ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ

ಬಿ.ಶ್ರೀಪಾದ ಭಟ್‌ ಅವರ ‘ವಿಷವಟ್ಟಿ ಸುಡುವಲ್ಲಿ’ ಪುಸ್ತಕ ಇಂದು  ಬಿಡುಗಡೆಯಾಗಲಿದೆ. ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಸಬೀಹಾ ಭೂಮಿಗೌಡ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪುಸ್ತಕ ನಗರದ ಸರಕಾರಿ ಕಲಾ ಕಾಲೇಜು (ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣದ ಬಳಿ) ಸಂಜೆ 4.30 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಕ್ರಿಯಾ ಮಾಧ್ಯಮ ಆಯೋಜಿಸಿದ್ದು, ಕಲಾ ಕಾಲೇಜಿನ ಕರ್ಣಾಟಕ ಸಂಘವು ಸಹಯೋಗ ನೀಡಿದೆ. ಈ ಕಾರ್ಯಕ್ರಮವು ಜನಶಕ್ತಿ ಮೀಡಿಯದಲ್ಲಿ ನೇರಪ್ರಸಾರವಾಗಲಿದೆ. ಈ   ಸಂದರ್ಭದಲ್ಲಿ ಈ ಪುಸ್ತಕದ ಆಯ್ದ ಭಾಗಗಳು.

ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ,

ದೇವರೆಂಬವರೆತ್ತ ಹೋದರೇನಿಂ ಭೋ

ಅಂದೊಮ್ಮೆ ಓಡಿಹೋಗಿ ಆ ಶಿವನ ಮರೆಯ ಹೋಗುವಂದು

ದೇವರೆಂಬವರೆತ್ತ ಹೋದರೇನಿಂ ಭೋ

ಕೂಡಲಸಂಗಯ್ಯ ದೇವರಿಗೆ ದೇವನು,

ಇವರೆಲ್ಲ ಆಳೆಂಬುದನರಿಯಿರಿಂ ಭೋ !

– ಬಸವಣ್ಣ

ಅಮೃತಕ್ಕಾಗಿ ನಡೆಸಿದ ಸಮುದ್ರ ಮಂಥನದ ಸಂದರ್ಭದಲ್ಲಿ ವಿಷವು ಉಕ್ಕಿ ಜೀವಜಗತ್ತಿಗೆ ಮಾರಕವಾದಾಗ, ಆ ವಿಷವನ್ನು ತಾನು ನುಂಗಿ ದೇವದಾನವರನ್ನು ಶಿವ ರಕ್ಷಿಸಿದನಂತೆ. ಮುಂದಿನ ಪೀಳಿಗೆಗೆ ಕೊಡಬೇಕಾದ ಜ್ಞಾನಾಮೃತಕ್ಕಾಗಿ ನಡೆಸುತ್ತಿರುವ ಶಿಕ್ಷಣ ಮಂಥನದ ಈ ಸಂದರ್ಭದಲ್ಲಿ, ಮತೀಯವಾದೀಕರಣದ ವಿಷವು ಸಮಾಜದ ತುಂಬಾ ಹರಡಿದೆ. ಜಗದ ಒಳಿತಿಗಾಗಿ ಸಾವಿಗೆ ಅಂಜದ  ‘ಶಿವರು’ ಈ ಮತೀಯವಾದೀಕರಣಧ ವಿಷ ಕುಡಿದು ಜ್ಞಾನಸುಧೆಯನ್ನು ಸಮಾನವಾಗಿ ಹಂಚಬೇಕಾಗಿದೆ. ಈ ನಿಟ್ಟಿನಲ್ಲಿ ಬಿ.ಶ್ರೀಪಾದ ಭಟ್ ಅವರ ‘ವಿಷವಟ್ಟಿ ಸುಡುವಲ್ಲಿ’ ಒಂದು ಗಮನಾರ್ಹ ಕೃತಿ. ವಿಷವಟ್ಟಿ ಸುಡುವಲ್ಲಿ

ಇದನ್ನೂ ಓದಿಅಕ್ಟೋಬರ್-13ರಂದು ವಿಷವಟ್ಟಿ ಸುಡುವಲ್ಲಿ ಪುಸ್ತಕ ಬಿಡುಗಡೆ

ಮತೀಯವಾದದ ವಿಷವನ್ನು ಹರಡುವಲ್ಲಿ ಜನಸಾಮಾನ್ಯರ ನಡುವೆ, ಶಿಕ್ಷಣದಲ್ಲಿ ಸಂಘಪರಿವಾರದ ಹೆಚ್ಚು ಕಡಿಮೆ ನೂರು ವರ್ಷಗಳ ಸತತ ಕಾರ್ಯಾಚರಣೆಯ ಬೆಚ್ಚಿಬೀಳಿಸುವ ವಿಧಾನಗಳ, ಸಾಧನಗಳ ವಿವರಗಳು ಇಲ್ಲಿವೆ.

ಒಂದು ಕಡೆ, ಜನಸಾಮಾನ್ಯರ ನಡುವೆ ಇತಿಹಾಸದ ತಿರುಚುವಿಕೆಯ, ಸೃಷ್ಟಿಸಿದ ಹುಸಿ ಇತಿಹಾಸದ  ಪಠ್ಯಗಳ ಮೂಲಕ ಈ ವಿಷವನ್ನು ಹರಡಲಾಗಿದೆ. ಇದೇ ಇಂದು ‘ಮುಸ್ಲಿಂ ದ್ವೇಷ’, ಪ್ರಾಚೀನ ಸಂಸ್ಕೃತಿಯ ಕುರಿತು ಅತಿರಂಜಿತ ಕುರುಡು ಅಭಿಮಾನ, ಬಹುತ್ವವನ್ನು ಧಿಕ್ಕರಿಸುವ ಪ್ರತಿಗಾಮಿ ಹಿಂದುತ್ವ ಮತ್ತು ಇವುಗಳ ಮೇಲೆ ಆಧಾರಿತ ಕುರುಡು ಉಗ್ರ ರಾಷ್ಟ್ರವಾದ ಜನರ ‘ಕಾಮನ್ ಸೆನ್ಸ್’ ಆಗಿದೆ.

ಇನ್ನೊಂದು ಕಡೆ, ಶಿಕ್ಷಣದ ಪಠ್ಯಪುಸ್ತಕಗಳ ಮೂಲಕ ಎಳೆ ಮನಸ್ಸುಗಳಲ್ಲೂ ಚಾತುರ್ವರ್ಣದ, ಬ್ರಾಹ್ಮಣೀಕರಣದ, ಮುಸ್ಲಿಂ ದ್ವೇಷದ, ಉಗ್ರ ರಾಷ್ಟ್ರವಾದದ ನಂಜು ಹರಡುವ ಸತತ ಕಾರ್ಯಾಚರಣೆಗಳನ್ನು, ಈ ಫಠ್ಯಗಳ ಸ್ಯಾಂಪಲ್ ಗಳೊಂದಿಗೆ ಕಣ್ಣಿಗೆ ಕಟ್ಟುವಂತೆ ನಿರೂಪಿಸಲಾಗಿದೆ. ಸಂಘ ಪರಿವಾರ ತನ್ನದೇ ಶಿಕ್ಷಣ ಸಂಸ್ಥೆಗಳು, ಪಠ್ಯಗಳ ಮೂಲಕ ಇದನ್ನು ಸಾಧಿಸುತ್ತಿರುವುದರ ಸ್ಥೂಲ ಇತಿಹಾಸ ಇಲ್ಲಿದೆ. ಇವಲ್ಲದೆ ಸಂಘ ಪರಿವಾರ ನಿಯಂತ್ರಿತ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಶಿಕ್ಷಣ ಕ್ಷೇತ್ರದೊಳಗೆ ನುಸುಳಿ ಸಾರ್ವಜನಿಕ ಪಠ್ಯಗಳನ್ನು ಸಹ ನಂಜಾಗಿಸಿದ್ದರ ಇತಿಹಾಸವೂ ಇಲ್ಲಿದೆ. ರಾಷ್ಟ್ರೀಯ ಮಟ್ಟದಲ್ಲಿ, ಕರ್ನಾಟಕದಲ್ಲಿ ಪಠ್ಯಪುಸ್ತಕಗಳಲ್ಲಿ ಮತೀಯವಾದೀಕರಣ, ಇತಿಹಾಸದ ತಿರುಚುವಿಕೆ ಗಳ ಪ್ರಯತ್ನಗಳು ಮತ್ತು ಅದಕ್ಕೆ ಪ್ರತಿರೋಧದ ನಿರೂಪಣೆ ಇಲ್ಲಿದೆ.

ಇವಲದೆ ಈ ವಿಷವನ್ನು ಸುಟ್ಟು  ಬಹುತ್ವ ರಕ್ಷಿಸುತ್ತಲೇ ಜಾತೀಯತೆಯನ್ನು ನಾಶ ಮಾಡುವ, ಆರೋಗ್ಯಕರ ರಾಷ್ಟ್ರವಾದ ಬೆಳೆಸುವ, ವಾಸ್ತವ ಇತಿಹಾಸ ಪರಿಚಯಿಸುವ ಪಠ್ಯಪುಸ್ತಕ, ವ್ಯಾಸಂಗಕ್ರಮ ಗಳನ್ನು ಹುಟ್ಟು ಹಾಕುವ ಮುಂದಣ ದಾರಿಯ ಸ್ಥೂಲ ಚಿಂತನೆಯೂ ಇಲ್ಲಿದೆ. ವಿಷವಟ್ಟಿ ಸುಡುವಲ್ಲಿ

(ಪ್ರಕಾಶಕರ ಮಾತಿನಿಂದ)

ವಿಡಿಯೋ ನೋಡಿ:ಒಂದು ದೇಶ, ಒಂದು ಚುನಾವಣೆ : ಬಿಜೆಪಿ ಸರ್ಕಾರದ ಗುಪ್ತ ಅಜೆಂಡವೇನು? ಈ ವಾರದ ನೋಟ ಕಾರ್ಯಕ್ರಮದಲ್ಲಿ ವಿಷವಟ್ಟಿ ಸುಡುವಲ್ಲಿ

Donate Janashakthi Media

Leave a Reply

Your email address will not be published. Required fields are marked *