ಕಲಬುರಗಿ: ಅಮಿತ್ ಶಾ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ

ಕಲಬುರಗಿ : ಸಂಸತನಲ್ಲಿ ಡಾ.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಮಂತ್ರಿ ಅಮಿತಾ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಕಲಬುರ್ಗಿಯಲ್ಲಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ನಗರದ ಅಂಬೇಡ್ಕರ್ ವೃತದಲ್ಲಿ ಅಮಿತ ಶಾ ಅವರ ಭಾವಚಿತ್ರ ದಹಿಸಿ ಸದನದಲ್ಲಿ ಅವರು ನೀಡಿರುವ ಹೇಳಿಕೆಯಿಂದ ಪ್ರಪಂಚವೇ ತಲೆ ತಗ್ಗಿಸುವಂತಹದ್ದಾಗಿದೆ. ಮೋದಿ ಮತ್ತು ಸಂಘ ಪರಿವಾರ ಸಂವಿಧಾನ ದುರ್ಬಲಗೊಳಿಸುವುದು ಮುನ್ನುಡಿಯಾಗಿದೆ. ಇಂತಹ ಹೇಳಿಕೆ ನೀಡಿರುವ ಅಮಿತ ಶಾ ತನ್ನ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದರೆ ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಆಮಿತ ಶಾ ಅವರನ್ನು ವಜಾ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಹಾಗೂ ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ದಲಿತ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಡಿವೈಎಫ್‌ಐ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್ ಮುಖಂಡರಾದ ಸರ್ವೇಶ ಮಾವಿನಕರ್, ವೈ. ಸುಜಾತಾ, ಅಶ್ವಿನಿ ಮಾವಿನಕರ್, ಭರತ್, ಪ್ರೇಮ್, ಹುಲಿಗಮ್ಮ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚಿತ್ತಾಪುರದಲ್ಲಿ ಸಿಪಿಐ(ಎಂ) ನಿಂದ ಪ್ರತಿಭಟನೆ : ಅಮಿತ್ ಶಾ ಹೇಳಿಕೆಯನ್ನು ಖಂಡಿಸಿ ಸಿಪಿಐ(ಎಂ) ನಿಂದ ಪ್ರತಿಭಟನೆ ನಡೆಯಿತು.

ಶಹಾಬಾದ್ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಪಿಐ(ಎಂ) ಚಿತ್ತಾಪುರ ಕಾರ್ಯದರ್ಶಿ ಶೇಖಮ್ಮ ಕುರಿ ಮಾತನಾಡಿ,
ಸಚಿವ ಸಂಪುಟದಿಂದ ಅಮಿತ್ ಶಾ ಅವರನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಈ ಪ್ರತಿಭಟನೆ ಯಲ್ಲಿ ಮುಖಂಡರಾದ ನಾಗಪ್ಪ ರಾಯಚೂರಕರ್, ಮೈತ್ರಾದೇವಿ ಕಾಶಿನಾಥ ಬಂಡಿ, ಬೀಮಶ್ಯಾ ಹಳ್ಳಿ. ಕಟ್ಟಡ ಕಾರ್ಮಿಕ ಮುಖಂಡರು.ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರಿದ್ದರು.

Donate Janashakthi Media

Leave a Reply

Your email address will not be published. Required fields are marked *