ಏರ್‌ ಇಂಡಿಯಾ ವಿಮಾನಯಾನ ಪೈಲಟ್‌ಗಳಾಗಿ ನಾಲ್ವರು ಮಹಿಳೆಯರು

ಬೆಂಗಳೂರು, ಜ, 12 : ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ತನಗಿರುವ ಸಾಧ್ಯತೆಗಳ ನೆಲೆಯಲ್ಲಿಯೇ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದ್ದಾರೆ,. ಅದರಲ್ಲಿಯೂ ಸೇನೆಗಳಲ್ಲಿ ಕೇವಲ ಪುರುಷರಿಗಷ್ಟೇ ಸಾರಥ್ಯ ವಹಿಸಲು ಸಾಧ್ಯ  ಎಂದುಕೊಂಡಿದ್ದ ಕೋಟೆಯನ್ನು  ಭೇಧಿಸಿ ಅಲ್ಲಿ ಮಹಿಳೆಯರೂ ಸಾಧನೆ ಮಾಡುತ್ತಾ ತಮ್ಮದೆ ಆದ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ.

ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಪೈಲಟ್‌ಗಳಾಗಿ ಕ್ಯಾಪ್ಟನ್ ಜೋಯಾ ಅಗರ್‌ವಾಲ್‌, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನಾವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ನಾಲ್ವರು ಮಹಿಳೆಯರ ತಂಡವು ದಾಖಲೆ ನಿರ್ಮಿಸಿದೆ.

ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವೆ ಏರ್ ಇಂಡಿಯಾದ ಮೊದಲ ನಾನ್​ಸ್ಟಾಪ್ ವಿಮಾನ ಜನವರಿ 9ರಂದು ಹಾರಾಟ ಪ್ರಾರಂಭಿಸಿತ್ತು. ವಿಶೇಷವೆಂದರೆ ಪ್ರಯಾಣದ ವಿಮಾನವನ್ನು ಸಂಪೂರ್ಣ ಮಹಿಳಾ ಪೈಲೆಟ್​ಗಳೇ ನಿರ್ವಹಿಸಿದ್ದು ಅಭಿನಂದನೆಗಳ ಮಹಾಪೂರವೆ ಹರಿದುಬಂದಿದೆ.

ಸ್ಯಾನ್‌ ಫ್ರಾನ್ಸಿಸ್ಕೊ- ಬೆಂಗಳೂರು ನಡುವಣ ವಿಶ್ವದ ಅತೀ ದೀರ್ಘ ವಾಯು ಮಾರ್ಗದ ವಿಮಾನಯಾನವನ್ನು ಸಂಪೂರ್ಣವಾಗಿ ನಿರ್ವಹಿಸುವ ಮೂಲಕ, ಸ್ಯಾನ್‌ ಫ್ರಾನ್ಸಿಸ್ಕೊ – ಬೆಂಗಳೂರು ನಡುವಿನ ಮಾರ್ಗವು ವಿಶ್ವದ ಅತ್ಯಂತ ದೀರ್ಘ ವಾಯು ಮಾರ್ಗವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಿಮಾನಗಳು ಭೂಮಿಯ ಮೇಲಿನ ದುರ್ಗಮ ಪ್ರದೇಶ ಎನ್ನುವ ಉತ್ತರ ಧ್ರುವವನ್ನು ದಾಟಿ ಬಂದು ಹೊಸ ಇತಿಹಾಸ ದಾಖಲಿಸಿದ್ದಾರೆ.

ಏರ್ ಇಂಡಿಯಾ ಇವರ ಸಾಧನೆಗೆ ಅಭಿನಂದನೆ ತಿಳಿಸಿದ್ದು ಇವರ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳನ್ನು ತಿಳಿಸಿದ್ದಾರೆ

Donate Janashakthi Media

Leave a Reply

Your email address will not be published. Required fields are marked *