ದೆಹಲಿ| 7 ವರ್ಷಗಳ ನಂತರ ಗೆದ್ದು ಬೀಗಿದ ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಘಟಕ

ನವದೆಹಲಿ: ಕಾಂಗ್ರೆಸ್ ಬೆಂಬಲಿತ ನ್ಯಾಷನಲ್ ಸ್ಟೂಡೆಂಟ್ಸ್ ಯೂವಿಯನ್ ಆಫ್ ಇಂಡಿಯಾ(NSUI) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಏಳು ವರ್ಷಗಳ ನಂತರ ಗೆದ್ದು ಬೀಗಿದ್ದು, ಅಧ್ಯಕ್ಷ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಗಳನ್ನು ಪಡೆದುಕೊಂಡಿದೆ.

ಅಧ್ಯಕ್ಷೀಯ ರೇಸ್‌ನಲ್ಲಿ ಎನ್‌ಎಸ್‌ಯುಐನ ರೌನಕ್ ಖತ್ರಿ ಅವರು ಆರ್‌ಎಸ್‌ಎಸ್ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಅಭ್ಯರ್ಥಿ ರಿಷಭ್ ಚೌಧರಿ ಅವರನ್ನು 1,300 ಮತಗಳಿಂದ ಸೋಲಿಸಿದ್ದಾರೆ. ಖತ್ರಿ 20,207 ಮತಗಳನ್ನು ಪಡೆದರೆ, ಚೌಧರಿ 18,864 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

ಇದನ್ನೂ ಓದಿ: ಸಂವಿಧಾನ ದಿನಾಚರಣೆ: ಕಾಂಗ್ರೆಸ್‌ ಸರ್ಕಾರವು ಸಂವಿಧಾನದ ಅಸ್ತ್ರದ ಮೂಲಕ ಎಲ್ಲಾ ಪ್ರತಿರೋಧಗಳನ್ನು ಎದುರಿಸಿ ಮುನ್ನಡೆಯಲಿದೆ- ಸಿಎಂ ಸಿದ್ದಾರಾಮಯ್ಯ

ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಸಂಭ್ರಮಾಚರಣೆ ನಡೆದಿದ್ದು, ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ಘೋಷಣೆಗಳನ್ನು ಕೂಗುತ್ತಾ, ತಮ್ಮ ನಾಯಕರನ್ನು ಹುರಿದುಂಬಿಸಿದರು. ಎನ್‌ಎಸ್‌ಯುಐ ಎರಡು ಪ್ರಮುಖ ಹುದ್ದೆಗಳನ್ನು ಗೆದ್ದುಕೊಂಡರೆ, ಎಬಿವಿಪಿ ಉಪಾಧ್ಯಕ್ಷ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಮತ್ತು ಕಾರ್ಯದರ್ಶಿ ಸ್ಥಾನವನ್ನು ಉಳಿಸಿಕೊಂಡಿದೆ.

ಎಬಿವಿಪಿಯ ಉಪಾಧ್ಯಕ್ಷ ಅಭ್ಯರ್ಥಿ ಭಾನು ಪ್ರತಾಪ್ ಸಿಂಗ್ 24,166 ಮತಗಳನ್ನು ಪಡೆದರೆ, ಎನ್‌ಎಸ್‌ಯುಐನ ಯಶ್ ನಂದಲ್ ಅವರು 15,404 ಮತಗಳನ್ನು ಪಡೆಯುವ ಮೂಲಕ ಸೋಲಪ್ಪಿಕೊಂಡರು.

ಇದನ್ನೂ ನೋಡಿ: ವಚನಾನುಭವ 20 | ಕಾಣದ ಠಾವಿನಲ್ಲಿ | ಮನುಷ್ಯನೊಳಗಿನ ಕಲ್ಮಷ ತೊಳೆದ ಬಸವಣ್ಣ – ಮೀನಾಕ್ಷಿ ಬಾಳಿ Janashakthi Media

Donate Janashakthi Media

Leave a Reply

Your email address will not be published. Required fields are marked *