ಜಮ್ಮು ಮತ್ತು ಕಾಶ್ಮೀರವನ್ನು ಪುರಸಭೆ ಮಟ್ಟಕ್ಕಿಳಿಸುವ ತಿದ್ದುಪಡಿ: ತರಿಗಾಮಿ ತೀವ್ರ ಟೀಕೆ

ದಹಲಿ : ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ 2019 ಆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶದ ಮಟ್ಟಕ್ಕೆ ಇಳಿಸಿತ್ತು. ಈಗ ಒಕ್ಕೂಟ ಗೃಹ ವ್ಯವಹಾರಗಳ ಸಚಿವಾಲಯದ ಇತ್ತೀಚಿನ ತಿದ್ದುಪಡಿಗಳು, ಜಮ್ಮು-ಕಾಶ್ಮೀರದ ಅಳಿದುಳಿದ ಹಕ್ಕುಗಳ ಮೇಲೂ ದಾಳಿ ಮಾಡುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಸಿಪಿಐ(ಎಂ) ಮುಖಂಡ ಮಹಮ್ಮದ್‍ ಯುಸುಫ್‍ ತರಿಗಾಮಿ ಖೇದ ವ್ಯಕ್ತಪಡಿಸಿದ್ದಾರೆ.

ಇದು ಈ ಐತಿಹಾಸಿಕ ರಾಜ್ಯವನ್ನು ಒಂದು ದೊಡ್ಡ ಪುರಸಭೆಯ ಮಟ್ಟಕ್ಕೆ ಇಳಿಸುವ ಮತ್ತೊಂದು ಲಜ್ಜೆಗೆಟ್ಟ ಆಕ್ರಮಣ ಎಂದು ಅವರು ಬಲವಾಗಿ ಟೀಕಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನವನ್ನು ಮತ್ತೆ ಕೊಡಲಾಗುವುದು ಎಂದು ಬಿಜೆಪಿ ಸರಕಾರ ಪದೇ-ಪದೇ ಕೊಡುತ್ತ ಬರುತ್ತಿರುವ ಆಶ್ವಾಸನೆಗೆ ಅದು ಮತ್ತೊಮ್ಮೆ ವಿಶ್ವಾಸಘಾತ ಬಗೆದಿದೆ.

ಇದನ್ನು ಓದಿ : 2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಕಡಿಮೆ: ಬಿಜೆಪಿ ಶಾಸಕ ರಮೇಶ್

2018 ರಿಂದಲೂ ವಿಧಾನಸಭೆ ಇಲ್ಲದೇ ಇರುವ ಏಕೈಕ ಕೇಂದ್ರಾಡಳಿತ ಪ್ರದೇಶ ಇದಾಗಿದೆ.  ಇಲ್ಲಿ ಈಗ ಸಾಮಾನ್ಯ ಸ್ಥಿತಿ ಏರ್ಪಟ್ಟಿದೆ ಎಂದು ಸರಕಾರ ಮತ್ತೆ-ಮತ್ತೆ ಹೇಳಿಕೊಳ್ಳುತ್ತಿದ್ದರೂ, ಇಲ್ಲಿಯ ಜನರು ಒಂದು ಚುನಾಯಿತ ವಿಧಾನಸಭೆಯನ್ನು ಹೊಂದುವ ಅವರ ಕಾನೂನುಬದ್ಧ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದಿರುವ ತರಿಗಾಮಿ, ಇದೊಂದು ಸರ್ವಾಧಿಕಾರಿ ಆದೇಶ ಎಂದು ಟೀಕಿಸುತ್ತ, ಚುನಾವಣೆಗಳನ್ನು ನಡೆಸಲಾಗುವುದು ಎಂಬ ಮಾತು ಮತ್ತೆ ಕೇಳಬರುತ್ತಿರುವಾಗಲೇ ಈ ಇಡೀ ಪ್ರದೇಶದ ಜನರಿಗೆ ಆಘಾತವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ಇದು ಜನರ ಹಕ್ಕುಗಳನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ, ಚುನಾವಣೆಗಳು ನಡೆದರೂ, ಜನರು ಯಾವುದೇ ರೀತಿಯಲ್ಲಿ ಇದೊಂದು ಸಾಧನೆ ಎಂದು ಕಾಣಲು ಸಾಧ್ಯವಾಗುವುದಿಲ್ಲ, ಏಕೆಂದರೆ ಅವರು ಚುನಾಯಿಸುವ ವಿಧಾನಸಭೆ ಅವರಿಗೆ ಯಾವುದೇ ಗಣನೀಯ ಪರಿಹಾರವನ್ನು ಒದಗಿಸುವ ಅಧಿಕಾರವನ್ನು ಹೊಂದಿರುವುದಿಲ್ಲ.

ಈ ನಿರಂಕುಶ ನಡೆಯನ್ನು ತಮ್ಮ ಪಕ್ಷ ಸಾರಾಸಗಟಾಗಿ ತಿರಸ್ಕರಿಸುತ್ತದೆ ಮತ್ತು ಅದನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸುತ್ತದೆ ಎಂದು ಸಿಪಿಐ(ಎಂ)ನ ಕೇಂದ್ರ ಸಮಿತಿ ಸದಸ್ಯರೂ ಆಗಿರುವ ತರಿಗಾಮಿಯವರು ಆಗ್ರಹಿಸಿದ್ದಾರೆ. ಈ ಕರಾಳ ಆದೇಶದ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತುವಂತೆ ತಮ್ಮ ಪಕ್ಷ ಎಲ್ಲಾ ವಿಭಾಗಗಳ ಜನರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಮನವಿ ಮಾಡುವುದಾಗಿ ಅವರು ಹೇಳಿದ್ದಾರೆ.

ಇದನ್ನು ನೋಡಿ : ಅಯೋಧ್ಯೆಯಲ್ಲಿ ಬಿಜೆಪಿಯನ್ನುಸೋಲಿಸಿದಂತೆ ಗುಜರಾತ್‌ನಲ್ಲೂ ಸೋಲಿಸುತ್ತೇವೆ – ರಾಹುಲ್ ಗಾಂಧಿJanashakthi Media

Donate Janashakthi Media

Leave a Reply

Your email address will not be published. Required fields are marked *