ನವ ದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಮಾರ್ಚ್ 26ಕ್ಕೆ ನಾಲ್ಕು ತಿಂಗಳು ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಅಂದು ಇಡೀ ದೇಶದಲ್ಲಿ ರಾಷ್ಟ್ರವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿವೆ.
2020ರಲ್ಲಿ ಕೇಂದ್ರ ಸರಕಾರವು ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳನ್ನು ಮಂಡಿಸುವ ಮೂಲಕ ದೇಶದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಸಂಪೂರ್ಣವಾಗಿ ಇಡೀ ದೇಶದ ರೈತ ವಿರೋಧಿ ಕಾನೂನು ಆಗಿದ್ದು, ಇವುಗಳನ್ನು ವಾಪಸ್ಸು ಪಡೆಯಬೇಕೆಂದು ನವೆಂಬರ್ 26ರಿಂದ ದೇಶದ ಹಲವಾರು ರೈತ ಸಂಘಟನೆಗಳು ದೆಹಲಿಯ ಗಡಿಗಳಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ.
ಇಂಧನ ಬೆಲೆ ಏರಿಕೆಯನ್ನು ಖಂಡಿಸಿ ಮಾರ್ಚ್ 15ರಂದು ರೈತ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಲಾಗಿದೆ. ಅಂದು ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಸಹ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿವೆ.
ಗಣರಾಜ್ಯೋತ್ಸವ ದಿನದವರೆಗೂ ದೆಹಲಿ ಗಡಿಗಳಿಗೆ ಮಾತ್ರ ಸೀಮಿತಗೊಂಡಿದ್ದ ರೈತರ ಬೃಹತ್ ಧರಣಿಯು ಅಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರ ಘಟನೆಯ ನಂತರ ರೈತರ ವಿರೋಧಿಯಾದ ಕೇಂದ್ರ ಸರಕಾರದ ಕಾನೂನುಗಳ ಬಗ್ಗೆ ಇಡೀ ದೇಶದಲ್ಲಿ ಜಾಗೃತಿ ಮೂಡಿಸಲು ಸಲುವಾಗಿ ಜಾಥಾಗಳು, ಮಹಾಪಂಚಾಯತ್ ಸಮಾವೇಶಗಳ ಮೂಲಕ ರೈತರ ಬೇಡಿಕೆಗಳ ಬಗ್ಗೆ ಪ್ರಚಾರ ಕೈಗೊಂಡಿದೆ.
ಭಾರತೀಯ ಕಿಸಾನ್ ಯೂನಿಯನ್ ಮುಖಂಡರ ರಾಕೇಶ್ ಟಿಕಾಯತ್ ಮಧ್ಯಪ್ರದೇಶದಲ್ಲಿ ಮಾತನಾಡಿ ʻʻಕೇಂದ್ರದ ಬಿಜೆಪಿ ಸರಕಾರವು ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಲು ಗಣರಾಜ್ಯೋತ್ಸವದಂದು 3500 ಟ್ರ್ಯಾಕ್ಟರ್ ರ‍್ಯಾಲಿ ಮಾಡಲಾಗಿತ್ತು. ಅವುಗಳೆಲ್ಲವೂ ಬಾಡಿಗೆಗೆ ತಂದ ಟ್ರ್ಯಾಕ್ಟರ್‌ಗಳಾಗಿರಲಿಲ್ಲ. ಕಾನೂನು ರದ್ದುಗೊಳಿಸದಿದ್ದಲ್ಲಿ ಸಂಸತ್ತಿಗೆ ಲಕ್ಷಾಂತರ ಟ್ರ್ಯಾಕ್ಟರ್‌ಗಳ ಮುತ್ತಿಗೆ ಹಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.