ಹೊಸ ಶಿಕ್ಷಣ ನೀತಿ ಹೇರಿಕೆಯಿಂದ ಉಂಟಾಗಿರುವ ಗೊಂದಲದ ವಿರುದ್ಧ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

ಮೈಸೂರು :  ಹೊಸ ಶಿಕ್ಷಣ ನೀತಿ 2020 ನಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಆಯ್ಕೆ ವಿಷಯಗಳಾಗಿ ವಿಜ್ಞಾನ ಮತ್ತು ವಾಣಿಜ್ಯ ವಿಷಯ ಗಳನ್ನು ಕಡ್ಡಾಯ ಮಾಡಿರುವುದರ ವಿರುದ್ಧ “ಓದುವ ವಿಷಯದ ಆಯ್ಕೆ ವಿದ್ಯಾರ್ಥಿಗಳ ಹಕ್ಕಾಗಿ ಇರಬೇಕು” ಎಂದು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿ ರಿಜಿಸ್ಟ್ರಾರ್ ಮೂಲಕ ಕುಲಪತಿಗಳಿಗೆ ಮನವಿ ಸಲ್ಲಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೈಸೂರು ಜಿಲ್ಲಾ ಅಧ್ಯಕ್ಷರಾದ ಸುಭಾಷ್, “ಈಗಾಗಲೇ ಎರಡು ತಿಂಗಳು ಕಲಾವಿಭಾಗದಲ್ಲಿ ಪಾಠ ನಡೆದಿವೆ.
ನಿನ್ನೆ ವಿದ್ಯಾರ್ಥಿಗಳಿಗೆ ಸುತ್ತೋಲೆ ಹೊರಡಿಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದು ವಿದ್ಯಾರ್ಥಿಗಳ ಮೇಲೆ ಆ ಪ್ರಜಾತಾಂತ್ರಿಕವಾಗಿ ಹೇರಿಕೆ ಮಾಡುತ್ತಿರುವುದು ಖಂಡನೀಯ. ಈ ರೀತಿಯ ಅವೈಜ್ಞಾನಿಕ ಪಠ್ಯಕ್ರಮವನ್ನು ಹಿಂಪಡೆಯಬೇಕು. ಈ ಕೂಡಲೇ ವಿಶ್ವವಿದ್ಯಾಲಯ ಹಾಗೂ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿಹಣಕಾಸು ಬಂಡವಾಳದ ಅಗತ್ಯಗಳಿಗಾಗಿ ಹೊಸ ಶಿಕ್ಷಣ ನೀತಿ

ಮಾನ್ಯ ರಿಜಿಸ್ಟ್ರಾರ್ ಶಿವಪ್ಪ ಅವರು ಎರಡು ದಿವಸ ಕಾಲಾವಕಾಶ ಕೊಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.ವಿದ್ಯಾರ್ಥಿಗಳು ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡಲು ಸಜ್ಜಾಗಬೇಕು ಎಂದು AIDSO ಕರೆ ನೀಡುತ್ತದೆ. ಹೋರಾಟದಲ್ಲಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಉಪಾಧ್ಯಕ್ಷರಾದ ಆಸಿಯಾ ಬೇಗಂ, ಪದಾಧಿಕಾರಿಗಳಾದ ನಿತಿನ್, ಚೆಲುವನ್ ಹಾಗೂ ವಿದ್ಯಾರ್ಥಿಗಳಾದ ಸಿದ್ದರಾಜು, ತೇಜಸ್, ಬಸವ, ಶಶಾಂಕ್ ಪ್ರಕಾಶ್ ಸುರೇಶ ದರ್ಶನ್ ಮಹೇಶ್ ಮನೋಜ್ ಮುಂತಾದವರು ಪಾಲ್ಗೊಂಡಿದ್ದರು.

 

 

Donate Janashakthi Media

Leave a Reply

Your email address will not be published. Required fields are marked *