ಬಿಎಂಟಿಸಿ ನೌಕರರಿಗೂ 1 ಕೋಟಿ ರೂ ಅಪಘಾತ ವಿಮೆ: ರಾಮಲಿಂಗ ರೆಡ್ಡಿ

ಬೆಂಗಳೂರು: ಬಿಎಂಟಿಸಿ ನೌಕರರು 1 ಕೋಟಿ ರೂ.ವರೆಗಿನ ಅಪಘಾತ ವಿಮೆಗೆ ಅರ್ಹರಾಗಿರುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.  ನೌಕರರಿಗೂ 

ಸೋಮವಾರ ನಡೆದ ಬಿಎಂಟಿಸಿ ರಜತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ನೌಕರರಿಗೆ ಲಭ್ಯವಿರುವ ಒಂದು ಕೋಟಿ ಅಪಘಾತ ವಿಮೆಯನ್ನು ಈಗ ಬಿಎಂಟಿಸಿ ನೌಕರರಿಗೂ ವಿಸ್ತರಿಸಲಾಗುವುದು. ಬಿಎಂಟಿಸಿ ಉದ್ಯೋಗಿಯೊಬ್ಬರು ಸಾವನ್ನಪ್ಪಿದರೆ, ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಅಪಘಾತ ವಿಮಾ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ:ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ – ಪ್ರತಿಭಟನೆಕಾರರ ಬಂಧನ, ಸೆಕ್ಷನ್ 144 ಜಾರಿ

ಬಿಎಂಟಿಸಿ ನೌಕರರಿಗೆ 50 ಲಕ್ಷ ವಿಮೆ ಇದೆ. ಅದನ್ನು 1 ಕೋಟಿಗೆ ಏರಿಸಲು ವ್ಯವಸ್ಥಾಪಕ ನಿದೇರ್ಶಕರಿಗೆ ಸೂಚನೆ ನೀಡಿದ್ದೇನೆ.ಅನುಕಂಪದ ಆಧಾರದ ಮೇಲೆ ಅಪಘಾತದಿಂದ ಸಾವನ್ನಪ್ಪುವ ನೌಕರರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಲಾಗುವುದು.ತಾಂತ್ರಿಕ ಕಾರಣಗಳಿಂದ 8 ವರ್ಷಗಳಿಂದ ಉದ್ಯೋಗಗಳನ್ನು ಒದಗಿಸಲಾಗಿಲ್ಲ. ಕೂಡಲೇ ಹಂತಹಂತವಾಗಿ ಕುಟುಂಬ ಸದಸ್ಯರಿಗೆ ನೇಮಕಾತಿ ಆದೇಶ ನೀಡುವಂತೆ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಅವರಿಗೆ ಆದೇಶ ನೀಡಿದ್ದೇನೆ ಎಂದು ತಿಳಿಸಿದರು.

ವಿಡಿಯೋ ನೋಡಿ:ನಾವು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಎದೆ ತಟ್ಟಿಕೊಳ್ಳಬಹುದೆ? ಡಾ. ರಹಮತ್ ತರೀಕೆರೆ ವಿಶ್ಲೇಷಣೆಯಲ್ಲಿ

Donate Janashakthi Media

Leave a Reply

Your email address will not be published. Required fields are marked *