ಉಡುಪಿ: ನಜ್ಜುಗುಜ್ಜಾದ ಹೊಸ ಫಾರ್ಚೂನ‌ರ್ ಕಾರು

ಉಡುಪಿ: ಹೊಸ ಫಾರ್ಚೂನರ್ ಕಾರನ್ನು ಕುಂದಾಪುರ ಶೋರೂಂನಿಂದ ಮಂಗಳೂರು ಶೋರೂಂನತ್ತ ಓಡಿಸಿಕೊಂಡು ಹೋಗುತ್ತಿದ್ದಾಗ ನಿಲ್ಲಿಸಿದ ಬಸ್ ಗೆ ಡಿಕ್ಕಿ ಹೊಡೆದ ಘಟನೆ ಉಡುಪಿಯ ನಿಟ್ಟೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದೆ.ಅಪಘಾತ

ಢಿಕ್ಕಿ ಹೊಡೆದ ರಭಸಕ್ಕೆ ಹೊಚ್ಚ ಹೊಸ ಫಾರ್ಚೂನ‌ರ್ ಕಾರು ನಜ್ಜುಗುಜ್ಜಾಗಿದೆ. ಕಾರನ್ನು ಕುಂದಾಪುರ ಶೋರೂಂ ನಿಂದ ಮಂಗಳೂರು ಶೋರೂಂ ಗೆ ಚಾಲಕ ಕೊಂಡೊಯ್ಯುತ್ತಿದ್ದ. ಉಡುಪಿ ಸಮೀಪದ ನಿಟ್ಟೂರು ಬಳಿ ಹೋಗುತ್ತಿದ್ದಂತೆ ಕಾರು ಚಾಲಕನ ನಿರ್ಲಕ್ಷ್ಯದಿಂದ ರಸ್ತೆ ಬದಿ ಪ್ರಯಾಣಿಕರನ್ನು ಹತ್ತಿಸಲು ನಿಲ್ಲಿಸಿದ್ದ ಬಸ್ ಗೆ ಢಿಕ್ಕಿ ಹೊಡೆದಿದೆ.

ಇದನ್ನು ಓದಿ : ನಕಲಿ ಕ್ಲಿನಿಕ್ ವೈದ್ಯನಿಗೆ ಬೀಗ ಜಡಿದ ಆರೋಗ್ಯ ಇಲಾಖೆ

ಘಟನೆ ಬಳಿಕ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ವಿಷಯ ತಿಳಿದು ಕಾರು ಶೋರೂಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಸಂಚಾರ ಠಾಣೆಯ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನು ನೋಡಿ : 100 ರೂಪಾಯಿ ಘನತ್ಯಾಜ್ಯ ಸೇವಾ ಶುಲ್ಕ : ಕಸ ಮಾಫಿಯಾದ ಕೈವಾಡ Janashakthi Media

Donate Janashakthi Media

Leave a Reply

Your email address will not be published. Required fields are marked *