ಹಲ್ಲೆಗೊಳಗಾದ ಗ್ರಾ.ಪಂ ಚುನಾವಣಾ ಅಭ್ಯರ್ಥಿ ಮನೆಗೆ DYFI ಭೇಟಿ

ಮಂಗಳೂರು :  ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಬೆಂಬಲಿತ ಗೂಂಡಾಗಳಿಂದ ದಾಳಿಗೊಳಗಾದ ಹರೇಕಳದ DYFI ಕಾರ್ಯಕರ್ತ , ಗ್ರಾಮ ಪಂಚಾಯಿತಿ ಚುನಾವಣೆಯ ಅಭ್ಯರ್ಥಿ ಮಹಮ್ಮದ್ ಇಕ್ಬಾಲ್ ಅವರ ಮನೆಗೆ DYFI ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರ ನೇತೃತ್ವದ ನಿಯೋಗ ಇಂದು ಭೇಟಿ ನೀಡಿ ಆರೋಗ್ಯ ವಿಚಾರಿಸಿತು. ಆನಂತರ ಘಟನೆ ನಡೆದ ಫರೀದ್ ನಗರಕ್ಕೆ ಭೇಟಿ ನೀಡಿದ ನಿಯೋಗ ಅಲ್ಲಿದ್ದ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದು ಸ್ಥಳದ ಪರಿಶೀಲನೆ ನಡೆಸಿತು.

ನಿಯೋಗದಲ್ಲಿ ಜೊತೆ ದಕ ಜಿಲ್ಲಾ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್, ಪದಾಧಿಕಾರಿ ನಿತಿನ್ ಬಂಗೇರಾ ಹಾಗೂ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್, ಕಾರ್ಮಿಕ ಮುಂದಾಳು ಇಬ್ರಾಹಿಂ ಮದಕ, ಡಿವೈಎಫ್ಐ ದೇರಳಕಟ್ಟೆ ಘಟಕದ ಅಧ್ಯಕ್ಷ ನವಾಜ್ ಉರುಮಣೆ ಉಪಸ್ಥಿತರಿದ್ದರು. ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ, ಗ್ರಾಪಂ ಚುನಾವಣಾ ಅಭ್ಯರ್ಥಿಗಳಾದ ಅಶ್ರಫ್ ಹರೇಕಳ, ಅಣ್ಣಿ ಪೂಜಾರಿ, ಸಂಕಪ್ಪ, ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ನಿಜಾಮ್ ಹರೇಕಳ, ಹಿರಿಯರಾದ ಜನಾರ್ದನ ಪೂಜಾರಿ, ಉಮರಬ್ಬ, ಅಹಮ್ಮದ್, ಇಸ್ಮಾಯಿಲ್ ಮತ್ತಿತರರು ಹಾಜರಿದ್ದು ಘಟನೆ ಮತ್ತು ಅದರ ನಂತರದ ವಿವರಗಳನ್ನು ನಿಯೋಗದ ಮುಂದಿಟ್ಟರು. ಈ ನಿಯೋಗ ಸೋಮವಾರ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ಕೈಗೊಂಡು ಆರೋಪಿಯ ವಿರುದ್ಧ ಕಠಿಣ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಿದೆ.

Donate Janashakthi Media

Leave a Reply

Your email address will not be published. Required fields are marked *