ಅಮಿತ್ ಶಾಗೆ ಇತಿಹಾಸ ತಿರುಚಿಯೆಷ್ಟೆ ಅಭ್ಯಾಸ: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ದೇಶ ಎದುರಿಸುತ್ತಿರುವ ನೈಜ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯಲು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಬಗ್ಗೆ ಮಾತನಾಡುತ್ತಲೇ ಇದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ತಿರುಗೇಟು ನೀಡಿದ್ದಾರೆ. ಜಾತಿ ಆಧಾರಿತ ಜನಗಣತಿಯ ಬೇಡಿಕೆಯನ್ನು ಪುನರುಚ್ಚರಿಸಿದ ಅವರು, ಸರ್ಕಾರವು ಅದರ ಬಗ್ಗೆ ಚರ್ಚಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನೆಹರು ಅವರ ಪಾತ್ರದ ಬಗ್ಗೆ ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಅವರು (ನೆಹರು) ಭಾರತಕ್ಕಾಗಿ ತಮ್ಮ ಪ್ರಾಣವನ್ನು ನೀಡಿದರು ಮತ್ತು ಹಲವು ವರ್ಷಗಳ ಕಾಲ ಜೈಲಿನಲ್ಲಿ ಕಳೆದರು, ಅಮಿತ್ ಶಾ ಅವರಿಗೆ ಇತಿಹಾಸದ ಅರಿವಿಲ್ಲ, ಅವರು ಇತಿಹಾಸವನ್ನು ತಿಳಿದುಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ. ಅವರಿಗೆ ಇತಿಹಾಸ ಬದಲಿಸಿಯೆ ಅಭ್ಯಾಸ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಸಾಲ ಮನ್ನಾಕ್ಕೆ ಬಿಜೆಪಿ ಸದಸ್ಯರ ಆಗ್ರಹ

“ಇವೆಲ್ಲವೂ ಗಮನ ಸೆಳೆಯುವ ತಂತ್ರಗಳು. ಮೂಲಭೂತ ವಿಷಯವೆಂದರೆ ಜಾತಿ ಆಧಾರಿತ ಜನಗಣತಿ ಮತ್ತು ಜನರ ಒಳಗೊಳ್ಳುವಿಕೆ ಮತ್ತು ಹಣ ಯಾರ ಕೈಗೆ ಹೋಗುತ್ತಿದೆ? ಎಂಬುದಾಗಿದೆ. ಅವರು ಈ ವಿಷಯವನ್ನು ಚರ್ಚಿಸಲು ಬಯಸುವುದಿಲ್ಲ, ಅವರು ಇದರಿಂದ ಓಡಿಹೋಗುತ್ತಾರೆ. ನಾವು ಈ ವಿಷಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇವೆ ಮತ್ತು ಬಡವರಿಗೆ ಅರ್ಹವಾದದ್ದನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳುತ್ತೇವೆ” ಎಂದು ರಾಹುಲ್ ಗಾಂಧಿ ಭರವಸೆ ನಿಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಒಬಿಸಿ ವರ್ಗದಿಂದ ಬಂದವರು ಆದರೆ ಕೇಂದ್ರ ಸರ್ಕಾರವನ್ನು 90 ಜನರು ನಡೆಸುತ್ತಿದ್ದಾರೆ ಮತ್ತು ಅವರಲ್ಲಿ ಕೇವಲ ಮೂವರು ಒಬಿಸಿ ವರ್ಗದವರು ಮತ್ತು ಅವರ ಕಚೇರಿಗಳು ಮೂಲೆಯಲ್ಲಿವೆ ಎಂದು ಅವರು ಹೇಳಿದ್ದಾರೆ.

“ನನ್ನ ಪ್ರಶ್ನೆ ಸಾಂಸ್ಥಿಕ ವ್ಯವಸ್ಥೆಯಲ್ಲಿ ಒಬಿಸಿಗಳು, ದಲಿತರು ಮತ್ತು ಬುಡಕಟ್ಟುಗಳ ಭಾಗವಹಿಸುವಿಕೆಯ ಬಗ್ಗೆಯಾಗಿದೆ. ಆದರೆ ಈ ಸಮಸ್ಯೆಯಿಂದ ನಮ್ಮನ್ನು ಬೇರೆಡೆಗೆ ತಿರುಗಿಸಲು ಅವರು ಜವಾಹರಲಾಲ್ ನೆಹರು ಮತ್ತು ಇತರರ ಬಗ್ಗೆ ಮಾತನಾಡುತ್ತಾರೆ ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ವಿಡಿಯೊ ನೋಡಿ: ಲೋಕಸಭಾ ಸದಸ್ಯರ ಕಚೇರಿ ಮುಂದೆ ಪ್ರತಿಭಟನೆ : ಸ್ಕೀಂ ನೌಕರರ ಸಮಾವೇಶದ ನಿರ್ಣಯ

Donate Janashakthi Media

Leave a Reply

Your email address will not be published. Required fields are marked *