ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಸಿ.ಟಿ.ರವಿ ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದು ನಿಜ, ನಾವೇ ಕೇಳಿಸಿಕೊಂಡಿದ್ದೇವೆ: ಎಂಎಲ್‌ಸಿ ಉಮಾಶ್ರೀ ಪ್ರತಿಕ್ರಿಯೆ

Please follow and like us:
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಅಕ್ಷೇಪಾರ್ಹ ಪದ ಬಳಕೆ ಮಾಡಿರುವ ಕಾರಣ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ವಿರುದ್ದ  ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಎಲ್ ಸಿ ಉಮಾಶ್ರೀ, ಸಿ.ಟಿ.ರವಿ ಆ ರೀತಿ ಪದ ಬಳಕೆ ಮಾಡಿದ್ದು ನಿಜ ನಾವೇ ಕೇಳಿಸಿಕೊಂಡಿದ್ದೇವೆ ಎಂದು ಕಿಡಿಕಾರಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಉಮಾಶ್ರೀ, ಅಂಬೇಡ್ಕರ್ ಕುರಿತು ಅಮಿತ್‌ ಶಾ ನೀಡಿರುವ ಹೇಳಿಕೆ ಖಂಡಿಸಿ ಕಾಂಗ್ರೆಸ್ ನಾಯಕರೆಲ್ಲರೂ ಪರಿಷತ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನಚಕಮಕಿ ನಡೆದಿದೆ. ಈ ವೇಳೆ ಬಿಜೆಪಿ ಸದಸ್ಯ ಸಿಟಿ.ರವಿ ರಾಹುಲ್‌ ಗಾಂಧಿಯವರನ್ನು ನಿಂದಿಸಿ ಮಾತನಾಡಿದ್ದಾರೆ.

ಇದನ್ನೂ ಓದಿ : ಅಂಬೇಡ್ಕರ್ ವಿರುದ್ಧ ಗೃಹ ಸಚಿವರ ಅಗೌರವದ ಹೇಳಿಕೆ ಖಂಡನೀಯ; ಸಂವಿಧಾನ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಿರಿ: ಡಿವೈಎಫ್ಐ

ಇದಕ್ಕೆ ಸಚಿವ ಲಕ್ಷ್ಮಿ ಹೆಬ್ಬಾಳ‌ ಆಕ್ಷೇಪ ವ್ಯಕ್ತಪಡಿಸಿ, ನಿಮ್ಮ ಮೇಲೂ ಆಕ್ಸಿಡೆಂಟ್ ಆರೋಪವಿದೆ. ಹಾಗಂತ ನಿಮ್ಮನ್ನು ಕೊಲೆಗಡುಕ ಎಂದು ಕರೆಯಬಹುದಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಿಟಿ ರವಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಕೆಟ್ಟ ಪದದಿಂದ ನಿಂದಿಸಿದ್ದಾರೆ ಎಂದು ತಿಳಿಸಿದರು.

ಸಿ.ಟಿ.ರವಿ ಆ ಪದ ಬಳಕೆ ಮಾಡಿದ್ದು ನಿಜ. ನಾವೆಲ್ಲರೂ ಕೇಳಿಸಿಕೊಂಡಿದ್ದೇವೆ. ಅಂಥಹ ಪದ ಬಳಕೆ ಯಾವ ಹೆಣ್ಣುಮಗಳಿಗೆ ನೋವಾಗಲ್ಲ? ಅವರು ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದಕ್ಕೆ ನಾವಲ್ಲರೂ ಸಾಕ್ಷಿ ಇದ್ದೇವ. ಅದಕ್ಕೆ ಸಭಾಪತಿಗಳಿಗೆ ದೂರು ನೀಡಿದ್ದೇವ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿ.ಟಿ.ರವಿ ಏನೇ ಸಮಜಾಯಿಷಿ ನೀಡಲಿ, ಅವರು ಅವಾಚ್ಯ ಪದ ಬಳಕೆ ಮಾಡಿದ್ದು ನಿಜ. ಅವರ ವಿರುದ್ಧ ಕ್ರಮವಾಗಬೇಕು. ಪರಿಷತ್ ಸದಸ್ಯ ಸ್ಥಾನದಿಂದ ಅವರನ್ನು ಪದಚ್ಯುತಗೊಳಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ನೋಡಿ : ಸದನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಆಕ್ಷೇಪಾರ್ಹ ಪದಬಳಸಿದ ಸಿಟಿ ರವಿ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *