ಮುಖೇಶ್ ಅಂಬಾನಿಯ ರಿಲೈಯನ್ಸ್ ಇಂಡಸ್ಟ್ರಿಸ್ ಕಂಪನಿ ಅಮೇರಿಕದ ತೈಲ ಸಂಸ್ಕರಣ ಘಟಕವನ್ನು ಬ್ರೌನ್ಸವಿಲ್ಲೆ ಬಂದರಿರುವ ಟೆಕ್ಸಾಸ್ ಪ್ರಾಂತದಲ್ಲಿ ಪ್ರಾರಂಭಿಸಲು ಹೂಡಿಕೆ ಮಾಡಲು ಹೊರಟಿದೆ ಎಂದು ಅಮೇರಿಕದ ಅಧ್ಯಕ್ಷ ಡೊನಾಲ್ಡ ಟ್ರಂಪ್ ಈ ವಾರದ ಮೊದಲ ಭಾಗದಲ್ಲಿ ಘೋಷಿಸಿದ್ದಾರೆ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಇದು ಬಹು ಮುಖ್ಯ ಬೆಳವಣಿಗೆ. ಟ್ರಂಪ್ ಪ್ರಕಾರ ಇದು ಅಮೇರಿಕದ ಇತಿಹಾಸದಲ್ಲಿಯೇ ಬಹುದೊಡ್ಡ ವಹಿವಾಟು. ಇದರ ಗಾತ್ರ 300 ಶತಕೋಟಿ ಡಾಲರುಗಳು. ರಿಲಯನ್ಸ್
ಜಿ.ಎಸ್. ಮಣಿ
ಯುಎಸ್ ನ ಶೇಲ್ ತೈಲವನ್ನು ರಿಲೈಯನ್ಸ್ ಇಂಡಸ್ಟ್ರಿಸ್ ಸಂಸ್ಕರಿಸಿ ವಿತರಣೆ ಮಾಡುತ್ತದೆ ಎಂದು ಟ್ರಂಪ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಇದೊಂದು ಚಾರಿತ್ರಿಕ 300 ಬಿಲಿಯನ್ ಡಾಲರ್ ವ್ಯವಹಾರ-ಯುಎಸ್‍ನ ಇತಿಹಾಸದಲ್ಲಿ ಅತಿ ದೊಡ್ಡದು, ಅಮೆರಿಕನ್ ಕಾರ್ಮಿಕರಿಗೆ, ಇಂಧನಕ್ಕೆ,ಮತ್ತು ದಕ್ಷಿಣ ಟೆಕ್ಸಾಸ್ ನ ಮಹಾನ್ ಜನತೆಗೆ ಒಂದು ಬೃಹತ್ ಗೆಲುವು! ಭಾರತದಲ್ಲಿನ ನಮ್ಮ ಪಾಲುದಾರರಿಗೆ, ಅವರ ಅತ್ಯಂತ ದೊಡ್ಡ ಖಾಸಗಿ ಇಂಧ ನಕಂಪನಿ ರಿಲಯಂಸ್ ಗೆ ಈ ಪ್ರಚಂರ ಹೂಡಿಕೆಗೆ ಧನ್ಯವಾದಗಳೂ” ಎಂದು ಟ್ರಂಪ್ ಹೇಳೀರುವುದಾಗಿ ವರದಿಯಾಗಿದೆ. ಅಮೇರಿಕಾ ಫರ್ಸ್ಟ್ ರಿಫೈನಿಂಗ್ ಕಂಪನಿ ಅಮೇರಿಕದ ಶೇಲ್ ತೈಲವನ್ನು ಸಂಸ್ಕರಿಸಲು ಈ ಯೋಜನೆ ಉದ್ದೇಶಿಸಿದ್ದು 20 ವರ್ಷಗಳ ಮಾರಾಟ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ನ್ನಲಾಗಿದೆ. ಆದರೆ ಅದೇಕೋ ರಿಲಯಂಸ್ ಕಂಪನಿ ಇದನ್ನು ದೃಢಪಡಿಸಿಯೂ ಇಲ್ಲ, ನಿರಾಕರಿಸಿಯೂ ಇಲ್ಲ ಎಂಬುದು ಗಮನಾರ್ಹ. ಅದರ ಒಡೆತನದ ಹಲವಾರು ಟಿವಿ ಚಾನಲ್‍ಗಳೂ ಈ ಬಗ್ಗೆ ಮೌನ ವಾಗಿವೆ. ಅದೇ ರೀತಿ ಭಾರತ ಸರಕಾರವೂ.
ಇದನ್ನೂ ಓದಿ : ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ: ಹರೀಶ್ ರಾಣಾಗೆ ಭಾವುಕ ವಿದಾಯ ರಿಲಯನ್ಸ್
ಡೊನಾಲ್ಡ ಟ್ರಂಪ್ ಭಾರತದ ದುಡಿಮೆಗಾರರು ಅಮೇರಿಕಕ್ಕೆ ಹೋಗಲು ಸಾಕಷ್ಟು ಅಡೆತಡೆಗಳನ್ನು ಮಾಡಿದರೂ ಮುಖೇಶ್ ಅಂಬಾನಿಯ ಬಂಡವಾಳ ಹೂಡಿಕೆಯನ್ನು ಸ್ವಾಗತಿಸುತ್ತಾರೆ. ಅದೇ ರೀತಿ ಮುಖೇಶ್ ಅಂಬಾನಿ ಭಾರತದೊಳಗೆ ಹೂಡಿಕೆ ಮಾಡಲು ಇರುವುದಕ್ಕಿಂತ ಹೆಚ್ಚಿನ ಉತ್ಸಾಹವನ್ನು ಅಮೇರಿಕದಲ್ಲಿ ಹೂಡಿಕೆ ಮಾಡುವಲ್ಲಿ ತೋರುತ್ತಾರೆ. ಇದು ಬಂಡವಾಳಿಗರ ದೇಶಭಕ್ತಿಯ ವೈಖರಿ. ಇಂಡಿಯಾ ಫರ್ಸ್ಟ್ ಬದಲು ಅಮೇರಿಕ ಫರ್ಸ್ಟ್ ಎನ್ನಲು ಭಾರತದ ಪ್ರಧಾನ ಮಂತ್ರಿಗಳ ಪರಮಾಪ್ತ ಬಂಡವಳಿಗನಿಗೆ ಮುಜುಗರವೇನೂ ಇಲ್ಲ. ಬಹುಶಃ ಪ್ರಧಾನಿಗಳಿಗೂ ಕೂಡ.
ಇದರ ಬೆನ್ನಹಿಂದೆಯೇ ರಷ್ಯಾದಿಂದ ತೈಲ ಖರೀದಿಗೆ ಭಾರತಕ್ಕೆ ಯುಎಸ್‍ನ “30 ದಿನಗಳ ಅನುಮತಿ”ಯಲ್ಲಿ “ರಿಲಯಂಸ್ ಮುಖಂಡತ್ವ” ಪ್ರಮುಖ ಪಾತ್ರ ವಹಿಸಿತ್ತು ಎಂಬ ವರದಿಯೂ ಬಂದಿದೆ. ಅಂದರೆ ಭಾರತದ ವಿದೇಶಾಂಗ ನೀತಿಯನ್ನೂ ‘ಅಮೆರಿಕ ಫಸ್ಟ್’ ಮಂದಿಯೇ ನಿರ್ಧರಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಕೇಳಲಾಗುತ್ತಿದೆ. ರಿಲಯನ್ಸ್

ಮಗ+ಮಿಗ=ಮೆಗ
ವ್ಯಂಗ್ಯಚಿತ್ರ ಕೃಪೆ: ಸಜಿತ್ ಕುಮಾರ್,ಡೆಕ್ಕನ್ ಹೆರಾಲ್ಡ್
ಇದನ್ನೂ ನೋಡಿ : ದೇಹ ರಾಜಕಾರಣ ಮತ್ತು ಲೈಂಗಿಕ ದೌರ್ಜನ್ಯ – ಡಾ. ವಿನಯಾ ಒಕ್ಕುಂದ Janashakthi Media
