- ಅಲ್ಟ್ರಾಸೌಂಡ್ ಲ್ಯಾಬ್ನ ವೈದ್ಯಕೀಯ ನಿರ್ಲಕ್ಷ್ಯಕ್ಕೆ 1.25ಕೋಟಿ ದಂಡ ವಿದಿಸಿದ ಎನ್‍ಸಿಡಿಆರ್ ಸಿ ಆಯೋಗ
- ಮಗುವಿನ ಕಲ್ಯಾಣಕ್ಕೆ, ಮತ್ತು ಭವಿಷ್ಯದ ವೆಚ್ಚಗಳಿಗೆ ಸಂಬಂದಿಸಿದಂತೆ ಪರಿಹಾರ ನೀಡುವಂತೆ ಆದೇಶ
ನವದೆಹಲಿ : ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣವೊಂದರಲ್ಲಿ ತಪ್ಪು ವರದಿ ನೀಡಿದ ನಾಗ್ಪುರದ ಅಲ್ಟ್ರಾಸೌಂಡ್ ಲ್ಯಾಬ್ ಒಂದಕ್ಕೆ 1.25 ಕೋಟಿ ರೂಪಾಯಿಗಳ ದಂಡ ವಿಧಿಸುವ ಮಹತ್ತರ ತೀರ್ಪನ್ನು ರಾಷ್ಟ್ರೀಯ ಗ್ರಾಹಕ ಆಯೋಗ ನೀಡಿದೆ.
ಜನ್ಮಜಾತ ಅಸ್ವಸ್ಥತೆ ವಿಚಾರಕ್ಕೆ ಸಂಬಂದಿಸಿಂತೆ, ಮಗು ಆರಂಭಿಕ ಹಂತದಲ್ಲಿ ಇದ್ದ ದೋಷವನ್ನು ಪತ್ತೆ ಮಾಡಲು ಪ್ರಯೋಗಾಲಯ ವಿಫಲವಾಗಿರುವುದನ್ನು ಹಾಗೂ ಗರ್ಭಪಾತಕ್ಕೆ ಪ್ರಯೋಗಾಲಯ ಶಿಫಾರಸ್ಸು ಮಾಡದಿರುವುದನ್ನು ಆಯೋಗ ಉಲ್ಲೇಖಿಸಿದೆ. ನವಜಾತ ಶಿಶುವಿನ ಬೆರಳುಗಳು, ಬಲಗಾಲಿನ ಮೊಣಕಾಲ ಕೆಳಗೆ ಹಾಗೂ ಎಡ ಪಾದದಲ್ಲಿ ದೋಷಗಳು ಕಂಡುಬಂದಿದ್ದು. ಇಮೇಜಿಂಗ್ ಪಾಯಿಂಟ್ ಹೆಸರಿನ ಕ್ಲಿನಿಕ್ ಅನ್ನು ರೇಡಿಯಾಲಜಿ ತಜ್ಞ ಡಾ.ದಿಲೀಪ್ ಘಿಕೆ ನಿರ್ವಹಿಸುತ್ತಿದ್ದರು.
ಭ್ರೂಣದ 4 ನೇ ತಿಂಗಳಿನಲ್ಲಿ ದೋಷವನ್ನು ಪತ್ತೆ ಮಾಡಲು ವಿಫಲರಾದ ಅವರನ್ನು ಹಾಗೂ ಕ್ಲಿನಿಕ್ ಅನ್ನು ಆಯೋಗ, ಮಗುವಿನ ಕಲ್ಯಾಣಕ್ಕೆ, ಭವಿಷ್ಯದ ವೆಚ್ಚಗಳಿಗೆ, ಚಿಕಿತ್ಸೆಗೆ ಹಾಗೂ ಕೃತಕ ಕಾಲು ಖರೀದಿಗೆ ಪರಿಹಾರವನ್ನು ನೀಡುವಂತೆ ಆದೇಶಿಸಿದೆ. ನ್ಯಾಯಮೂರ್ತಿ ಆರ್.ಕೆ.ಅಗರ್‍ವಾಲ್ ಮತ್ತು ಎಸ್.ಎಂ.ಕಾಂತಿಕರ್ ಅವರನ್ನು ಒಳಗೊಂಡ ಎನ್‍ಸಿಡಿಆರ್ ಸಿ ಈ ಮಹತ್ವದ ತೀರ್ಪು ನೀಡಿದೆ.