಹೊಸ ಮುಖಗಳಿಗೆ ಮಣೆಹಾಕಿದೆ. ಪಟ್ಟಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ 28 ಅಭ್ಯರ್ಥಿಗಳು, ಸ್ನಾತಕಪೂರ್ವ ಪದವಿ ಹೊಂದಿರುವ 50 ಅಭ್ಯರ್ಥಿಗಳು, 3 ವೈದ್ಯರು, 2 ಪಿಎಚ್‌ಡಿ ಮತ್ತು 1 ಐಎಎಸ್ ಅಧಿಕಾರಿ ಇದ್ದಾರೆ ಎಂದು ನಾಯ್ಡು ಹೇಳಿದ್ದಾರೆ. ತಮ್ಮ ಪಕ್ಷಕ್ಕೆ ವ್ಯತಿರಿಕ್ತವಾಗಿ, ಆಡಳಿತರೂಢ ವೈಎಸ್‌ಆರ್‌ಸಿ ಪಟ್ಟಿಯು ಕೆಂಪು ಮರಳು ಕಳ್ಳಸಾಗಣೆದಾರರನ್ನು ಒಳಗೊಂಡಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

“1 ಕೋಟಿ 3 ಲಕ್ಷದ 33 ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯಗಳನ್ನು ಪರಿಗಣಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಟಿಡಿಪಿ-ಜೆಎಸ್‌ಪಿ ಚುನಾವಣಾ ಯುದ್ಧಕ್ಕೆ ಸಿದ್ಧವಾಗಿದೆ. ರಾಜ್ಯದ ಭವಿಷ್ಯ ಮತ್ತು ಆಂಧ್ರಪ್ರದೇಶದ ಉಜ್ವಲ ಭವಿಷ್ಯಕ್ಕಾಗಿ ಈ ಮೈತ್ರಿ ಮಾಡಲಾಗಿದೆ” ಎಂದು ನಾಯ್ಡು ಹೇಳಿದ್ದಾರೆ. ಬಿಜೆಪಿಯು ಈ ಮೈತ್ರಿಗೆ ಸೇರಲು ನಿರ್ಧರಿಸಿದರೆ ಬಿಜೆಪಿಗೆ ಅವಕಾಶ ಕಲ್ಪಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸೀಟು ಹಂಚಿಕೆ ಮಾಡಲಾಗಿದೆ ಎಂದು ಉಭಯ ನಾಯಕರು ಹೇಳಿದ್ದಾರೆ.

ವಿಡಿಯೊ ನೋಡಿ: ಸೆಕ್ಯೂಲರಿಸಂ ಹಾಗೂ ಸೊಶಿಯಲಿಸಂ ಬೆಸದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ – ಡಾ. ಪ್ರಕಾಶ್

Donate Janashakthi Media

Leave a Reply

Your email address will not be published. Required fields are marked *