ಕುಷ್ಟಗಿ : ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ ಸಾಕು ದೇಶದ ಯುವಜನತೆಯ ಮೈ ರೋಮಾಂಚನಗೊಳ್ಳುತ್ತದೆ ಏಕೆಂದರೆ ಆ ಹೆಸರಲ್ಲಿ ಅಂತಹ ಅದ್ಭುತ ಶಕ್ತಿ ಇದೆ ಕಣಕಣದಲ್ಲೂ ದೇಶಭಕ್ತಿಯನ್ನು ತುಂಬಿಕೊಂಡಿದ್ದ ಆ ಮಹಾನ್ ಚೇತನ ಭಾರತ ದೇಶದ ವೈಶಿಷ್ಟ್ಯ ವನ್ನು ವಿಶ್ವಕ್ಕೆ ಪರಿಚಯಿಸಿದರು ಸ್ವಾಮಿ ವಿವೇಕಾನಂದ ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ, “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂದು ಯುವಕರಿಗೆ ಕರೆ ಕೊಟ್ಟರು, ವಿವೇಕಾನಂದರಿಗೆ ಯುವಕರ ಮೇಲೆ ಅಪಾರವಾದ ನಂಬಿಕೆ ಇತ್ತು, ಯುವಶಕ್ತಿಗಿಂತ ಮಿಗಿಲಾದುದ್ದು ಯಾವುದು ಇಲ್ಲ, ನನಗೆ ನೂರು ಜನ ಗಟ್ಟಿಮುಟ್ಟಾದ ಯುವಕರನ್ನು ಕೊಡಿ ನಾವು ನವಭಾರತವನ್ನು ನಿರ್ಮಾಣ ಮಾಡುತ್ತೇನೆ ಎಂದು ಹೇಳುತ್ತಿದ್ದರು ಎಂದು ಎಸ್.ಎಫ್. ಐ ರಾಜ್ಯಧ್ಯಕ್ಷ ಅಮರೇಶ ಕಡಗದ ಹೇಳಿದರು.
ಅವರು ಇಂದು ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ಸ್ಥಳೀಯ ಎಸ್ಎಫ್ಐ ಕಾರ್ಯದಲ್ಲಿ ಹಮ್ಮಿಕೊಂಡಿದ್ದ ಜಯಂತಿ ನಿಮಿತ್ಯ ಮಾತನಾಡಿದರು ಯುವಕರು ಹೇಡಿಗಳು ಆಗಬಾರದು ನೀವು ಎಂದು ಪರಾವಲಂಬಿಗಳಲ್ಲ, ನಿಮ್ಮ ಬದುಕಿನ ಶಿಲ್ಪಿಗಳು ನಿವೇ ಎಂಬ ವಿವೇಕಾನಂದರ ಸಂದೇಶ ಎಂದೆಂದಿಗೂ ಯುವ ಮನಸುಗಳನ್ನು ಎಚ್ಚರಿಸುವಂತದ್ದು, ಸ್ವಾಮಿ ವಿವೇಕಾನಂದರ ತತ್ವಜ್ಞಾನ ಮತ್ತು ಅವರ ಬದುಕಿ ಬೋಧಿಸಿದ ಆದರ್ಶಗಳು ಭಾರತದ ಯುವಜನತೆಯ ದೊಡ್ಡ ಸಂಪನ್ಮೂಲ ಹಾಗೂ ಸ್ಪೂರ್ತಿಮೂಲಗಿವೆ ಎಂದರು.
1985 ರಿಂದೀಚೆಗೆ ಪ್ರತಿವರ್ಷ ಯುವದಿನವನ್ನು ಆಚರಿಸಲಾಗುತ್ತದೆ, ,1893ರ ಶಿಕಾಗೋ ಸರ್ವಧರ್ಮಸಮ್ಮೇಳನದಲ್ಲಿ “ಅಮೆರಿಕದ ಸಹೋದರರೇ ಮತ್ತು ಸಹೋದರಿಯರೇ ಎಂದು ಹೇಳುವ ಮೂಲಕ ಪಾಶ್ಚಿಮಾತ್ಯರ ಕಣ್ಣನ್ನು ತೆರೆಸಿದ ನಮ್ಮ ವಿವೇಕಾನಂದರು. ಭಾರತದ ಕೀರ್ತಿ ಪತಾಕೆಯನ್ನು ವಿಶ್ವದ ಮುಂದೆ ಎತ್ತಿಹಿಡಿದರು, 1892 ರ ಸಪ್ಟೆಂಬರ್ 11ರಂದು ಚಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರ ಭಾಷಣ ವಿಶ್ವದ ಜನತೆಯನ್ನು ಗಮನಸೆಳೆಯಿತು, ನೊಬೆಲ್ ಪುರಸ್ಕೃತ ರವೀಂದ್ರನಾಥ ಠಾಗೋರ್ ಅವರು ವಿವೇಕಾನಂದರ ಕುರಿತು “ಭಾರತವನ್ನು ತಿಳಿಯಬೇಕೆಂದರೆ ವಿವೇಕಾನಂದರ ಬಗ್ಗೆ ಓದಿ” ಎಂದು ಹೇಳಿದ್ದಾರೆ. ಅಂದರೆ ವಿವೇಕಾನಂದರು ಭಾರತವನ್ನು ಪ್ರೀತಿಸುವುದರ ಜೊತೆಗೆ ಭಾರತವನ್ನು ಅಧ್ಯಯನ ಮಾಡಿದ್ದರು ಎಂದು ಅರ್ಥ ಎಂದು ಎಸ್ಎಫ್ಐ ತಾಲೂಕು ಸಂಚಾಲಕ ಬಸವರಾಜ್ ಸಾರಥಿ ಹೇಳಿದರು ಈ ಸಂದರ್ಭದಲ್ಲಿ ಪ್ರಮುಖರಾದ ಹನುಮಂತ, ಶಂಕರ್, ಮೌನೇಶ, ವಸಂತ, ಮುತ್ತುರಾಜ್, ರತ್ನಮ್ಮ, ದೀಪ ಇತರರು ಇದ್ದರು