ಆಕಸ್ಮಿಕ ಗುಂಡಿನ ದಾಳಿ: ಯೋಧನೋರ್ವ ಮೃತ, ಇಬ್ಬರು ಗಾಯಾಳು

ಛತ್ತೀಸ್‌ಗಢ : ಛತ್ತೀಸ್‌ಗಢದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಯೋಧನೋರ್ವ ಮೃತಪಟ್ಟಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ಛತ್ತೀಸ್‌ಗಡ್‌ನಲ್ಲಿ ಆದ ವರದಿಯನ್ವಯ ನಕ್ಸಲ್ ಪೀಡಿತ ನಾರಾಯಣಪುರ ಜಿಲ್ಲೆಯ ಗಡಿ ಪ್ರದೇಶದಲ್ಲಿ ಬುಧವಾರ ನಡೆದ ಆಕಸ್ಮಿಕ ಗುಂಡಿನ ದಾಳಿಯಲ್ಲಿ ಯೋಧ ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿರುವ ಬಗ್ಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ ರಾತ್ರಿ ಡಿಆರ್‌ಜಿ ದಾಂತೇವಾಡ ತಂಡ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ದಂತೇವಾಡ ಜಿಲ್ಲೆಯ ಬಾರ್ಸೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಂದವಾಡ, ಹಿತವಾಡ ಪ್ರದೇಶದಲ್ಲಿ ನಕ್ಸಲರು ಇರುವ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಪಡೆದ ಬಳಿಕ ಭದ್ರತಾ ಪಡೆಗಳು, ವಿಶೇಷ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಡಿಆರ್‌ಜಿ ಮತ್ತು ಬಸ್ತಾರ್ ಫೈಟರ್ಸ್ ದಾಂತೇವಾಡದ ಜಂಟಿ ತಂಡವು ದಾಂತೇವಾಡ ಮತ್ತು ನಾರಾಯಣಪುರ ಗಡಿ ಪ್ರದೇಶದಲ್ಲಿ ನಕ್ಸಲ್ ಗಸ್ತು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿತ್ತು, ಈ ಶೋಧ ಕಾರ್ಯದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ್ದು, ದಾಂತೇವಾಡದ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ : ಬಿಜೆಪಿ ಪ್ರಣಾಳಿಕೆಯಲ್ಲಿ ಶಾಲಾ ಶಿಕ್ಷಣದ ಬಲವರ್ಧನೆಯ ಗ್ಯಾರಂಟಿ ಶೂನ್ಯ; ಬಸವರಾಜ ಗುರಿಕಾರ

ನಕ್ಸಲೀಯರ ವಿರುದ್ಧದ ಶೋಧ ಕಾರ್ಯಾಚರಣೆ ವೇಳೆ ಆಕಸ್ಮಿಕ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಯೋಧರಿಬ್ಬರನ್ನು ರಕ್ಷಿಸಲಾಗಿದೆ. ಇದೇ ವೇಳೆ ತೀವ್ರ ರಕ್ತಸ್ರಾವದಿಂದ ಗಾಯಗೊಂಡ ಕಾನ್ ಸ್ಟೇಬಲ್ ಜೋಗರಾಜ್ ಕರ್ಮ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ಇತರ ಕಾನ್‌ಸ್ಟೆಬಲ್ ಪರಶುರಾಮ್ ಅಲಾಮಿ ಅವರಿಗೆ ತಕ್ಷಣದ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಯ್‌ಪುರಕ್ಕೆ ವಿಮಾನದ ಮೂಲಕ ಅವರನ್ನು ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಸ್ತಾರ್ ಲೋಕಸಭಾ ಚುನಾವಣೆಯ ದಿನವಾದ ಏಪ್ರಿಲ್ 19 ರಂದು ಬಿಜಾಪುರದಲ್ಲಿ ಕರ್ತವ್ಯದಲ್ಲಿದ್ದಾಗ ಅವರ ಯುಬಿಜಿಎಲ್ ಸ್ಫೋಟಗೊಂಡು ಸಿಆರ್‌ಪಿಎಫ್ ಜವಾನ ಗಾಯಗೊಂಡು ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಯೋಧ ಮೃತಪಟ್ಟಿರುವುದು ಇಲ್ಲಿ ಉಲ್ಲೇಖನೀಯ. ಮೃತ ಯೋಧನನ್ನು ದೇವೇಂದ್ರ ಕುಮಾರ್ ಎಂದು ಗುರುತಿಸಲಾಗಿದ್ದು, ಸಿಆರ್‌ಪಿಎಫ್‌ನ ಡಿ/196 ಕಂಪನಿಯಲ್ಲಿ ಕಾನ್‌ಸ್ಟೆಬಲ್ ಆಗಿ ನೇಮಕಗೊಂಡಿದ್ದರು. ಘಟನೆ ನಡೆದಾಗ ಉಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಲ್ಗಾಂ ಗ್ರಾಮದ ಬಳಿಯ ಮತಗಟ್ಟೆ ಬಳಿ ಕರ್ತವ್ಯ ನಿರತರಾಗಿದ್ದರು.

ಇದನ್ನು ನೋಡಿ : ಪ್ರಧಾನಿ ಮೋದಿ ಭ್ರಷ್ಟಾಚಾರದ ಚಕ್ರವರ್ತಿ – ಕೆ. ವಿ.ನಾಗರಾಜ ಮೂರ್ತಿ Janashakthi Media

Donate Janashakthi Media

Leave a Reply

Your email address will not be published. Required fields are marked *