ಅಂಬೇಡ್ಕರ್ ಭವನ-ಗ್ರಂಥಾಲಯ ನಿರ್ಮಾಣಕ್ಕೆ ಅಡ್ಡಿ: ಜಾತಿವಾದಿಗಳ ವಿರುದ್ಧ ಪ್ರತಿಭಟನೆ

ಬೇಲೂರು: ತಾಲ್ಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ಮುಂಭಾಗದಲ್ಲಿ ಖಾಲಿ ಇದ್ದ ರೆವಿನ್ಯೂ ಜಾಗದಲ್ಲಿ ಹಲವು ವರ್ಷಗಳಿಂದ ಡಾ.ಬಿ.ಆರ್ ಅಂಬೇಡ್ಕರ್ ಫಲಕವನ್ನು ಹಾಕಿ ಆ ಜಾಗದಲ್ಲಿ ಅಂಬೇಡ್ಕರ್ ಭವನ ಮತ್ತು ಗ್ರಂಥಾಲಯ  ನಿರ್ಮಿಸುವಂತೆ ಅಲ್ಲಿಯ ದಲಿತರು ಸ್ಥಳೀಯ ಆಡಳಿತಕ್ಕೆ ಮನವಿ ಮಾಡುತ್ತಾ ಬಂದಿರುತ್ತಾರೆ. ಆದರೆ ಇದನ್ನು ಸಹಿಸದ ಅಲ್ಲಿಯ ಲಿಂಗಾಯತ ಸಮುದಾಯದ ಕೆಲವರು ಅಂಬೇಡ್ಕರ್ ಭಾವಚಿತ್ರದ ಫಲಕವಿರುವಲ್ಲಿಗೆ ಕಸದ ತಿಪ್ಪೆ ಹಾಕುತ್ತಿದ್ದರು.

ಈ ಬಗ್ಗೆ ಯಲಹಂಕ ಗ್ರಾಮ ಪಂಚಾಯತಿಗೆ ದೂರು ನೀಡಿ ಕಸದ ಸಿಪ್ಪೆಯನ್ನು ತೆರವುಗೊಳಿಸಲಾಗಿತ್ತು. ಇದಕ್ಕೆ ಕುಪಿತಗೊಂಡ ಜಾತಿವಾದಿಗಳು, ಆ ಜಾಗದಲ್ಲಿ ಹಾಲಿನ ಡೈರಿ ಮಾಡಬೇಕೆಂಬ ನೆಪದಲ್ಲಿ ವಿನಾಃಕಾರಣ ಕ್ಯಾತೆ ತೆಗೆದು ಅಂಬೇಡ್ಕರ್ ಭವನ, ಗ್ರಂಥಾಲಯ ಮಾಡಬಾರದೆಂಬ ದುರುದ್ಧೇಶದಿಂದ ಸದರಿ ಜಾಗಕ್ಕೆ ಮಣ್ಣು ಸುರಿದು ಕಂಬ ನೆಟ್ಟು ಅಡಚಣೆ ಮಾಡಿ, ಅಶಾಂತಿ ವಾತಾವರ ಸೃಷ್ಟಿಸಿದ್ದಾರೆ.

ಜಾತಿವಾದಿ, ಅಂಬೇಡ್ಕರ್ ಮತ್ತು ದಲಿತ ವಿರೋಧಿಗಳ ಈ ನಡವಳಿಕೆ ವಿರುದ್ಧ ಕ್ರಮ ಜರುಗಿಸಿ, ಅಂಬೇಡ್ಕರ್ ಭವನ ಹಾಗು ಗ್ರಂಥಾಲಯಕ್ಕೆ ಜಾಗ ಮುಂಜೂರು ಮಾಡಬೇಕೆಂದು ಆಗ್ರಹಿಸಿ ಮಲ್ಲಿಕಾರ್ಜುನ ಪುರದ ಅದೇ ಸ್ಥಳದಲ್ಲಿ ಗ್ರಾಮದ ದಲಿತರು ಶನಿವಾರ(ಆಗಸ್ಟ್‌ 06) ಪ್ರತಿಭಟನೆ ನಡೆಸಿದರು.

ಹಿರಿಯ ದಲಿತ ಮುಖಂಡ ಎಚ್.ಕೆ‌. ಸಂದೇಶ್, ದಲಿತ ಹಕ್ಕುಗಳ ಸಮಿತಿ-ಕರ್ನಾಟಕ(ಡಿಎಚ್‌ಎಸ್) ಜಿಲ್ಲಾ ಸಂಚಾಲಕ ಪೃಥ್ವಿ ಎಂ.ಜಿ., ಆರ್‌ಪಿಐ. ಜಿಲ್ಲಾಧ್ಯಕ್ಷ ಸತೀಶ್, ಬೇಲೂರು‌ ತಾಲ್ಲೂಕಿನ ದಲಿತ ಮುಖಂಡ ತಿರುಮಲನಹಳ್ಳಿ ಶಿವಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಅದೇ ಗ್ರಾಮದ ಮಹೇಶ್, ಸಿದ್ದೇಶ್, ದರ್ಶನ್, ಕಿರಣ್, ರಾಜು, ಚಂದ್ರು, ಚಂದ್ರಯ್ಯ ಇನ್ನಿತರ ಗ್ರಾಮಸ್ಥರು  ಭಾಗವಹಿಸಿದ್ದರು.

ತಾಲ್ಲೂಕು ದಂಡಾಧಿಕಾರಿಗೆ ಮನವಿ

ಸ್ಥಳಕ್ಕೆ ಆಗಮಿಸಿ ಹಕ್ಕೊತ್ತಾಯದ ಮನವಿ ಸ್ವೀಕರಿಸಿ, ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಬೇಲೂರು ತಾಲ್ಲೂಕು ದಂಡಾಧಿಕಾರಿಗಳು ಭರವಸೆ ನೀಡಿದರು. ತದನಂತರ ಬೇಲೂರು ಶಾಸಕಾರಾದ ಕೆ.ಎಸ್ ಲಿಂಗೇಶ್ ಆಗಮಿಸಿ‌ ಪ್ರತಿಭಟನಾ ನಿರತರ ಅಹವಾಲು ಕೇಳಿ‌, ಎರಡೂ ಸಮುದಾಯದವರನ್ನು ಕರೆದು ತಾತ್ಕಾಲಿಕ ಪರಿಹಾರೋಪಾಯ ನೀಡು‌ವುದರೊಂದಿಗೆ ಸಮಸ್ಯೆಯನ್ನು ಪರಿಹರಿಸಲಾಗಿದ್ದು, ಪ್ರತಿಭಟನೆ ತಾರ್ಕಿಕವಾಗಿ ಕೊನೆಗೊಂಡಿತು.

ಈ ಸಂಧರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮೋಹನ್, ಸ್ಥಳೀಯ ಎಸ್ಐ ದೇವರಾಜು ಸೇರಿದಂತೆ ಇತರ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಡಿಎಸ್‌ಎಸ್ ನ ಹುಲಿಕೆರೆ ಕುಮಾರ್, ಹಳೇಬೀಡು ನಿಂಗರಾಜು‌, ಕೃಷ್ಣ, ಪುಟ್ಟಸ್ವಾಮಿ‌ ನಂಜಾಪುರ, ದೇವಿಹಳ್ಳಿ ಮಲ್ಲಿಕಾರ್ಜುನ ಮತ್ತಿತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *