ಸೂಸೈಡ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಐಎಎಸ್‌‍ ಆಕಾಂಕ್ಷಿ

ನವದೆಹಲಿ: ಐಎಎಸ್‌‍ ಆಕಾಂಕ್ಷಿಯೊಬ್ಬರು ಕೋಚಿಂಗ್‌ ಸೆಂಟರ್‌ಗಳಲ್ಲಿ ನಾಗರಿಕ ಸೇವಾ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆಗಿನ ಕಳವಳದ ನಡುವೆಯೇ ಆತಹತ್ಯೆ ಮಾಡಿಕೊಂಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಜುಲೈ 21 ರಂದು ಓಲ್ಡ್‌‍ ರಾಜಿಂದರ್‌ ನಗರದಲ್ಲಿ 26 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೂಸೈಡ್‌

ಮೂವರು ಯುಪಿಎಸ್‌‍ಸಿ ಆಕಾಂಕ್ಷಿಗಳು ಅದೇ ಪ್ರದೇಶದಲ್ಲಿ ಕೋಚಿಂಗ್‌ ಸೆಂಟರ್‌ನಲ್ಲಿ ಸಾವನ್ನಪ್ಪುವ ಕೆಲವು ದಿನಗಳ ಮೊದಲು ಯುಪಿಎಸ್‌‍ಸಿ ಆಕಾಂಕ್ಷಿಯಾಗಿದ್ದ ಮಹಿಳೆ ಓಲ್ಡ್‌‍ ರಾಜಿಂದರ್‌ ನಗರದಲ್ಲಿನ ತನ್ನ ಬಾಡಿಗೆ ವಸತಿಗಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ ವಿದ್ಯಾರ್ಥಿಯ ಸೂಸೈಡ್‌ ನೋಟ್‌ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ವಿಭಿನ್ನ ಬಣ್ಣದ ಕಣ್ಣುಗಳ ಚಿರತೆ ಕ್ಯಾಮೆರಾ ಕಣ್ಣಿಗೆ ಸೆರೆ!

ಸರ್ಕಾರಿ ಪರೀಕ್ಷೆಗಳಲ್ಲಿನ ಹಗರಣಗಳನ್ನು ಕಡಿಮೆ ಮಾಡಲು ಮತ್ತು ಯುವಕರಿಗೆ ಉದ್ಯೋಗಗಳನ್ನು ಸಷ್ಟಿಸಲು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಮೀಸಲಾದ ಪಿಜಿ ಮತ್ತು ಹಾಸ್ಟೆಲ್‌ಗಳಲ್ಲಿನ ಬಾಡಿಗೆಯನ್ನು ಕಡಿಮೆ ಮಾಡಲು ಡೆತ್‌ನೋಟ್‌ನಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

ಆದರೆ, ಪುರುಷನ ಕಿರುಕುಳದಿಂದ ಆಕೆ ಮಾನಸಿಕವಾಗಿ ನೊಂದಿದ್ದಳು ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ಉಪ ಪೊಲೀಸ್‌‍ ಕಮಿಷನರ್‌ (ಕೇಂದ್ರ) ಹರ್ಷ ವರ್ಧನ ಅವರು ವಿಚಾರಣೆಯನ್ನು ನಡೆಸುತ್ತಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ನೋಡಿ: ರಾಜ್ಯಪಾಲರು ಬಿಜೆಪಿ ಕೈಗೊಂಬೆ, ಅವರ ನೋಟಿಸ್​ಗೆ ಹೆದರಲ್ಲ – ಸಿಎಂ ಸಿದ್ದರಾಮಯ್ಯJanashakthi Media

Donate Janashakthi Media

Leave a Reply

Your email address will not be published. Required fields are marked *