ಬೆಂಗಳೂರು: ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 9 ಜನ ಅಧಿಕಾರಿಗಳ ಕಛೇರಿ ಹಾಗೂ ಮನೆ ಸೇರಿದಂತೆ ವಿವಿದೆಡೆ ಏಕಕಾಲದಲ್ಲಿ ಧಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಅಕ್ರಮವಾಗಿ ಕೋಟಿಗಟ್ಟಲೆ ಸಂಪಾದಿಸಿರುವ ಆಸ್ತಿಪಾಸ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.
ಎಸಿಬಿ ಧಾಳಿ ನಡೆಸಿದ ಅಧಿಕಾರಿಗಳ ವಿವರ :
- ಚಿಕ್ಕಬಳ್ಳಾಪುರ : ಕೃಷ್ಣೇಗೌಡ, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ
- ಬೆಳಗಾವಿ ವಿಭಾಗ : ಹನುಮಂತ ಶಿವಪ್ಪ ಚಿಕ್ಕನವರ್, ಉಪ ಮುಖ್ಯ ವಿದ್ಯುತ್ ನಿರೀಕ್ಷಕ
- ಮೈಸೂರು : ಸುಬ್ರಹ್ಮಣ್ಯ ವಿ.ವದಾರ್, ಜಂಟಿ ನಿರ್ದೇಶಕರು, ಪಟ್ಟಣ ಮತ್ತು ದೇಶ ಯೋಜನೆ
- ಮೈಸೂರು : ಮುನಿಗೋಪಾಲ್ ರಾಜ್, ಅಧೀಕ್ಷಕ ಎಂಜಿನೀಯರ್, ಚೆಸ್ಕಾಂ
- ಮೈಸೂರು : ಚನ್ನವೀರಪ್ಪ, ಪ್ರಥಮ ದರ್ಜೆ ಸಹಾಯಕರು ಆರ್ ಟಿಒ
- ಯಾದಗಿರಿ : ರಾಜು ಪತಾರ್, ಲೆಕ್ಕಾಕಾರಿ, ಜಿಸ್ಕಾಂ
- ಬೆಂಗಳೂರು : ವಿಕ್ಟರ್ ಸಿಮನ್, ಪೊಲೀಸ್ ಇನ್ಸ್‌ಪೆಕ್ಟರ್, ಬಿಎಂಟಿಎಫ್
- ಬೆಂಗಳೂರು ಯಲಹಂಕ ವ್ಯಾಪ್ತಿ : ಕೆ.ಸುಬ್ರಹ್ಮಣ್ಯಂ, ಕಿರಿಯ ಇಂಜಿನಿಯರ್, ನಗರ ಯೋಜನಾ ಕಚೇರಿ, ಬಿಬಿಎಂಪಿ
- ದಾವಣಗೆರೆ : ಕೆ.ಎಂ.ಪ್ರಥಮ್, ಉಪನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ಸ್
ಮೈಸೂರಿನಲ್ಲಿ ಮೂರು ಜನ, ಬೆಳಗಾವಿ, ಚಿಕ್ಕಬಳ್ಳಾಪುರ, ಯಾದಗಿರಿ, ಬೆಂಗಳೂರು, ಯಲಹಂಕ, ದಾವಣಗೆರೆಯಲ್ಲಿ ತಲಾ ಒಬ್ಬೊಬ್ಬ ಅಧಿಕಾರಿಗಳ ಮೇಲೆ ಧಾಳಿ ನಡೆಸಲಾಗಿದೆ.
ಅಧಿಕಾರಿಗಳ ಬಳಿ ಇದ್ದ ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಒಳಗೊಂಡು ಭೂಮಿ-ನಿವೇಶನ, ದುಬಾರಿ ಬೆಲೆಯ ವಸ್ತುಗಳು ಮತ್ತು ಐಷಾರಾಮಿ ಬಂಗಲೆಗಳ ಹಲವಾರು ದಾಖಲೆಗಳನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ಅವುಗಳನ್ನು ಜಪ್ತಿ ಮಾಡಿದ್ದಾರೆ.
ಕೆಲವು ಅಧಿಕಾರಿಗಳಂತೂ ಐಷಾರಾಮಿ ಬಂಗಲೆಗಳನ್ನು ಖರೀದಿಸಿ ವೈಭೋಗದ ಜೀವನ ನಡೆಸುತ್ತಿರುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳಿಗೆ ಆಶ್ಚರ್ಯಗೊಳ್ಳುವಂತೆ ಮಾಡಿದೆ.
ಈ ಕಾರ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ 52 ಅಧಿಕಾರಿಗಳು ಮತ್ತು 174 ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದರು.
ಧಾಳಿ ನಡೆಸಿದ ಅಧಿಕಾರಿಗಳು
- ಕೃಷ್ಣೇಗೌಡ ನಿವಾಸಕ್ಕೆ ಎಸ್.ಪಿ. ಕಲಾ ಕೃಷ್ಣಮೂರ್ತಿ ತಂಡ ಧಾಳಿ ನಡೆಸಿತು.
- ಹನುಮಂತ ಶಿವಪ್ಪ ಚಿಕ್ಕನವರ್ ಮನೆಗಳ ಮೇಲೆ ಎಸ್.ಪಿ. ನ್ಯಾಮೇಗೌಡ ತಂಡ ಧಾಳಿ ನಡೆಸಿತು.
- ಸುಬ್ರಹ್ಮಣ್ಯ ವಿ. ವಡ್ಡರ್ ಅವರಿಗೆ ಸೇರಿದ ಮೈಸೂರು, ಉಡುಪಿ ಹಾಗೂ ಕಾರವಾರ ಸ್ಥಳಗಳಲ್ಲಿ ಏಕಕಾಲಕ್ಕೆ ಧಾಳಿ ನಡೆಸಿದೆ. ದಕ್ಷಿಣ ವಲಯದ ಎಸ್.ಪಿ.ಬೋಪಯ್ಯ ತಂಡ ಧಾಳಿ ನಡೆಸಿತು.
- ಚನ್ನವೀರಪ್ಪ ನಿವಾಸ ಹಾಗೂ ಆಲಕೆರೆ ಗ್ರಾಮದ ಸ್ವಂತ ನಿವಾಸದ ಮೇಲೆ ಎಸ್.ಪಿ. ಅರುಣಾಂಗೋಸ್ ಮತ್ತು ಡಿವೈಎಸ್‌ಪಿ ತಂಡ ಧಾಳಿ ನಡೆಸಿದೆ.
- ಮುನಿಗೋಪಾಲ್ ರಾಜು ನಿವಾಸ ಮೇಲೆ ಎಸ್.ಪಿ. ಅರುಣಗಲುಗಿರಿ ತಂಡ ಧಾಳಿ ನಡೆಸಿದೆ.
- ರಾಜು ಪತಾರ್ ನಿವಾಸ ಹಾಗೂ ಕಚೇರಿಗಳ ಮೇಲೆ ಎಸ್‌ಪಿ ಮಹೇಶ್ ತಂಡ ಧಾಳಿ ನಡೆಸಿದೆ.
- ಕೆ.ಎಂ.ಪ್ರಥಮ್ ನಿವಾಸ, ಕಛೇರಿ ಮತ್ತು ಕುಟುಂಬಸ್ಥರ ಸ್ಥಳದ ಮೇಲೆ ಎಸ್.ಪಿ. ಜಯಪ್ರಕಾಶ್ ತಂಡ ಧಾಳಿ ನಡೆಸಿದೆ.
- ಕೆ.ಸುಬ್ರಹ್ಮಣ್ಯಂ ನಿವಾಸ ಹಾಗೂ ಕಛೇರಿಗಳ ಮೇಲೆ ಎಸ್‌ಪಿ ಕುಲ್‌ದೀಪ್‌ಕುಮಾರ್ ಜೈನ್ ತಂಡ ಧಾಳಿ ನಡೆಸಿದೆ.
ಭ್ರಷ್ಟಾಚಾರದಲ್ಲಿ ಸಿಲುಕಿದವರ ಮೇಲೆ ಬೆಳ್ಳಂಬೆಳಗೆ ಧಾಳಿ ನಡೆಸಿದ ಅಧಿಕಾರಿ ಮಧ್ಯಾಹ್ನದ ನಂತರವು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಹಲವು ದಾಖಲೆ ಪತ್ರಗಳನ್ನು ಕುಲಂಕೂಷವಾಗಿ ಪರಿಶೀಲನೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.