ಗುಜರಾತ : ಅಹಮದಾಬಾದ್ ಜಿಲ್ಲೆಯ ಬಾಗೋದರ್ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ಐದು ಶವಗಳು ಪತ್ತೆಯಾಗಿವೆ. ಭಾನುವಾರ ಜುಲೈ 20 ರಂದು ಬೆಳಿಗ್ಗೆ ಆಟೋರಿಕ್ಷಾ ಚಾಲಕ, ಆತನ ಪತ್ನಿ ಮತ್ತು ಮೂವರು ಅಪ್ರಾಪ್ತ ಮಕ್ಕಳ ಶವಗಳು ಅವರ ಬಾಡಿಗೆ ಮನೆಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಹಮದಾಬಾದ್
ಬಲಿಯಾದವರನ್ನು ವಿಪುಲ್ ವಘೇಲಾ (32), ಅವರ ಪತ್ನಿ ಸೋನಾಲ್ (26), ಮತ್ತು ಅವರ ಮಕ್ಕಳಾದ ಕರೀನಾ (11), ಮಯೂರ್ (8) ಮತ್ತು ಪ್ರಿನ್ಸೆಸ್ (5) ಎಂದು ಗುರುತಿಸಲಾಗಿದೆ ಎಂದು ಬಗೋದರ್ ಪೊಲೀಸರು ತಿಳಿಸಿದ್ದಾರೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಅಹಮದಾಬಾದ್ ನ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ಜಾಟ್ ಹೇಳಿದ್ದಾರೆ.
ಇದನ್ನೂ ಓದಿ : ಚುನಾವಣಾ ಪ್ರಜಾಪ್ರಭುತ್ವದ ಭವಿಷ್ಯದ ಮೇಲೆ ಕರಾಳ ಮೋಡಗಳು ಅಹಮದಾಬಾದ್
“ಪ್ರಾಥಮಿಕವಾಗಿ, ಕುಟುಂಬ ಸದಸ್ಯರು ವಿಷಕಾರಿ ವಸ್ತು ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ತೋರುತ್ತದೆ. ಸಾವಿಗೆ ಕಾರಣವಾದ ನಿಖರವಾದ ಸಂದರ್ಭಗಳು ತನಿಖೆಯಲ್ಲಿವೆ” ಎಂದು ಅವರು ಹೇಳಿದರು. ಸಾವುಗಳು ಪೋಷಕರಲ್ಲಿ ಒಬ್ಬರು ಅಥವಾ ಇಬ್ಬರೂ ಉದ್ದೇಶಪೂರ್ವಕ ಕ್ರಮದಿಂದಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಘೇಲಾ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೋಲಿಸರು ತಿಳಿಸಿದರು.
ಇದನ್ನೂ ನೋಡಿ : ಬಿಹಾರ ಚುನಾವಣೇ | “ವಿಶೇಷ ತೀವ್ರ ಪರಿಷ್ಕರಣೆ”ಎನ್‌ಡಿಎ ಕೂಟದ ಹೊಸ ನಾಟಕ Janashakthi Media
