ನವದೆಹಲಿ : ರೈತ ಬೆಳಯುವ ಪ್ರತಿ ಟನ್ ಕಬ್ಬಿಗೆ ಎಫ್ ಆರ್ ಪಿ ಬದಲು 5 ಸಾವಿರ ರೂಪಾಯಿಗಳನ್ನು ನಿಗದಿಗಿಳಿಸುವಂತೆ ಒತ್ತಾಯಿಸಿ ಸಂಸತ್ ಭವನದ ಎದುರಿನ ಜಂತರ್ ಮಂತರ್‌ನಲ್ಲಿಎಐಕೆಎಸ್ ನೇತೃತ್ವದಲ್ಲಿ ಅಖಿಲ ಭಾರತ ಕಬ್ಬು ಬೆಳೆಗಾರರ ಒಕ್ಕೂಟ ಸಂಘಟಿಸಿದ್ದ ಧರಣಿ ನಡೆಯಿತು.|
ಪ್ರತಿಭಟನೆಯಲ್ಲಿ ಕಬ್ಬು ಬೆಳೆಯುವ ಹತ್ತು ಪ್ರಮುಖ ರಾಜ್ಯಗಳಿಂದ ಬೆಳೆಗಾರರು ಭಾಗವಹಿಸುವ ಮೂಲಕ ರೈತ ವಿರೋಧಿ ರಂಗರಾಜನ್ ಸಮಿತಿ ಶಿಪಾರಸ್ಸು ಜಾರಿ ರದ್ದುಪಡಿಸುವಂತೆ ಆಗ್ರಹಿಸಲಾಯಿತು.
ಕರ್ನಾಟಕ ರಾಜ್ಯದ ಕಬ್ಬು ಬೆಳೆಗಾರರ ಪರವಾಗಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಸೇರಿದಂತೆ ಈ ಸಂದರ್ಭದಲ್ಲಿ ರಾಜ್ಯ ಹಣಕಾಸು ಕಾರ್ಯದರ್ಶಿ ಹೆಚ್ ಆರ್ ನವೀನ್ ಕುಮಾರ್, ಎಐಕೆಎಸ್ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ವಿಜ್ಜುಕೃಷ್ಣನ್ ,ಉಪಾಧ್ಯಕ್ಷ .ಹನನ್ ಮೊಲ್ಲಾ , ಹಣಕಾಸು ಕಾರ್ಯದರ್ಶಿ ಕೃಷ್ಣ ಪ್ರಸಾದ್ , ಕಬ್ಬು ಬೆಳೆಗಾರರ ಒಕ್ಕೂಟದ ಅಖಿಲ ಭಾರತ ಅಧ್ಯಕ್ಷ ರವೀಂದ್ರನ್, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ವಿಸಿ ಶುಕ್ಲಾ ಮುಂತಾದವರು ಪ್ರತಿಭಟನಾ ಧರಣಿ ಉದ್ದೇಶಿಸಿ ಮಾತಾನಾಡಿದರು. ಧರಣಿಯಲ್ಲಿ ಹಲವಾರು ರೈತ ಮುಖಂಡರುಗಳು ಹಾಗೂ ಕಬ್ಬುಬೆಳೆಗಾರರು ಭಾಗವಹಿಸಿದ್ದರು.