ಸಕಲೇಶಪುರ: ಅಂಗನವಾಡಿ ಕಾರ್ಯಕರ್ತೆ ಮೇಲೆ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಶಾಸಕ ಸಿಮೆಂಟ್ ಮಂಜು ರಕ್ಷಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ (ಸಿಐಟಿಯು) ಸಂಘಟನೆ ನೇತೃತ್ವದಲ್ಲಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು.
ಪಟ್ಟಣದ ಸಿಡಿಪಿಐ ಕಚೇರಿ ಎದುರು ಸಿಐಟಿಯು ಕಾರ್ಯಕರ್ತರು ಹಮ್ಮಿಕೊಂಡಿದ್ದ, ಪ್ರತಿಭಟನೆ ಉದ್ದೇಶಿಸಿ,ಹಾಸನ ಜಿಲ್ಲಾ ಜಿಲ್ಲಾಧ್ಯಕ್ಷೆ ಪುಷ್ಪ ಮಾತನಾಡಿ, ಅಂಗನವಾಡಿ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣದ ಕುರಿತು ಪೊಲೀಸರು ದೂರು ದಾಖಲಿಸುತ್ತಿಲ್ಲ, ಶಾಸಕರು ಹಾಗೂ ಪೋಲಿಸರು ಅನ್ಯಾಯಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಅರೋಪಿಸಿದರು.
ಇದನ್ನೂ ಓದಿ:ಅಂಗನವಾಡಿ ನೌಕರರ ಮೇಲಿನ ಮೊಕದ್ದಮೆ ಹಿಂತೆಗೆದುಕೊಳ್ಳಲು ಜನವಾದಿ ಮಹಿಳಾ ಸಂಘಟನೆ ಒತ್ತಾಯ
ತಾಲೂಕಿನ ಕುನಿಗನಹಳ್ಳಿ ವ್ಯಾಪ್ತಿಯ ಹೆಗ್ಗೋವೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮಂಗಳಗೌರಿ ಮತ್ತು ಸಹಾಯಕಿ ಗೀತಾ ಇವರ ಮೇಲೆ ಗ್ರಾಮದ ನಂದಿನಿ, ಸುರೇಶ್, ಉಷಾ, ಚಂದನ್, ವಸಂತಮ್ಮ ಹಾಗೂ ಇತರರು ಹಲ್ಲೆ ನಡೆಸಿ ಅಂಗನವಾಡಿಯ ದಾಸ್ತಾನು ಮತ್ತು ಪೀಠೋಪಕರಣವನ್ನು ಕೊಂಡೊಯ್ದು ಕೇಂದ್ರಕ್ಕೆ ಬೀಗ ಹಾಕಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಪೋಲಿಸರಿಗೆ ದೂರು ನೀಡಿದರು ದೂರು ದಾಖಲು ಮಾಡುತ್ತಿಲ್ಲ ಎಂದು ದೂರಿದರು.
ಹಲ್ಲೆಗೆ ಒಳಗಾದ ಅಂಗನವಾಡಿ ಕಾರ್ಯಕರ್ತೆಯರು ಕ್ರಾಫರ್ಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಾಂತರ ಠಾಣೆಯ ಸಿಬ್ಬಂದಿ ಹಲ್ಲೆಗೊಳಗಾದವರಿಂದ ಹೇಳಿಕೆ ಪಡೆದಿದ್ದರು ದೂರು ದಾಖಲಿಸದೆ ಹಾಗೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅರೋಪಿಸಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾ ಕಾರ್ಯದರ್ಶಿ ಶೈಲಾ, ಸಿಐಟಿಯು ಪ್ರಮುಖರಾದ ಸೌಮ್ಯ ಬಿ.ಎಂ, ವೀಣಾ, ಸುಮಿತ್ರ, ನಾಗಲಕ್ಷ್ಮಿ, ನಾಜಿಯಾ, ಮುಂತಾದವರು ಇದ್ದರು.
ವಿಡಿಯೋ ನೋಡಿ:ಅಂಗನವಾಡಿಗಳ ಸುತ್ತ ಸಮಸ್ಯೆಗಳ ಹುತ್ತ : ಬಾಡಿಗೆ ಹಣವೂ ಇಲ್ಲ, ಮೊಟ್ಟೆ ಹಣವೂ ಇಲ್ಲ Janashakthi Media