ಬೆಂಗಳೂರು : ದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಶತಮಾನಗಳಿಂದ ಈ ನೆಲದಲ್ಲಿ ವಾಸವಿರುವ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರೈಸ್ತರು,ಬೌದ್ದರಿಗೆ ಸಮಾನ ಅವಕಾಶಗಳನ್ನು ನೀಡಲು ತಯಾರಿಲ್ಲ. ಅದು ಅಸಮಾನತೆ ಮತ್ತು ತಾರತಮ್ಯದಿಂದ ನಡೆಸಿಕೂಳ್ಳುತ್ತಿದೆ ಇದು ಭಾರತೀಯ ಸಂವಿಧಾನಿಕ ಅಶಯಗಳ ವಿರುದ್ದ ಹಾಗು ಪ್ರಜಾತಂತ್ರ ವಿರೋಧಿ ನಡೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೂ ಸದಸ್ಯರಾದ ಪ್ರಕಾಶ್ ಕರಾಟ್ ಅವರು ಅಭಿಪ್ರಾಯಪಟ್ಟರು
ಅಂತರಾಷ್ಟ್ರೀಯ ಅಲ್ಪಸಂಖ್ಯಾತರ ದಿನಾಚರಣೆ ಅಂಗವಾಗಿ ಅಲ್ಪಸಂಖ್ಯಾತರ ಹಕ್ಕುಗಳ ಸಮಿತಿ ಕರ್ನಾಟಕ ಆಯೋಜಿಸಿದ್ದ ಆನ್ ಲೈನ್ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಸಂವಿಧಾನ-ಸಮಾನತೆ ಪ್ರತಿಪಾದಿಸಿದ ಮೂಲಭೂತ ಹಕ್ಕುಗಳಲ್ಲಿ ಅವರಿಗೆ ಬೇಕಾದ ಧರ್ಮಾಚರಣೆ ಪ್ರಚಾರಕ್ಕೆ ಅವಕಾಶವಿದೆ. ಪೌರತ್ವ ಧರ್ಮಾದಾರಿತ ಅಲ್ಲ ಅದರೆ ಅದನ್ನು ಧರ್ಮಾಧಾರಿತಗೊಳಿಸಲು ಹೊರಟಿದೆ. ಲವ್ ಜಿಹಾದ್ ಹೆಸರಲ್ಲಿ ಸಂಗಾತಿ ಆಯ್ಕೆಯನ್ನು ಹಾಗೂ ಅನ್ಯ ಧರ್ಮಿಯರಿಬ್ಬರ ನಡುವಿನ ಮದುವೆಗಳನ್ನು ತಡೆಯಲಾಗುತ್ತಿದೆ. ಆಹಾರದ ಹಕ್ಕಿನ ಮೇಲಿನ ದಾಳಿ ಕಾನೂನಿನ ನೆಲೆಯನ್ನು ಬಳಸಲು ಯತ್ನಿಸುತ್ತದೆ ಎಂದು ಆರೋಪಿಸಿದರು.
ಮಾಂಸಹಾರಿಗಳು ತಾವು ತಿಂದ ಮಾಂಸ ದನದ ಮಾಂಸವಲ್ಲ ಎಂಬುದನ್ನು ಸಾಬಿತು ಪಡಿಸುವಂತಾಗುತ್ತದೆ. ನಾಗರಿತತ್ವದ ಸಂಬಂಧ ಸರ್ಕಾರದ ನಿಲುಮೆ ಸಂಪೂರ್ಣವಾಗಿ ಸಂವಿಧಾನ ವಿರೋಧಿಯಾಗಿದೆ. ದೆಹಲಿಯ ಶಾಂತಿಯುತ ಚಳುವಳಿಯನ್ನು ಹತ್ತಿಕ್ಕಲು ಕುತಂತ್ರ ರೂಪಿಸಿದ ಅಳರಸರು- ಅಮಾಯಕರನ್ನು UAPA ಅಡಿಯಲ್ಲಿ ಬಂಧಿಸಿ ಚಳುವಳಿಯನ್ನು ನಿರ್ನಾಮ ಮಾಡಲು ಹೂರಟಿದೆ. ಈ ಗಲಭೆಗಳ ನಿಜವಾದ ಆರೋಪಿಗಳನ್ನು ರಕ್ಷಸಿಲಾಗುತ್ತಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತ ಹಕ್ಕುಗಳ ನಿರ್ನಾಮ ಮಾಡುವುದು ಪ್ರಜಾಸತ್ತೆಯ ಅಶಯಕ್ಕೆ ವಿರೋಧಿ ಎಂದರು.
ಎಡ ಪಕ್ಷಗಳು ಜಾತ್ಯತೀತ-ತತ್ವಕ್ಕೆ ಬದ್ದವಾಗಿವೆ. ತಾವು ಬಿಜೆಪಿ ಆಡಳಿತ ಇರುವ ಕರ್ನಾಟಕ ಹಾಗೂ ಎಡಪಕ್ಷಗಳ ಆಡಳಿತ ಇರುವ ಕೇರಳ ಗಮನಿಸಿ ಕಮೂನಿಷ್ಟ ಪಕ್ಷದ ಆಡಳಿತದಲ್ಲಿ ಅಲ್ಪಸಂಖ್ಯಾತರ ಅಸುರಕ್ಷತೆಯ ಭಾವನೆ ಇರುವುದಿಲ್ಲ ಎಂದರು.
ಸಂವೇದನಾಶೀಲತೆ ಕಳೆದು ಕೂಳ್ಳತ್ತಿರುವ ಸಮಾಜ: ಭಾನುಮುಸ್ತಾಕ್
ಸಭೆಯಲ್ಲಿ ಅಥಿತಿಗಳಾಗಿ ಮಾತನಾಡಿದ ಖ್ಯಾತ ಸಾಹಿತಿ ಶ್ರೀಮತಿ ಭಾನುಮುಸ್ತಾಕ್ ಅವರು ಸಮಾಜ-ಸಂವೇದಾನಾ ಶೀಲತೆ ಕಳೆದುಕೂಳ್ಳತ್ತಿದೆ. ಸಂಕಟ, ನೋವು-ಹತಾಶೆಗಳಿಗೆ ಒಳಗಾದರು ಅಲ್ಪ ಸಂಖ್ಯಾತರನ್ನು ನಾಗಾರಿಕ ಸಮಾಜ-ಸಮಾನತೆಯಿಂದ ನಡೆಸಿಕೂಳ್ಳಬೇಕು. ಇದೆ ನಮ್ಮ ನೆಲೆ ಎಂದು ಅಪ್ಪಿ ಉಳಿದವರನ್ನು ತಾರತಮ್ಯದಿಂದ ನಡೆಸಿಕೂಳ್ಳಬಾರದು ಬಹುತ್ವ ಭಾರತದ ವೈವಿಧ್ಯತೆಯುಯನ್ನು ಎಲ್ಲರು ಸೇರಿ ಸಂರಕ್ಷಿಸಬೇಕು ಎಂದರು.
ರಾಜ್ಯ ಸರ್ಕಾರ ಶೈಕ್ಷಣ ಕ ಹಿಂದುಳಿದರುವ ಅಲ್ಪ ಸಂಖ್ಯಾತರ ಉನ್ನತ ಶಿಕ್ಷಣಕ್ಕೆ ನೀಡಲಾಗುತ್ತಿದ್ದ ವಿಧ್ಯಾರ್ಥಿವೇತನ ಕಡಿತ ಮಾಡಿರುವುದು ಸರಿಯಾದ ಕ್ರಮವಲ್ಲ ಅಲ್ಪಸಂಖ್ಯಾತ ಸಮುದಾಯ ಸಂವಿಧಾನತ್ಮಾಕ ಹಕ್ಕುಗಳ ಸಮಾನತೆ ಹಕ್ಕು ಉಳಿಸಬೇಕೆಂದರು. ನಿರ್ಧ್ಯಯ ಹತ್ಯೆ-ಗುಂಪು ಹತ್ಯೆಗಳು ನಾಗರಿಕ ಸಮಾಜಕ್ಕೆ ಶೋಭೆಯಲ್ಲ ಎಂದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜು ಮಾತನಾಡಿ ಅಲ್ಪ ಸಂಖ್ಯಾತರ ಬದುಕು, ವೃತ್ತಿ, ಶಿಕ್ಷಣ ಹಕ್ಕುಗಳಿಗಾಗಿ ನಿರಂತರ ಹೋರಾಟ ಅಗತ್ಯ ಎಂದು ಕರೆನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಾರ್ಮಿಕ ಧುರೀಣ ಅಮಾನುಲ್ಲಖಾನ್ ಅವರು ಮಾತನಾಡಿ ಅಲ್ಪಸಂಖ್ಯಾತರು ಮುಸ್ಲಿಂ ಸಮುದಾಯ ೧೪% ಇದ್ದರೂ ರಾಜಕೀಯ ಪ್ರಾತಿನಿದ್ಯ ೩% ಮೀರಿಲ್ಲ ಉದೋಗದಲ್ಲಿಯು ಸಹ ೩% ರಷ್ಟಿಲ್ಲ ಈ ಹಿನ್ನೆಲೆಯಲ್ಲಿ ಡಾ:ಸಾಚರ್ ಸಮಿತಿ, ರಂಗನಾಥಮಿಶ್ರ ಸಮಿತಿ ವರದಿಗಳು ಹಾಗು ಶಿಫಾರಸ್ಸುಗಳ ಆಧಾರದಲ್ಲಿ ಸರ್ಕಾರ ಸಮಬಾಳು-ಸಮಪಾಲು ತತ್ವದ ಅಧಾರದಲ್ಲಿ ಕಾರ್ಯಕ್ರಮ ಮುಂದುವರಿಸಲು ಒತ್ತಯಿಸಿದರು.
ಆರಂಭದಲ್ಲಿ ಸಮಿತಿ ರಾಜ್ಯ ಸಂಚಾಲಕ ಸೈಯದ್ ಮುಜೀಬ್ ಪ್ರಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕೂನೆಯಲ್ಲಿ ಸಹ ಸಂಚಾಲಕರಾದ ಶೇಕ್ಷಖಾದ್ರಿ ವಂದಿಸಿದರು.