- ರೈತ–ವಿರೋಧಿ ಕಾನೂನಗಳ ವಿರುದ್ಧ ಡಿಸೆಂಬರ್ 5: ಭೂತ ದಹನ
ದೆಹಲಿ : ಮೂರು ಕೃಷಿ ಕಾಯ್ದೆಗಳು ಮತ್ತು ವಿದ್ಯುಚ್ಛಕ್ತಿ ಮಸೂದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ತಾಕರಕ್ಕೇರಿದೆ. ಕೇಂದ್ರ ಸರ್ಕಾರ ಈ ಮಸೂದೆಗಳನ್ನು ಹಿಂಪಡೆಯುವವರೆಗೂ ನಾವು ಈ ಜಾಗವನ್ನು ಬಿಡುವುದಿಲ್ಲ ಎಂದು ರೈತರು ಸರ್ಕಾರಕ್ಕೆ ಎಚ್ಛರಿಕೆ ನೀಡಿದ್ದಾರೆ. ಡಿಸೆಂಬರ್ 5 ಭೂತ ದಹನ ಮತ್ತು ಡಿಸೆಂಬರ್ 8 ರಂದು ಅಖಿಲ ಭಾರತ ಹರತಾಳಕ್ಕೆ ಸಂಯುಕ್ತ ಕಿಸಾನ್ ಸಂಘರ್ಷ ಮೋರ್ಚಾ ಕರೆ ನೀಡಿದೆ.
ಡಿಸೆಂಬರ್ 4ರಂದು ನಡೆದ ಸಂಯುಕ್ತ ಕಿಸಾನ್ ಸಂಘರ್ಷ ಸಮಿತಿಯ ಸಭೆ ಈ ಮೊದಲು ನಿರ್ಧರಿಸಿರುವ ಕಾರ್ಯಕ್ರಮದ ಜತೆಗೆ ಡಿಸೆಂಬರ್ 8ರಂದು ಮೂರು ಕೃಷಿ ಕಾಯ್ದೆಗಳು ಮತ್ತು ವಿದ್ಯುಚ್ಛಕ್ತಿ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಹರತಾಳ ನಡೆಸಲು ಕರೆ ನೀಡಿದೆ.
ಸಿ2+50% ಸೂತ್ರದ ಪ್ರಕಾರ ಭಾರತದಾದ್ಯಂತ ಎಲ್ಲ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಮತ್ತು ಖಾತ್ರಿ ಖರೀದಿಗೆ ಕಾನೂನಿನ ಸ್ಥಾನಮಾನ ಕೊಡಬೇಕು ಎಂದೂ ಸಭೆ ಆಗ್ರಹಿಸಿತು.
ಡಿಸೆಂಬರ್ 5ರಂದು ಈ ಹಿಂದೆ ನಿರ್ಧರಿಸಿದಂತೆ ಪ್ರತಿಯೊಂದು ಹಳ್ಳಿಯಲ್ಲಿಯೂ ಮೋದಿ, ಅಂಬಾನಿ, ಅದಾನಿ ಪ್ರತಿಕೃತಿಗಳ ದಹನದ ಮೂಲಕ ಪ್ರತಿಭಟನೆ ನಡೆಯಲಿದೆ.
ದೇಶಾದ್ಯಂತ ಟೋಲ್ ಪ್ಲಾಜಾಗಳನ್ನು ತೆರೆಯಬೇಕು ಎಂದು ಆಗ್ರಹಿಸಿದ ಸಭೆ, ದಿಲ್ಲಿಯ ಸುತ್ತಲಿನ ರೈತರು ಜೈಪುರ ಮತ್ತು ಆಗ್ರಾದಿಂದ ಇತರ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ದಿಲ್ಲಿ ಚಲೋ ಬರಬೇಕು ಎಂದು ಕರೆ ನೀಡಿದೆ.