ಮಹಿಳಾ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಹಕ್ಕೊತ್ತಾಯ ಮಂಡನೆ

ಬೆಂಗಳೂರು : ಶಾಸನ ಸಂಸತ್ ಸಭೆಗಳಲ್ಲಿ ಮಹಿಳಾ ಮೀಸಲಾತಿಗಾಗಿ ಆಗ್ರಹಿಸಿ ರವಿವಾರದಂದು ಬೆಂಗಳೂರಿನ ಬಂಡಿರೆಡ್ಡಿ ವೃತ್ತದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಸಂಘಟನೆಯ ಉಪಾಧ್ಯಕ್ಷರಾದ ಕೆ. ನೀಲಾ ಮಾತನಾಡುತ್ತಾ, 1996 ರಿಂದ ಮಸೂದೆಯನ್ನು ನೆನೆಗುದಿಗೆ ತಳ್ಳಲಾಗಿದೆ. ಬಿಜೆಪಿ ಪಕ್ಷವು ಪಾರ್ಲಿಮೆಂಟಿನಲ್ಲಿ ಪೂರ್ಣ ಬಹುಮತ ಹೊಂದಿದೆ. ತನಗೆ ಅನುಕೂಲಕರ ಕಾಯ್ದೆಗಳನ್ನು ಚರ್ಚೆಗೂ ಆಸ್ಪದ ಕೊಡದೆ ಪಾಸು ಮಾಡಿಕೊಂಡಿದೆ. ಆದರೆ ಮಹಿಳಾ ಮೀಸಲಾತಿ ಮಸೂದೆಯನ್ನು ಮಾತ್ರ ನೆನೆಗುದಿಗೆ ತಳ್ಳಿದೆ. ಈಗ ಸವಾಲು ಕೇಂದ್ರ ಸರಕಾರದ ಮುಂದಿದೆ. ನೀತಿ ನಿರೂಪಣೆಯಲ್ಲಿ ಮಹಿಳಾ ಭಾಗಿದಾರಿಕೆಯು ನಾಡಿನ ಸಮಗ್ರ ಅಭಿವೃದ್ಧಿಗಾಗಿನ ಅವಶ್ಯಕತೆಯಾಗಿದೆ ಎಂದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಮಾತನಾಡಿ, ಮಹಿಳಾ ಮೀಸಲಾತಿಯು ನಿಜದ ಅಭಿವೃದ್ಧಿಯ ಸಂಕೇತವಾಗಿದೆ. ಈ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಜಾರಿ ಮಾಡಬೇಕೆಂದು ರಾಷ್ಟ್ರದ್ಯಾಂತ ಹೋರಾಟಕ್ಕೆ ಕರೆ ನೀಡಲಾಗಿತ್ತು. ಇದರ ಭಾಗವಾಗಿ ಬೆಂಗಳೂರಿನಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದರು.

ಈ ಪ್ರತಿಭಟನೆ ಯಲ್ಲಿ ರಾಜ್ಯದ್ಯಕ್ಷರಾದ ದೇವಿ. ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್.ಲಕ್ಷ್ಮಿ. ಡಾ.ಮೀನಾಕ್ಷಿ ಬಾಳಿ, ಲಲಿತಾ ಶಣೈ, ಶಾರದಾ ಟೀಚರ್, ವಿಜಯ ಕುಮಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *