ಚಪ್ಪಲಿ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ : 5 ಕೋಟಿ ರೂ ನಷ್ಟ

ಬೆಂಗಳೂರು: ಚಪ್ಪಲಿ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ ಕೋಟ್ಯಾಂತರ ಮೌಲ್ಯದ ಪಾದರಕ್ಷೆಗಳು ಸುಟ್ಟು ಕರಕಲಾಗಿರುವ ಘಟನೆ ಕೆಂಗೇರಿಯಲ್ಲಿ ನಡೆದಿದೆ. ಸೆ-15ರಂದು  ಗೋದಾಮು ಬಳಿಯ ವಿದ್ಯುತ್‌ ಕಂಬಕ್ಕೆ ಕ್ಯಾಂಟರ್‌ ಡಿಕ್ಕಿ ಹೊಡೆದು ಅದರಿಂದ ವಿದ್ಯುತ್‌ ಗೋದಾಮಿಗೆ ತಗುಲಿ 5 ಕೋಟಿ ರೂ. ಅಧಿಕ ಮೌಲ್ಯದ ಶೂಗಳು ಹಾಗೂ ಚಪ್ಪಲಿಗಳು ಸುಟ್ಟು ಭಸ್ಮವಾಗಿವೆ ಎಂದು ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ:ಬೆಂಗಳೂರಿನ ದೇವರಚಿಕ್ಕನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ ; ಹೊತ್ತಿ ಉರಿದ ಫ್ಲ್ಯಾಟ್‌

ಉತ್ತರಹಳ್ಳಿ ನಿವಾಸಿ ಶ್ರೀನಿವಾಸ್‌ ಎಂಬುವವರಿಗೆ ಸೇರಿದ ಎ.ಎಸ್‌. ಆರ್‌.ಮಾರ್ಕೆಟಿಂಗ್ ಎಂಬ ಹೆಸರಿನ ಗೋದಾಮಿಗೆ ಸಂಪರ್ಕಿಸಿದ್ದ ವಿದ್ಯುತ್‌ ತಂತಿಯಿಂದ ಶಾರ್ಟ್‌ಸರ್ಕ್ಯೂಟ್‌ ಉಂಟಾಗಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಗ್ನಿ ಅವಘಡದಿಂದ ಗೋದಾಮಿನಲ್ಲಿದ್ದ ಅಪಾರ ಮೌಲ್ಯ ಶೂ,ಚಪ್ಪಲಿಗಳನ್ನು ಶ್ರೀನಿವಾಸ್‌ ಅವರು ವಿತರಣೆ ಮಾಡುತ್ತಿದ್ದರು ಎನ್ನಲಾಗಿದೆ.

ನಗರದ ಬಹುತೇಕ ಅಂಗಡಿಗಳಿಗೆ ಶೂ,ಚಪ್ಪಲಿಗಳು ಈ ಗೋದಾಮಿನಿಂದಲೇ ಪೂರೈಕೆ ಆಗುತ್ತಿದ್ದವು. ಹೀಗಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಪ್ಪಲಿ ಶೂಗಳನ್ನು ಇಲ್ಲಿ ಶೇಖರಿಸಿ ಇಡಲಾಗಿತ್ತು. ಗೋದಾಮಿನಲ್ಲಿ 100ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದರು. ಆದರೆ ಅಗ್ನಿ ಅವಘಡದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಏಳಕ್ಕೂ ಹೆಚ್ಚು ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ಆಗಮಿಸಿ ಮುಂಜಾನೆಯವರೆಗೆ ಶ್ರಮಿಸಿ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಗಿದೆ.

ಗೋದಾಮಿನ ಸ್ಥಿತಿ ಕಂಡು ಮಾಲೀಕ ಶ್ರೀನಿವಾಸ್‌ ಕಣ್ಣೀರು ಹಾಕಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿದ ಕೆಂಗೇರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಗ್ನಿ ಅವಘಡ

ವಿಡಿಯೋ ನೋಡಿ:ನಾವು ನಿತ್ಯ ಬಳಸುವ ಬೆಂಕಿ ಕಡ್ಡಿ ತಯಾರಾಗುವುದು ಹೇಗೆ ಗೊತ್ತಾ? Janashakthi Media

Donate Janashakthi Media

Leave a Reply

Your email address will not be published. Required fields are marked *