ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಜಾತಾಂತ್ರಿಕ – ಧರ್ಮನಿರಪೇಕ್ಷ ವಾತಾವರಣವನ್ನು ಸಂರಕ್ಷಿಸಿ

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಜಾತಾಂತ್ರಿಕ – ಧರ್ಮನಿರಪೇಕ್ಷ ವಾತಾವರಣವನ್ನು ಸಂರಕ್ಷಿಸಿ ಎಂದು  ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್‌ ಕುಮಾರ್‌  ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಂಗಳೂರು ವಿವಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ವಿರೋಧ  ಮತ್ತು ಹೋರಾಟಗಳು ನಡೆದಾಗಿಯೂ, ಅದಕ್ಕೆ ಕಿಂಚಿತ್ತೂ ಬೆಲೆ ಕೊಡದೆ, ವಿಶ್ವವಿದ್ಯಾಲಯವು ತನ್ನ ಆವರಣದಲ್ಲಿ ದೇವಸ್ಥಾನ ಕಟ್ಟುವ ಕಾರ್ಯಕ್ಕೆ ಮುಂದಾಗಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು. ಇದು ಕೇವಲ ದೇವಾಲಯದ ಸ್ಥಳಾಂತರ ಹೊರತು, ನೂತನ ದೇವಾಲಯದ ನಿರ್ಮಾಣವಲ್ಲ ಎಂದು ಮಾನ್ಯ ಕುಲಪತಿಗಳು ಹೇಳಿದ್ದಾಗ್ಯೂ, ಈಗ ಅದರ ವಿರುದ್ಧ ವ್ಯಾಪಕ ವಿರೋಧ ಭುಗಿಲೆದ್ದಿದೆ.ಹೀಗಿರುವಾಗ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನಾಗಲಿ, ಶಿಕ್ಷಕರನ್ನಾಗಲಿ ಅಥವಾ ಬೋಧಕೇತರ ಸಿಬ್ಬಂದಿ ಯಾರ ಅಭಿಪ್ರಾಯವನ್ನು ಕೇಳದೆಯೇ ಏಕಾಏಕಿ ಏಕಪಕ್ಷೀಯವಾಗಿ ವಿವಿ ಆಡಳಿತ ಮಂಡಳಿಯು ನೂತನ ಕಟ್ಟಡ ಕಟ್ಟುವ ತರಾತುರಿ ತೋರುತ್ತಿದೆ ಅಷ್ಟೇ ಅಲ್ಲದೆ ಹೋರಾಟನಿರತ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕಿಡಿಗೇಡಿಗಳು ಎಂಬ ಅರ್ಥದಲ್ಲಿ ನಿಂದಿಸಿ, ಎಲ್ಲ ಪ್ರಜಾತಾಂತ್ರಿಕ ಅಂಶಗಳನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದ್ದಾರೆ.

ಈ ಕೂಡಲೇ ಮಾನ್ಯ ಕುಲಪತಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡುತ್ತೇವೆ. ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನು ಅನುಸರಿಸಿ, ಸಂಬಂಧಪಟ್ಟ ಎಲ್ಲರ ಅಭಿಪ್ರಾಯವನ್ನು ಪರಿಗಣಿಸಿ ನಂತರವೇ ಈ ವಿಷಯವನ್ನು ಮುಂದುವರೆಸಬೇಕು, ಅಲ್ಲಿಯವರೆಗೂ ದೇವಸ್ಥಾನ ನಿರ್ಮಿಸುವ ವಿಷಯವನ್ನು ಸದ್ಯಕ್ಕೆ ಕೈ ಬಿಟ್ಟು, ವಿಷಯ ಇತ್ಯರ್ಥ ಆಗುವಂತೆ ನೋಡಿಕೊಳ್ಳಬೇಕು AIDSO ಮನವಿ ಮಾಡುತ್ತದೆ. ಯಾವುದೇ ಶಕ್ತಿಯು ವಿಶ್ವವಿದ್ಯಾಲಯದ ಪ್ರಜಾತಾಂತ್ರಿಕ ವಾತಾವರಣವನ್ನು ಕೆಡವಲು ನಾವು ಬಿಡುವುದಿಲ್ಲ. ಈ ಆಶಯವನ್ನು ವಿವಿ ಆವರಣದಲ್ಲಿ ಕಾಪಾಡುವುದು ಘಳಿಗೆಯ ಅವಶ್ಯಕತೆಯಾಗಿದೆ ಎಂದು ಕಲ್ಯಾಣ್‌ ಕುಮಾರ್‌ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *