ಚೈತ್ರಾ ಕುಂದಾಪುರ ಗ್ಯಾಂಗ್​ನ ಪ್ರಮುಖ ಆರೋಪಿ ಹಾಲಶ್ರೀ ಬಂಧನ

ಬೆಂಗಳೂರು: ಕರ್ನಾಟಕದಲ್ಲಿ ಬಹುದೊಡ್ಡ ಸಂಚಲನ ಮೂಡಿಸಿದ್ದ  ಎಂಎಲ್​ಎ ಟಿಕೆಟ್​ ಕೊಡಿಸುವುದಾಗಿ, ಗೋವಿಂದ್ ಬಾಬು ಪೂಜಾರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಇದೀಗ ಪ್ರಮುಖ ಆರೋಪಿ ಹಾಲಶ್ರೀ ಬಂಧನವಾಗಿದೆ. ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಪ್ರಕರಣದ ಮೂರನೇ ಆರೋಪಿಯಾಗಿದ್ದ ವಿಜಯನಗರ ಜಿಲ್ಲೆಯ ಹಡಗಲಿ ಅಭಿನವ ಹಾಲಶ್ರೀಯನ್ನು ಇಂದು ಒಡಿಶಾದ ಕಟಕ್​ನಲ್ಲಿ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಂದಾಪುರ 

ಕಟಕ್ ಬಳಿ ರೈಲಿನಲ್ಲಿ ಭುವನೇಶ್ವರದಿಂದ ಬೋಧ್​ಗಯಾಗೆ ತೆರಳುತ್ತಿದ್ದ ವೇಳೆ ಹಾಲಶ್ರೀಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ, ಒಡಿಶಾ ಪೊಲೀಸರ ಸಹಕಾರದಿಂದ ಹಾಲಶ್ರೀಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಸೆ-19 ರಾತ್ರಿ ಬೆಂಗಳೂರಿಗೆ ಕರೆತರಲಿದ್ದಾರೆ. ಇನ್ನು ಚೈತ್ರಾ ಕುಂದಾಪುರ ಹೇಳಿದಂತೆ ವಿಚಾರಣೆ ವೇಳೆ ಸ್ವಾಮೀಜಿ ದೊಡ್ಡ ದೊಡ್ಡವರ ಹೆಸರು ಹೊರ ಬರಲಿದ್ಯಾ ಅನ್ನೋ ಕುತೂಹಲ ಎಲ್ಲೆಡೆ ಮನೆ ಮಾಡಿದೆ.

ಇದನ್ನೂ ಓದಿ:ಎಂಎಲ್‌ಎ ಟಿಕೆಟ್ ಕೊಡಿಸೋದಾಗಿ 7 ಕೋಟಿ ರೂಪಾಯಿ ವಂಚನೆ, ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ

ಚೈತ್ರಾ ಕುಂದಾಪುರ ಬಿಜೆಪಿ ಎಂಎಲ್‌ಎ ಟಿಕೆಟ್‌ ಕೊಡಿಸುತ್ತೇನೆ ಎಂದು ಗೋವಿಂದ್‌ ಬಾಬು ಪೂಜಾರಿ ಎನ್ನುವರಿಗೆ 5 ಕೋಟಿ ರೂಪಾಯಿ ವಂಚನೆ ಮಾಡಿದ್ದಳು. ಇದೇ ಪ್ರಕರಣಕ್ಕೆ ಸಂಬಂಧ ಪಟ್ಟಹಾಗೆ ಚೈತ್ರಾ ಈಗ ಕಂಬಿ ಎಣಿಸುತ್ತಿದ್ದಾಳೆ. ಸದ್ಯ ಸಿಸಿಬಿ ವಶದಲ್ಲಿರುವ ಚೈತ್ರ ಮಾಧ್ಯಮಗಳ ಮುಂದೆ ಸ್ವಾಮೀಜಿ ಅರೆಸ್ಟ್ ಆಗ್ಲಿ, ಅವರು ಅರೆಸ್ಟ್‌ ಆದ್ರೆ ದೊಡ್ಡವರ ಹೆಸರು ಬಯಲಾಗುತ್ತೆ ಅಂತ ಹೊಸ ಟ್ವಿಸ್ಟ್‌ ಕೊಟ್ಟಿದ್ದಳು. ಈ ಹಿನ್ನೆಲೆಯಲ್ಲಿ MLA ಟಿಕೆಟ್ ಡೀಲಿಂಗ್ ಹಿಂದೆ ಇರೋ ಆ ದೊಡ್ಡವರು ಯಾರು ಅನ್ನೋ ಕುತೂಹಲ ಎಲ್ಲೆಡೆ ಮನೆ ಮಾಡೋದಕ್ಕೆ ಶುರುವಾಗಿದೆ.

ಇನ್ನು ಇದೇ ಪ್ರಕರಣದಲ್ಲಿ ಎ3 ಆರೋಪಿಯಾಗಿರುವ ಹಗಡಲಿ ತಾಲೂಕಿನ ಹಿರೇಹಡಗಲಿ ಹಾಲು ಮಠ ಅಭಿನವ ಹಾಲಶ್ರೀ ಅಜ್ಞಾತ ತಲೆ ಮರೆಸಿಕೊಂಡಿದ್ದರು.  ಮಠಕ್ಕೂ ಬಾರದ ಸ್ವಾಮೀಜಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ದೂರುದಾರ ಗೋವಿಂದ್ ಪೂಜಾರಿಯಿಂದ ಒಂದೂವರೆ ಕೋಟಿ ಪಡೆದಿದ್ದ ಸ್ವಾಮೀಜಿ ಇದೀಗ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ದು, ಇಂದು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.

 

ವಿಡಿಯೋ ನೋಡಿ:ಹಿಂದುತ್ವ ರಾಜಕಾರಣ : ಸಿದ್ದಾಂತದ ವ್ಯವಹಾರಕ್ಕೆ ಹಿಂದುಳಿದ ವರ್ಗವೇ ಟಾರ್ಗೆಟ್ ! Janashakthi Media

Donate Janashakthi Media

Leave a Reply

Your email address will not be published. Required fields are marked *